BTS ವೀಡಿಯೋ ಹಂಚಿಕೊಂಡ ಕೀರ್ತಿ, ಬೆಸ್ಟ್ ನಟಿ… ಪ್ರಶಸ್ತಿ ನಿನಗೆಂದ ತಾಂಡವ್‌ಗೆ ನೆಟ್ಟಿಗರ ಕ್ಲಾಸ್

Published : Aug 10, 2024, 01:36 PM IST

ಲಕ್ಷ್ಮೀ ಬಾರಮ್ಮ ಧಾರವಾಹಿಯಲ್ಲಿ ಕೀರ್ತಿ ಪಾತ್ರ ಮಾಡುತ್ತಿರುವ ನಟಿ ತನ್ವಿ ರಾವ್ ತಮ್ಮ ಧಾರಾವಾಹಿಯ ತೆರೆ ಹಿಂದಿನ ದೃಶ್ಯಗಳನ್ನ ಹಂಚಿಕೊಂಡಿದ್ದು, ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.   

PREV
17
BTS ವೀಡಿಯೋ ಹಂಚಿಕೊಂಡ ಕೀರ್ತಿ, ಬೆಸ್ಟ್ ನಟಿ… ಪ್ರಶಸ್ತಿ ನಿನಗೆಂದ ತಾಂಡವ್‌ಗೆ  ನೆಟ್ಟಿಗರ ಕ್ಲಾಸ್

ಲಕ್ಷ್ಮೀ ಬಾರಮ್ಮ (Lakshmi Baramma) ಧಾರಾವಾಹಿ ಕುತೂಹಲಕಾರಿ ಘಟ್ಟ ತಲುಪಿದೆ. ಕಳೆದೆರಡು ಸಂಚಿಕೆಗಳಲ್ಲಿ ದೊಡ್ಡದಾದ ಟ್ವಿಸ್ಟ್ ಕೊಟ್ಟಿದ್ದು, ಮುಂದೇನಾಗುತ್ತೆ ಎಂದು ವೀಕ್ಷಕರು ಕಾತುರದಿಂದ ಕಾಯುವಂತೆ ಮಾಡಿದ್ದಾರೆ. ಲಕ್ಷ್ಮೀ ಮತ್ತು ಕೀರ್ತಿ ಇಬ್ಬರೂ ಸಹ ಸಾವಿನ ಸನಿಹಕ್ಕೆ ತಲುಪಿದ್ದಾರೆ. ಯಾರನ್ನು ಯಾರು ಉಳಿಸುತ್ತಾರೆ ಅನ್ನೋದು ಮಾತ್ರ ಗೊತ್ತಿಲ್ಲ. 
 

27

ಕಥೆಯ ವಿಚಾರಕ್ಕೆ ಬಂದ್ರೆ ಕಾವೇರಿಯ ಮೋಸದಾಟಗಳನ್ನು ಬಯಲಿಗೆಳೆಯಲು ಕೀರ್ತಿ ಪಣತೊಟ್ಟು ಬೆಟ್ಟದ ಮೇಲೆ ಕಾವೇರಿಯನ್ನು ಬರುವಂತೆ ಮಾಡಿ, ಆಕೆ ಬಾಯಿಯಿಂದ ಎಲ್ಲ ಸತ್ಯ ಹೊರ ಬರುವಂತೆ ಮಾಡಿದ್ದಾಳೆ. ಆದರೆ ಕೊನೆ ಗಳಿಗೆಯಲ್ಲಿ ಕೀರ್ತಿಯನ್ನ ಕಾವೇರಿ ಬೆಟ್ಟದ ಮೇಲಿನಿಂದ ತಳ್ಳಿ, ಪ್ರಪಾತಕ್ಕೆ ಬೀಳುವಂತೆ ಮಾಡಿದ್ದಾಳೆ. 
 

