Manoranjan Ravichandran: 'ಕಂಟೆಂಟ್‌ ಕಿಂಗ್‌' ಎಂದು ಹೊಸ ಸಿನಿಮಾ ಆರಂಭಿಸಿದ ಮನೋರಂಜನ್‌ ರವಿಚಂದ್ರನ್!‌

Published : Aug 08, 2025, 12:07 PM IST

ನಟ ಮನೋರಂಜನ್ ರವಿಚಂದ್ರನ್ ಹೊಸ ಕಥೆಯೊಂದಿಗೆ ತೆರೆ ಮೇಲೆ ಬರಲು ರೆಡಿ ಆಗಿದ್ದಾರೆ. ಸಾಹೇಬ, ಮುಗಿಲ್ ಪೇಟೆ ಸೇರಿದಂತೆ ಹಲವು ಸಿನಿಮಾಗಳ ಮೂಲಕ ಭರವಸೆ ಹುಟ್ಟುಹಾಕಿರುವ ಕ್ರೇಜಿ ಸ್ಟಾರ್ ಪುತ್ರ ಸದ್ದಿಲ್ಲದೆ ಹೊಸ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. 

PREV
15

ಹೌದು, ಮನೋರಂಜನ್ ರವಿಚಂದ್ರನ್ ಅವರ ಐದನೇ ಸಿನಿಮಾ ಸೆಟ್ಟೇರಿದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಲಕ್ಷ್ಮಿ ನರಸಿಂಹಸ್ವಾಮಿ ಸನ್ನಿಧಿಯಲ್ಲಿ ಇತ್ತೀಚೆಗೆ ಚಿತ್ರದ ಮುಹೂರ್ತ ನೆರವೇರಿದೆ. ಮನು ಹೊಸ ಸಾಹಸಕ್ಕೆ ಸಹೋದರ ವಿಕ್ರಮ್ ರವಿಚಂದ್ರನ್ ಸಾಥ್ ಕೊಟ್ಟಿದ್ದಾರೆ. ಸಿನಿಮಾಗೆ ಕ್ಲ್ಯಾಪ್ ಮಾಡಿ ಇಡೀ ತಂಡಕ್ಕೆ ವಿಕ್ಕಿ ಶುಭಾಶಯ ತಿಳಿಸಿದರು.

25

ಯುವ ಪ್ರತಿಭೆ ರುದ್ರೇಶ್ ನಿರ್ದೇಶನದಲ್ಲಿ ಮನೋರಂಜನ್ ನಾಯಕನಾಗಿ ಅಭಿನಯಿಸುತ್ತಿದ್ದು, ಬೃಂದಾ ಆಚಾರ್ಯ ನಾಯಕಿಯಾಗಿ ಜೊತೆಯಾಗಿದ್ದಾರೆ. ನಟಿ ಅನುಷಾ ರೈ ಸ್ಪೆಷಲ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಒಂದೊಳ್ಳೆ ಕಂಟೆಂಟ್‌ಗೆ ಕಮರ್ಷಿಯಲ್ ಟಚ್ ಕೊಟ್ಟು ರುದ್ರೇಶ್ ಕಥೆ ಎಣೆದಿದ್ದಾರೆ.

35

ವೈಎಸ್ ಪ್ರೊಡಕ್ಷನ್ ಅಡಿಯಲ್ಲಿ ಶ್ರೀನಿವಾಸ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಜೆರ್ಸಿ ಗಿಫ್ಟ್ ಮ್ಯೂಸಿಕ್, ಸೆಲ್ವಂ ಕ್ಯಾಮೆರಾ ವರ್ಕ್ ಹಾಗೂ ಕೆಎಂ ಪ್ರಕಾಶ್ ಸಂಕಲನ ಸಿನಿಮಾಗಿದೆ. ಮುಂದಿನ ವಾರದಿಂದ ಶೂಟಿಂಗ್‌ಗೆ ಕಿಕ್ ಸ್ಟಾರ್ಟ್ ಸಿಗಲಿದ್ದು, ಮೊದಲ ಹಂತದ ಚಿತ್ರೀಕರಣವನ್ನು ಚಿತ್ರತಂಡ ಬೆಂಗಳೂರಿನಲ್ಲಿ ನಡೆಸಲು ಯೋಜನೆ ಹಾಕಿಕೊಂಡಿದೆ‌. ಆ ಬಳಿಕ ಬಾದಾಮಿಯತ್ತ ಇಡೀ ಟೀಂ ಹೆಜ್ಜೆ ಹಾಕಲಿದೆ.

45

ನಟಿ ಅನುಷಾ ರೈ ಅವರು ಈ ಸಿನಿಮಾದ ಮುಹೂರ್ತದ ವಿಡಿಯೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಟ ತ್ರಿವಿಕ್ರಮ್‌, ಪ್ರಿಯಾಂಕಾ ತಿಮ್ಮೇಶ್‌ ಅವರು ಅನುಷಾಗೆ ಶುಭ ಕೋರಿದ್ದಾರೆ. 

55

ಅಂದಹಾಗೆ ಬೃಂದಾ ಆಚಾರ್ಯ ಅವರು ‘ಕೌಸಲ್ಯ ಸುಪ್ರಜಾ ರಾಮʼ ಸಿನಿಮಾದಲ್ಲಿ ನಟಿಸಿದ್ದರು. ಅಷ್ಟೇ ಅಲ್ಲದೆ ’x and y' ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories