ಕನ್ನಡ ಕಿರುತೆರೆ ಸೆಲೆಬ್ರಿಟಿ ಕಪಲ್ ನಟಿ ಕವಿತಾ ಗೌಡ (Kavitha Gowda) ಮತ್ತು ನಟ ಚಂದನ್ ಕುಮಾರ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ.
ಕೆಲವು ದಿನಗಳ ಹಿಂದೆ ಸಿಹಿ ಕಹಿ ಚಂದ್ರು ನಡೆಸಿಕೊಡುವ ಬೊಂಬಾ ಭೋಜನ ಕಾರ್ಯಕ್ರಮದಲ್ಲಿ ಕವಿತಾ ಗೌಡ ಆಗಮಿಸಿ ವಿಶೇಷ ಅಡುಗೆ ಸವಿದರು.
ಈ ಕಾರ್ಯಕ್ರಮ ಶುರುವಾಗುವ ಮುನ್ನ ಕವಿತಾ ಮತ್ತು ಚಂದನ್ ಸಣ್ಣ ಫೋಟೋಶೂಟ್ ಮಾಡಿಸಿದ್ದಾರೆ. ಲವ್ ಯು ಬೇಬಿ ಎಂದು ಕವಿತಾ ಬರೆದುಕೊಂಡಿದ್ದಾರೆ.
ಕವಿತಾ ಗೌಡ ಬೇಬಿ ಬಂಪ್ ಮೇಲೆ ಹಿಡಿದು ಪೋಸ್ ಕೊಟ್ಟಿರುವ ಚಂದನ್ ಫೋಟೋಗೆ 'ನೀನಿಲ್ಲದೆ ನಾನಿಲ್ಲ....ನೀನಿಲ್ಲದೆ ನಾನು ಏನು ಮಾಡುತ್ತಿದ್ದೆ ಗೊತ್ತಿಲ್ಲ' ಎಂದಿದ್ದಾರೆ ಚಿನ್ನು.
ನೀವಿಬ್ಬರು ಹೀಗೆ ನೂರು ಕಾಲ ಖುಷಿಯಾಗಿ ಇರಿ ಏನಾ ಎದುರಾದರೂ ಒಟ್ಟಿಗೆ ಇರಿ, ಮನೆಗೆ ಮಹಾ ಲಕ್ಷ್ಮಿನೇ ಬರುವುದು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಹಲವು ವರ್ಷಗಳಿಂದ ಕವಿತಾ ಗೌಡ ಮತ್ತು ಚಂದನ್ ಪ್ರೀತಿಸುತ್ತಿದ್ದು, 2021ರಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.