ನಾಗರ ಪಂಚಮಿ ದಿನ ಕನ್ನಡದಲ್ಲಿ ನೀವು ನೋಡಲೇಬೇಕಾದ ಸರ್ಪ ಸಿನಿಮಾಗಳು!

Kannda Movies On Snake ಇಂದು ನಾಗರ ಪಂಚಮಿ ಹಬ್ಬ ಮುಗಿಸಿದ್ದಾಯ್ತು. ಹುತ್ತಕ್ಕೆ ಹಾಲೆರೆದಿದ್ದು ಆಗಿರಬಹುದು. ಈಗ ಮನೆಯಲ್ಲಿ ಕುಳಿತು ರೆಸ್ಟ್‌ ಮಾಡೋ ಸಮಯ. ನಾಗರ ಪಂಚಮಿಯ ಸಂಜೆಯ ಸಮಯದಲ್ಲಿ ನೀವು ಕನ್ನಡದಲ್ಲಿ ನೋಡಲೇಬೇಕಾದ ಪ್ರಮುಖ ಸರ್ಪ ಸಿನಿಮಾಗಳ ಲಿಸ್ಟ್‌ ಇಲ್ಲಿದೆ.
 

ನಾಗಮಂಡಲ: ಬಹುಶಃ ಈ ಸಿನಿಮಾ ಇಲ್ಲದೇ ಈ ಲಿಸ್ಟ್‌ ಕಂಪ್ಲೀಟ್‌ ಆಗೋದೇ ಇಲ್ಲ. ಟಿಎಸ್‌ ನಾಗಾಭರಣ ನಿರ್ದೇಶನದ ಈ ಸಿನಿಮಾದಲ್ಲಿ ಪ್ರಕಾಶ್‌ ರಾಜ್‌ ಅವರ ಅದ್ಭುತ ನಟನೆ ನಿಮ್ಮ ಮನೆಸೆಳೆಯುತ್ತದೆ. ವಿಜಯಲಕ್ಷ್ಮೀ ಕೂಡ ಅಷ್ಟೇ ಅದ್ಭುತವಾಗಿ ನಟಿಸಿದ್ದಾರೆ. ಈ ಸಿನಿಮಾದ ಹಾಡುಗಳನ್ನು ಮೆಚ್ಚದವರೇ ಇಲ್ಲ ಎನ್ನಬಹುದು.

ನಾಗಕನ್ನಿಕಾ: 1949ರಲ್ಲಿ ಬಿಡುಗಡೆಯಾದ ಸಿನಿಮಾ ಇದು. ಜಿ.ವಿಶ್ವನಾಥನ್‌ ಈ ಸಿನಿಮಾದ ನಿರ್ದೇಶಕರು. ಎಂ. ಜಯಶ್ರೀ, ಪ್ರತಿಮಾ ದೇವಿ, ಬಿ.ರತ್ನಮಾಲಾ ನಿರ್ದೇಶನದ ಬ್ಲ್ಯಾಕ್‌ & ವೈಟ್‌ ಸಿನಿಮಾ ಇದು.
 


ನಾಗಪೂಜೆ: 1965ರಲ್ಲಿ ಡಾ.ರಾಜ್‌ಕುಮಾರ್‌ ಮುಖ್ಯಭೂಮಿಕೆಯಲ್ಲಿ ಬಿಡುಗಡೆಯಾದ ಸಿನಿಮಾ. ಡಿಎಸ್‌ ರಾಜ್‌ಗೋಪಾಲ್‌ ಇದರ ನಿರ್ದೇಶಕರು. ರಾಜ್‌ಕುಮಾರ್‌ ಅವರೊಂದಿಗೆ ಲೀಲಾವತಿ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.
 

