ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ನನ್ನರಸಿ ರಾಧೆ ನಟಿ ಕೌಸ್ತುಭ ಮಣಿ ಕೆಲ ದಿನಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡೀದ್ದಾರೆ. ಈ ವಿಚಾರವನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
28
ಸೋಶಿಯಲ್ ಮೀಡಿಯಾದಲ್ಲಿ ಕೌಸ್ತುಭ ಪ್ರೆಗ್ನೆನ್ಸಿ ಫೋಟೊಶೂಟ್ ಶೇರ್ ಮಾಡಿಕೊಳ್ಳುತ್ತಿದ್ದರು. ತಾಯ್ತನದ ಖುಷಿಯಲ್ಲಿರುವ ನಟಿ, ಹಲವಾರು ರೀತಿಯಲ್ಲಿ ಬೇಬಿ ಬಂಪ್ ಫೋಟೊ ಶೂಟ್ ಮಾಡಿಕೊಂಡಿದ್ದರು.
ಕೌಸ್ತುಭ ಪ್ರತಿಯೊಂದು ಫೋಟೊ ಶೂಟ್ ಗಳಲ್ಲೂ ಪತಿ ಸಿದ್ಧಾಂತ್ ಸಾತ್ ನೀಡಿದ್ದು, ಟ್ರೆಡಿಶನಲ್ ಹಾಗೂ ಮಾಡರ್ನ್ ಪ್ರೆಗ್ನೆನ್ಸಿ ಫೋಟೊ ಶೂಟ್ ಎರಡೂ ಕೂಡ ತುಂಬಾನೆ ಮುದ್ದಾಗಿ ಸುಂದರವಾಗಿ ಬಂದಿದೆ.ಇದೀಗ ಹೆಣ್ಣುಮಗುವಿಗೆ ತಾಯಿಯಾಗಿರುವ ಖುಷಿಯನ್ನು ಸಂಭ್ರಮಿಸುತ್ತಿದ್ದಾರೆ ನಟಿ.
58
ಕೌಸ್ತುಭ ಮಣಿ 2024 ರ ಏಪ್ರಿಲ್ ತಿಂಗಳಲ್ಲಿ ಸಿದ್ಧಾಂತ್ ಜೊತೆ ಅದ್ಧೂರಿ ಸಮಾರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ಬಳಿಕ ನಟಿ ನಟನೆಯಿಂದ ದೂರ ಉಳಿದಿದ್ದರು. ಮದುವೆಯಾಗಿ ವರ್ಷದೊಳಗೆ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದರು ಕೌಸ್ತುಭ.
68
ನನ್ನರಸಿ ರಾಧೆ ಮೂಲಕ ನಟನೆಗೆ ಕಾಲಿಟ್ಟ ಕೌಸ್ತುಭ ಮಣಿ, ನಂತರ ತಮಿಳು ಸೀರಿಯಲ್ ಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು. ಇದಾದ ಬಳಿಕ ಸ್ಟಾರ್ ಸುವರ್ಣದ ಗೌರಿ ಶಂಕರ ಧಾರಾವಾಹಿಯಲ್ಲೂ ನಟಿಸಿದ್ದರು, ಮದುವೆ ನಿಶ್ಚಯವಾದ ಹಿನ್ನೆಲೆಯಲ್ಲಿ ಸೀರಿಯಲ್ ನಿಂದ ಹೊರ ನಡೆದಿದ್ದರು.
78
ಬಿಗ್ ಬಾಸ್ ಮಿನಿ ಸೀಸನ್ ನಲ್ಲೂ ಕಾಣಿಸಿಕೊಂಡಿದ್ದ ಕೌಸ್ತುಭ ಸಿನಿಮಾಗಳಲ್ಲೂ ನಟಿಸಿದ್ದಾರೆ. ರಾಮಾಚಾರಿ 2.0 ಸೇರಿ ಒಂದೆರಡು ಸಿನಿಮಾಗಳಿಗೆ ಕೌಸ್ತುಭ ಬಣ್ಣ ಹಚ್ಚಿದ್ದರು. ಆದರೆ ಆ ಸಿನಿಮಾಗಳು ಅಷ್ಟೊಂದು ಸದ್ದು ಮಾಡಿರಲಿಲ್ಲ.
88
ಇದೀಗ ಅರ್ಜುನ್ ಜನ್ಯ ನಿರ್ದೇಶನದ ಶಿವರಾಜ್ ಕುಮಾರ್ , ಉಪೇಂದ್ರ, ರಾಜ್ ಬಿ ಶೆಟ್ಟಿ ನಟಿಸಲಿರುವ ಬಹು ನಿರೀಕ್ಷೆಯುಳ್ಳ 45 ಸಿನಿಮಾದಲ್ಲೂ ಕೂಡ ಕೌಸ್ತುಭ ಕೂಡ ನಟಿಸಿದ್ದಾರೆ. ಈ ಸಿನಿಮಾ ಇದೇ ಆಗಸ್ಟ್ ನಲ್ಲಿ ತೆರೆ ಕಾಣಲಿದೆ ಎನ್ನುವ ಸುದ್ದಿ ಇದೆ. ಆದರೆ ಅಧಿಕೃತ ಮಾಹಿತಿ ಬಂದಿಲ್ಲ. .