37

ಕೀರ್ತಿ ತನ್ನನ್ನು ಬದುಕಿಸಿ ಎಂದು ಅಂಗಲಾಚುತ್ತಿದ್ದರೂ,  ಮಗನ ಮುಂದೆ ತನ್ನ ಸತ್ಯ ಎಲ್ಲಿ ಬಯಲಾಗಿ ಬಿಡುತ್ತೋ ಎನ್ನುವ ಭಯದಿಂದ ಕೀರ್ತಿ ಕೈಗಳಿಗೆ ಮೆಟ್ಟಿ ಆಕೆ ಬೀಳುವಂತೆ ಮಾಡಿದ್ದಾಳೆ. ಕೀರ್ತಿಯನ್ನು ಹುಡುಕಿಕೊಂಡು ಬಂದ ವೈಷ್ಣವ್ ಮತ್ತು ಲಕ್ಷ್ಮೀ ಎದುರು ಮತ್ತಷ್ಟು ನಾಟಕ ಮಾಡಿ, ಕೀರ್ತಿ ಅಲ್ಲಿಂದ ಓಡಿ ಹೋದಳು ಎಂದು ದೂರುತ್ತಾ, ಎಲ್ಲದರೂ ವಿಡೀಯೋ ಸಿಕ್ಕಿ ತನ್ನ ಗುಟ್ಟು ರಟ್ಟಾಗುತ್ತೆ ಎನ್ನುವ ಭಯದಿಂದ ಬೆಟ್ಟದಿಂದ ವೈಷ್ಣವ್ -ಲಕ್ಷ್ಮೀಯನ್ನು ಇಳಿಸಿಕೊಂಡು ಬಂದಿದ್ದಾಳೆ. 
 

47

ಇವೆಲ್ಲದರ ಮಧ್ಯೆ ಬೆಟ್ಟದ ಮೇಲಿನ ಮರವೊಂದರಲ್ಲಿ ಕಟ್ಟಿದ್ದ ಕ್ಯಾಮೆರಾ ಅಲ್ಲಿದ್ದ ವ್ಯಕ್ತಿಯ ಕೈಗೆ ಸಿಕ್ಕಿ ಬಿದ್ದಿದೆ. ಅದನ್ನ ಅವನು ಲಕ್ಷ್ಮೀ -ವೈಷ್ಣವ್ ಕೈಗೆ ಸೇರಿಸುವ ಮೂಲಕ ಕಾವೇರಿಯ ನಿಜ ರೂಪ ಬಯಲು ಮಾಡುತ್ತಾನಾ ಅನ್ನೋದನ್ನು ಕಾದು ನೋಡಬೇಕು. ಇನ್ನೂ ಬೆಟ್ಟದಿಂದ ಬಿದ್ದಿರುವ ಕೀರ್ತಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದಾಳೆ, ಆಕೆ ಬದುಕಿ ಬರುತ್ತಾಳಾ ಅನ್ನೋದೂ ಸೀರಿಯಲ್ ಬಗ್ಗೆ ಕುತೂಹಲ ಹೆಚ್ಚಿಸಿದೆ. 
 

57

ಇಷ್ಟೆಲ್ಲಾ ಕಾತುರಗಳ ಮಧ್ಯೆ ಕೀರ್ತಿ ಪಾತ್ರಧಾರಿ ತನ್ವಿ ರಾವ್ (Thanvi Rao) ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಇದೇ ಬೆಟ್ಟದ ಮೇಲಿಂದ ಉರುಳಿ ಬೀಳುವ ಸೀನಿನ ಬಿಟಿಎಸ್ (Behind the Scenes) ಶೇರ್ ಮಾಡಿಕೊಂಡಿದ್ದು, ಭಾರೀ ವೈರಲ್ ಆಗುತ್ತಿದೆ. ಆ ಪಾತ್ರವನ್ನು ಮಾಡೋದಕ್ಕೆ ತನ್ವಿ ಎಷ್ಟೊಂದು ಕಷ್ಟಪಟ್ಟಿದ್ದಾರೆ, ಬೆಟ್ಟದ ಮೇಲಿಂದ ಹೇಗೆಲ್ಲಾ ಉರುಳಿಕೊಂಡು ಬಂದಿದ್ದಾರೆ ಅನ್ನೋದನ್ನ ನೋಡಿ ವೀಕ್ಷಕರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