ಬಾಲ ನಾಗಮ್ಮ: ಪಿಆರ್‌ ಕೌಂಡಿನ್ಯ ನಿರ್ದೇಶನದ ಬಾಲ ನಾಗಮ್ಮ 1966ರಲ್ಲಿ ಬಿಡುಗಡೆಯಾಗಿತ್ತು. ಡಾ. ರಾಜ್‌ ಕುಮಾರ್‌, ರಾಜಶ್ರೀ, ಉದಯಕುಮಾರ್‌, ಕಲ್ಪನಾ, ನರಸಿಂಹರಾಜು ಸಿನಿಮಾದ ಮುಖ್ಯ ಭೂಮಿಕೆಯಲ್ಲಿದ್ದರು.

ವಿಷಕನ್ಯೆ:  ಹುಣಸೂರು ಕೃಷ್ಣಮೂರ್ತಿ ಅವರ ಸಿನಿಮಾ ಇದು. 1972ರಲ್ಲಿ ರಿಲೀಸ್‌ ಆಗಿತ್ತು. ರಾಜೇಶ್‌, ಜಯಂತಿ ಹಾಗೂ ಕೆಎಸ್‌ ಅಶ್ವಥ್‌ ಮುಖ್ಯ ಭೂಮಿಕೆಯಲ್ಲಿದ್ದರು.
 

ನಾಗಕನ್ಯೆ: ಎಸ್‌ವಿ ರಾಜೇಂದ್ರ ಸಿಂಗ್‌ ಬಾಬು ನಿರ್ದೇಶನದ ಈ ಸಿನಿಮಾ 1975ರಲ್ಲಿ ಬಿಡುಗಡೆಯಾಗಿತ್ತು. ವಿಷ್ಣುವರ್ಧನ್‌, ಭವಾನಿ, ರಾಜಶ್ರೀ, ಪ್ರಮಿಳಾ ಹಾಗೂ ಮಲ್ಲಿಕಾ ಮುಖ್ಯ ಭೂಮಿಕೆಯಲ್ಲಿದ್ದರು.
 

ಸರ್ಪ ಕಾವಲು: ಎಸ್‌ಎನ್‌ ಸಿಂಗ್‌ ನಿರ್ದೇಶನದ ಈ ಸಿನಿಮಾದಲ್ಲಿ ಉದಯ್‌ ಕುಮಾರ್, ಹಾಲಂ, ಅನಿತಾ, ಬಿವಿ ರಾಧಾ, ತೂಗುದೀಪ ಶ್ರೀನಿವಾಸ್ ನಟಿಸಿದ್ದರು. 1975ರಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು.

ನಾಗಿಣಿ: ಕರಾಟೆ ಕಿಂಗ್‌ ಶಂಕರ್‌ನಾಗ್‌ ಅವರ ಸಿನಿಮಾ. 1991ರಲ್ಲಿ ಬಿಡುಗಡೆಯಾದ ಈ ಸಿನಿಮಾದ ನಿರ್ದೇಶಕರು ಶ್ರೀಪ್ರಿಯಾ. ಶಂಕರ್‌ ನಾಗ್‌, ಗೀತಾ, ರಜನಿ, ತಾರಾ, ಅನಂತ್‌ ನಾಗ್‌, ರಾಧಿಕಾ ಶರತ್‌ಕುಮಾರ್‌ ಇದರಲ್ಲಿ ನಟಿಸಿದ್ದರು.
 

ಶಿವನಾಗ: ಕೆಎಸ್‌ಆರ್‌ ದಾಸ್‌ ನಿರ್ದೇಶನದ ಶಿವನಾಗ ಸೂಪರ್‌ಹಿಟ್‌ ಸಿನಿಮಾ. 1992ರಲ್ಲಿ ರಿಲೀಸ್‌ ಆಗಿತ್ತು. ಅರ್ಜುನ್‌ ಸರ್ಜಾ, ಮಾಲಾಶ್ರೀ, ಮುಖ್ಯಮಂತ್ರಿ ಚಂದ್ರು, ದೊಡ್ಡಣ್ಣ ಸಿನಿಮಾದ ಮುಖ್ಯ ಪಾತ್ರದಲ್ಲಿದ್ದರು.
 

