DNA ರಿಪೋರ್ಟ್’ನ ಕೊರೋನಾ ರಿಪೋರ್ಟ್ ಅಂದ್ಕೊಂಡ್ರ.....? ಅಂತರಪಟ ವಿರುದ್ಧ ವೀಕ್ಷಕರು ಕೆಂಡಾಮಂಡಲ!

First Published | Aug 31, 2024, 3:59 PM IST

ಅಂತರಪಟ ಧಾರಾವಾಹಿಯಲ್ಲಿ ಡಿಎನ್’ಎ ರಿಪೋರ್ಟ್ ನಂಬಿ ಆರಾಧನಾ ಮನೆ ಬಿಟ್ಟು ಹೊರ ನಡೆದಿದ್ದಾಳೆ, ಇದನ್ನ ನೋಡಿದ ವೀಕ್ಷಕರು, ಏನ್ ಕಥೆಯಂತ ಮಾಡ್ತೀರಾ? ರಿಪೋರ್ಟ್’ನ ಕೊರೋನಾ ರಿಪೋರ್ಟ್ ಅಂದ್ಕೊಂಡ್ರ ಅಷ್ಟು ಸುಲಭವಾಗಿ ಬದಲಾಯಿಸೋಕೆ ಎಂದು ಕೇಳ್ತಿದ್ದಾರೆ. 

ಅಂತರಪಟ (Antarapata) ಧಾರಾವಾಹಿ ಆರಂಭವಾಗಿದ್ದೇ ಆರಾಧನಾ ಹೇಗೆ ತನ್ನ ಕಾಲ ಮೇಲೆ ನಿಂತು ಹೇಗೆ ತನ್ನ ಕನಸಿನ ಕಂಪನಿ ಶುರು ಮಾಡ್ತಾರೆ ಎಂದು. ಆದ್ರೆ ಕಥೆ ಮುಂದುವರೆದುಕೊಂಡು ಹೋದಂತೆ, ಮೂಲ ಕಥೆ ಬಿಟ್ಟು ಬೇರೆಲ್ಲೋ ಹೋಗ್ತಿದೆ. ಇದನ್ನ ಆರಂಭದಿಂದಲೂ ಕಂಡಿಸುತ್ತಾ ಬಂದಿದ್ದ ವೀಕ್ಷಕರು ಈಗ ಮತ್ತೆ ಗರಂ ಆಗಿದ್ದಾರೆ. 
 

ಸದ್ಯಕ್ಕೆ ನೀವು ಅಂತರಪಟ ನೋಡಿದ್ರೆ, ಅದ್ರಲ್ಲಿ ಆರಾಧನಾ ಗೋಳು ಮಾತ್ರ ಕಾಣಿಸ್ತಿದೆ. ಮೊದಲಿಗೆ ಅಪ್ಪನಿಂದ ಗೋಳು, ಆಮೇಲೆ ಕೆಲಸ ಸಿಗದೇ ಸಮಸ್ಯೆ, ಅದಾಗಿ ರಾಜ್ ಮದುವೆಯಾಗಿ ಮನೆ ಬಂದ ಮೇಲೆ ಅತ್ತೆಯ ಸಮಸ್ಯೆ, ಅತ್ತೆ ಸರಿಯಾಗ್ತಿದ್ದಾರೆ ಅನ್ನೋವಾಗ ಅತ್ತಿಗೆ ಸಮಸ್ಯೆ, ಅದು ಹೋಗ್ಲೀ ಅಂದ್ರೆ ರೇಷ್ಮಾ ಕಾಟ.. ಹೀಗೆ ಆರಾಧನಾ ಸಮಸ್ಯೆ ಮಾತ್ರ ಮುಗಿತಾನೆ ಇಲ್ಲ. 
 

Tap to resize

ಸುಶಾಂತ್ ನನ್ನು ಹೇಗಾದ್ರೂ ಮಾಡಿ ಪಡಿಬೇಕು ಎನ್ನುವ ದುರಾಸೆಯಿಂದ  ಅಮಲಾ ಜೊತೆ ಸೇರ್ಕೊಂಡು ಅಮಲಾ ಏನೆಲ್ಲಾ ಸಂಚು ಮಾಡಿ, ಕೊನೆಗೆ ರಾಜ್ ನಿಂದಾಗಿ ರೇಷ್ಮಾ ಗರ್ಭಿಣಿಯಾಗಿದ್ದಾಳೆ ಎಂದು ಹೇಳ್ಕೊಂಡು ಕೊನೆಗೆ ರೇಷ್ಮಾ ಮನೆಗೆ ಬಂದು ಆಯ್ತು, ಅವಳನ್ನ ಆರಾಧನಾ ಮನೆಗೆ ಸೇರಿಸಿ, ಅವಳ ಸೇವೆ ಮಾಡ್ತಿದ್ದಾಳೆ ಆರಾಧನಾ. 
 