67

ಜನರು ಕಾಮೆಂಟ್ ಮಾಡಿ ಬಹಳ ಸಮಯದ ನಂತರ ಕನ್ನಡ ಚಿತ್ರರಂಗಕ್ಕೆ ನಿಮ್ಮಂತಹ 'ಅಭಿನೇತ್ರಿ' ಸಿಕ್ಕಿದ್ದಾರೆ. ನಿಮ್ಮ ಎಕ್ಸ್‌ಪ್ರೆಶನ್ ಅದ್ಭುತವಾಗಿದೆ. ಕಣ್ಣುಗಳಲ್ಲೇ ಎಲ್ಲವನ್ನೂ ಹೇಳಿ ಬಿಡುವ ನಿಮ್ಮ ನಟನೆ ನಮಗೆ ಬೇರೆ ಪ್ರಪಂಚವನ್ನೇ ತೋರಿಸುತ್ತೆ. ಇನ್ನೂ ಎತ್ತರಕ್ಕೆ ಬೆಳೆಯಿರಿ ಮತ್ತು ನೀವು ವಿಶ್ವಾದ್ಯಂತ ಹೆಸರು ಮಾಡುವಂತಾಗಲಿ ಎಂದೆಲ್ಲ ಹಾರೈಸಿದ್ದಾರೆ. ಅಲ್ಲದೇ ಮತ್ತಷ್ಟು ಜನ ನೀವು ನಟ ಭಯಂಕರಿ ಎಂದಿದ್ದಾರೆ. 
 

77

ತನ್ವಿ ರಾವ್ ಶೇರ್ ಮಾಡಿರುವ ಈ ವಿಡೀಯೋಗೆ ಭಾಗ್ಯಲಕ್ಷ್ಮೀ ಧಾರವಾಹಿಯ ತಾಂಡವ್ ಪಾತ್ರಧಾರಿ ಸುದರ್ಶನ್ ರಂಗಪ್ರಸಾದ್ (Sudarshan Rangaprasad) ಕೂಡ ಕಾಮೆಂಟ್ ಮಾಡಿದ್ದು.. ನೆಗೆಟಿವ್ ಪಾತ್ರದಲ್ಲಿ (neagtive role) ಬೆಸ್ಟ್ ನಟಿ ಪ್ರಶಸ್ತಿ ನಿನಗೆ ಅಂದಿದ್ದಾರೆ. ಇದಕ್ಕೆ ವೀಕ್ಷಕರು ಕೋಪಗೊಂಡಿದ್ದು, ನಿಮಗೆ ನೆಗೆಟಿವ್ ಪದದ ಅರ್ಥ ಗೊತ್ತಾ? ಕೀರ್ತಿ ಮಾಡ್ತಿರೋದು ಪಾಸಿಟಿವ್ ರೋಲ್, ನೀವು ಮಾಡುತ್ತಿರುವ ತಾಂಡವ್ ಪಾತ್ರ ನೆಗೆಟಿವ್ ರೋಲ್ ಎಂದಿದ್ದಾರೆ. ಆದ್ರೆ ಕೀರ್ತಿಗೆ ಬೆಸ್ಟೆಸ್ಟ್ ನಟಿ ಪ್ರಶಸ್ತಿ ಸಿಗಲೇಬೇಕು ಎಂದು ಹೇಳಿದ್ದಾರೆ ಅಭಿಮಾನಿಗಳು.  
 

click me!

Recommended Stories