ಕೊನೆಗೂ ಗಂಡನ ಜೊತೆಗಿನ ಫೋಟೊ ಹಾಕೇ ಬಿಟ್ರು ದೀಪಿಕಾ ದಾಸ್… ಮದ್ವೆ ನಂತ್ರ ನಟಿ ಸೌಂದರ್ಯ ಹೆಚ್ಚಿದ್ಯಂತೆ!

First Published | Aug 31, 2024, 5:53 PM IST

ಕಿರುತೆರೆ ನಟಿ, ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿ ದೀಪಿಕಾ ದಾಸ್ ತಮ್ಮ ಮನೆಯಲ್ಲಿ ನಡೆದ ವರಮಹಾಲಕ್ಷ್ಮೀ ಪೂಜೆಯ ಫೋಟೊಗಳನ್ನು ಶೇರ್ ಮಾಡಿದ್ದು, ಇದರ ಜೊತೆಗೆ ಗಂಡನ ಜೊತೆಗಿನ ಫೋಟೊವನ್ನೂ ಸಹ ಹಂಚಿಕೊಂಡಿದ್ದಾರೆ. 
 

ಕಿರುತೆರೆಯ ಜನಪ್ರಿಯ ನಟಿ, ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿ ದೀಪಿಕಾ ದಾಸ್ (Deepika Das) ಸೋಶಿಯಲ್ ಮೀಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುವಂತಹ ನಟಿ, ಹೆಚ್ಚಾಗಿ ತಮ್ಮ ಫೋಟೊಗಳ ಮೂಲಕವೇ ಸುದ್ದಿ ಮಾಡ್ತಿರ್ತಾರೆ ನಟಿ. 
 

ಕೆಲವು ತಿಂಗಳ ಹಿಂದೆ ದಿಢೀರ್ ಆಗಿ ಗೋವಾದಲ್ಲಿ ಮದುವೆಯಾಗೋ ಮೂಲಕ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದ ದೀಪಿಕಾ ದಾಸ್, ಮದುವೆ ಬಳಿಕ ತಮ್ಮ ಪತಿ ಜೊತೆ, ವಿದೇಶಗಳಲ್ಲಿ ಟ್ರಾವೆಲ್ ಮಾಡೋದ್ರಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ರು. ದೀಪಿಕಾ ಮನೆಯಲ್ಲಿ ಇರೋದೆ ಇಲ್ವೇನೋ ವಿದೇಶ ಟ್ರಾವೆಲ್ ಮಾಡೋದ್ರಲ್ಲಿ ಸಮಯ ಕಳೆಯುತ್ತಾರೆನೋ ಎನ್ನುವಷ್ಟು ಟ್ರಾವೆಲ್ ಮಾಡ್ತಿದ್ರು. 
 

Tap to resize

ಆದ್ರೆ ನಟಿ ಮದುವೆ ಬಳಿಕವೂ ಹೆಚ್ಚಾಗಿ ತಮ್ಮ ಫೋಟೊ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ (social media) ಶೇರ್ ಮಾಡುತ್ತಿದ್ದು, ತಮ್ಮ ಪತಿಯ ಫೋಟೊವನ್ನು ಶೇರ್ ಮಾಡ್ತಿದ್ದಿದ್ದು, ಅಥವಾ ಪತಿ ಜೊತೆ ಫೋಟೊ ತೆಗೆಸಿಕೊಂಡಿದ್ದು ತುಂಬಾನೆ ಕಡಿಮೆ. ಹಾಗಾಗಿ ದೀಪಿಕಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಏನೇ ಫೋಟೊ ಹಾಕಿದ್ರೂ ಜನ ಮೊದಲಿಗೆ ಪ್ರಶ್ನಿಸುತ್ತಿದ್ದಿದ್ದೇ ನಿಮ್ಮ ಗಂಡ ಎಲ್ಲಿ ಅಂತ. 
 

ಇದೀಗ ದೀಪಿಕಾ ದಾಸ್ ತಮ್ಮ ಮನೆಯಲ್ಲಿ ನಡೆದಂತಹ ವರಮಹಾಲಕ್ಷ್ಮೀ (Varamahalakshmi) ಹಬ್ಬದ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಜೊತೆಗೆ ಗಂಡನ ಜೊತೆಗೆ ಇರುವಂತಹ ಫೋಟೊವನ್ನು ಸಹ ಶೇರ್ ಮಾಡಿದ್ದಾರೆ. ಅಭಿಮಾನಿಗಳ ಪ್ರಶ್ನೆ ಉತ್ತರಿಸೋದಕ್ಕಾಗಿಯೇ ಪತಿ ಜೊತೆಗಿನ ಫೋಟೊ ಶೇರ್ ಮಾಡಿದ್ರಾ ಗೊತ್ತಿಲ್ಲ. 
 

ಇನ್ನು ಹಬ್ಬದ ಸಡಗರದಲ್ಲಿ ದೀಪಿಕಾ ದಾಸ್ ಲಕ್ಷ್ಮೀ ದೇವಿಯನ್ನು ಸಿಂಗರಿಸಿ, ಅದ್ಧೂರಿಯಾಗಿ ಪೂಜೆ ಮಾಡಿದ್ದು, ನಟಿ ಪಿಂಕ್ ಬಣ್ಣದ ಸಿಲ್ಕ್ ಸೀರೆಯಲ್ಲಿ ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ. ಅಭಿಮಾನಿಗಳು ಸಹ ನಟಿಯ ಸಾಂಪ್ರದಾಯಿಕ ಲುಕ್ ನೋಡಿ ಏನೇ  ಹೇಳು ಸುಂದರಿ ಸೀರೆಯುಟ್ಟಗ ನಿನ್ನ ಮೊಗದ ನಗುವ ಬಣ್ಣಿಸಲು ಪದಗಳೇ ಸಾಲದು ಎಂದಿದ್ದಾರೆ, ಅಷ್ಟೇ ಅಲ್ಲದೇ ಸೀರೆಯಲ್ಲಿ ದೇವತೆ ತರ ಕಾಣಿಸ್ತಿದ್ದೀರಿ ಅಂತಾನು ಹೇಳಿದ್ದಾರೆ. 
 

ಇನ್ನೂ ಕೆಲವು ಜನ ಕಾಮೆಂಟ್ ಮಾಡಿ, ಮೇಡಂ ನಿಮ್ಮ ಗಂಡ ನಿಜಕ್ಕೂ ಸುಂದರವಾಗಿದ್ದಾರೆ ಅಂದ್ರೆ, ಮತ್ತೆ ಕೆಲವರು ಮೇಡಂ ಮದ್ವೆ ಆದ ನಂತ್ರ ನಿಮ್ಮ ಸೌಂದರ್ಯ ಮತ್ತಷ್ಟು ಹೆಚ್ಚಿದಂತೆ ಕಾಣಿಸುತ್ತೆ ಎಂದಿದ್ದಾರೆ. ಜೊತೆ ಮುದ್ದಾದ ಜೋಡಿ, ಕ್ಯೂಟ್ ಜೋಡಿ, ಮುಂದಿನ ಬಾರಿ ರಾಜಾ ರಾಣಿ ಕಾರ್ಯಕ್ರಮಕ್ಕೆ ಜೋಡಿಗಳಾಗಿ ನೀವೂ ಬನ್ನಿ ಎಂದು ಕೇಳಿಕೊಂಡಿದ್ದಾರೆ. 
 

Latest Videos

click me!