ದಾಕ್ಷಾಯಿಣಿ: ಈ ಸಿನಿಮಾದ ಹೆಸರು ಕೇಳಿದಾಗ ನೆನೆಪಾಗೋದು ಬೇಬಿ ಶಾಮಿಲಿ. ಅಷ್ಟು ಅದ್ಭುತವಾಗಿ ನಟಿಸಿದ್ದಾರೆ. ರಾಮ್‌ ನಾರಾಯಣ್‌ ನಿರ್ದೇಶನದ ಸಿನಿಮಾ 1993ರಲ್ಲಿ ರಿಲೀಸ್‌ ಆಗಿತ್ತು. ಬೇಬಿ ಶಾಮಿಲಿ, ಶ್ರೀನಾಥ್‌, ವಿನಯ ಪ್ರಸಾದ್‌, ಶ್ರುತಿ,  ಸುನಿಲ್‌ ಪ್ರಮುಖ ಪಾತ್ರದಲ್ಲಿದ್ದರು.
 

ನಾಗದೇವತೆ: ಸಾಯಿ ಪ್ರಕಾಶ್‌ ನಿರ್ದೇಶನದ ಈ ಸಿನಿಮಾ 2000ದಲ್ಲಿ ರಿಲೀಸ್‌ ಆಗಿತ್ತು. ಸಾಯಿಕುಮಾರ್,‌ ಪ್ರೇಮಾ, ಸೌಂದರ್ಯ, ಚಾರುಲತಾ ಹಾಗೂ ಆಶಾಲತಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.
 

ಅಮ್ಮ ನಾಗಮ್ಮ: ಸಿಎಚ್‌ ಬಾಲಾಜಿ ಸಿಂಗ್‌ ಇದರ ನಿರ್ದೇಶಕರು. 2001ರಲ್ಲಿ ಇದು ರಿಲೀಸ್‌ ಆಗಿ ಯಶಸ್ಸು ಕಂಡಿತ್ತು. ಚರಣ್‌ ರಾಜ್‌, ದಾಮಿನಿ, ರಾಗಸುಧಾ, ಕುಮಾರ್‌ ಗೋವಿಂದ್‌, ಗುರುದತ್‌ ಮುಸುರಿ ಸಿನಿಮಾದಲ್ಲಿ ನಟಿಸಿದ್ದರು.

ನಾಗಾಭರಣ: 2003ರಲ್ಲಿ ಈ ಸಿನಿಮಾ ರಿಲೀಸ್‌ ಆಗಿತ್ತು. ಇದರ ನಿರ್ದೇಶಕರು ಬಳ್ಳಾರಿ ಜನಾರ್ಧನ್‌. ಶೋಭರಾಜ್‌, ಶ್ರೀವಿದ್ಯಾ, ರೂಪಶ್ರೀ, ರೇಖಾ ದಾಸ್‌, ದೊಡ್ಡಣ್ಣ ಸಿನಿಮಾದಲ್ಲಿ ನಟಿಸಿದ್ದರು.
 

ದೇವನಾಗ: ಎಲ್‌ ರಾಧಾಕೃಷ್ಣ ನಿರ್ದೇಶನದ ದೇವನಾಗ ಸಿನಿಮಾ 2011ರಲ್ಲಿ ರಿಲೀಸ್‌ ಆಗಿತ್ತು. ಜಯರಾಮ್‌, ಅಮರ್‌, ರವಿ, ಮಂಜು ಮಾಲಿನಿ, ಶ್ರೀಲಕ್ಷ್ಮೀ, ಅರವಿಂದ್ ಈ ಸಿನಿಮಾದಲ್ಲಿ ನಟಿಸಿದ್ದರು.

Latest Videos

click me!