ಇನ್ನೇನು ಆರಾಧನಾಗೆ ಬುದ್ದಿ ಬಂದು ಡಿಎನ್’ಎ (DNA) ಟೆಸ್ಟ್ ಮಾಡ್ಸಿದ್ದಾಳೆ, ಇನ್ನೆಲ್ಲವೂ ಸರಿಯಾಗುತ್ತೆ ಅನ್ನೋವಷ್ಟರಲ್ಲಿ ರಿಪೋರ್ಟ್ ಉಲ್ಟಾ ಹೊಡೆದು, ಮತ್ತೆ ಒಳ್ಳೆತನಕ್ಕೆ ಸೋಲು, ಕೆಟ್ಟದ್ದಕ್ಕೆ ಗೆಲುವಾಗಿದೆ. ಇದನ್ನ ನೋಡಿ ಅಭಿಮಾನಿಗಳು ಕೆಂಡಾಮಂಡಲವಾಗಿದ್ದು, ದಯವಿಟ್ಟು ಧಾರಾವಾಹಿಯನ್ನು ನಿಲ್ಲಿಸಿಬಿಡಿ, ಒಂದು ತಿಂಗಳಿನಿಂದ ಗರ್ಭಿಣಿ ಎಂಬ ಟಾಪಿಕ್ ಇಟ್ಕೊಂಡು ಕಥೆ ಎಳಿತಿದ್ದೀರಿ, ಸಾಕು ಇನ್ನು ನೋಡೋದಕ್ಕೆ ಆಗಲ್ಲ ಎಂದಿದ್ದಾರೆ. 
 

ಅಷ್ಟೇ ಅಲ್ಲ ನೀವು ತೋರೋ ಸ್ಟೋರಿ ಹೇಗಿದೆ ಗೊತ್ತಾ? ತಪ್ಪು ಮಾಡೋರಿಗೆ ದಾರಿ ತೋರಿದ ಹಾಗೇ ಇದೆ. ಈ ರೀತಿ ಸ್ಟೋರಿ ತೋರಬೇಡಿ ಎಂದು ಕೇಳಿಕೊಂಡಿದ್ದಾರೆ ವೀಕ್ಷಕರು. ಅಷ್ಟೇ ಅಲ್ಲ ಆರಾಧನಾ ಬುದ್ದಿವಂತಿಕೆ ಎಲ್ಲಿಗೆ ಹೋಯ್ತಮ್ಮಾ , ಸೀರಿಯಲ್ ನಾಯಕಿನ ಇಷ್ಟೊಂದು ದಡ್ಡೀ ತರ ತೋರಿಸೋಕೆ ಹೇಗೆ ಸಾಧ್ಯ? ಅಂತಾನೂ ಕೇಳಿದ್ದಾರೆ. 
 

ಜೊತೆಗೆ ಅದನ್ನ ಕೊರೊನಾ ರಿಪೋರ್ಟ್ ಅಂದ್ಕೋಂಡ್ರಾ ಅಥವಾ ಡಿಎನ್’ಎ ರಿಪೋರ್ಟ್ ಅಂದ್ಕೊಂಡ್ರ, ನಿಮಗೆ ಬೇಕಾದ ಹಾಗೆ ಡಿಎನ್’ಎ ರಿಪೋರ್ಟ್ ಬದಲಾಯಿಸೋದಕ್ಕೆ ಸಾಧ್ಯಾನ? ಏನಂತಹ ಕಥೆ ಬರಿತೀರಿ, ಸಮಾಜಕ್ಕೆ ಏನಂತ ಸಂದೇಶ ಕೊಡ್ತೀರಿ ಅಂತ ನಿರ್ದೇಶಕರನ್ನೇ ಪ್ರಶ್ನಿಸಿದ್ದಾರೆ ವೀಕ್ಷಕರು. 
 

ಇನ್ನು ಆರಾಧನಾ ಕನಸುಗಳನ್ನು ನೆನಪಿಸಿಕೊಂಡಿರುವ ವೀಕ್ಷಕರು, ಆರಾಧನಾ ಮನೆ ಬಿಟ್ಟು ಹೋಗಿ, ನಿನ್ನದೇ ಸ್ವಂತ ಕಂಪನಿ ಸ್ಟಾರ್ಟ್ ಮಾಡು ಎಂದು ಕೆಲವರು ಹೇಳಿದ್ರೆ, ಇನ್ನೂ ಕೆಲವರು ಕಥೆ ಶುರುವಾಗಿದ್ದೇ ಆರಾಧನಾ ಕಂಪನಿ ಕಟ್ಟುವ ಆಸೆಯಿಂದ ಈಗ ಆದಕ್ಕೆ ಬೆಲೆನೆ ಇಲ್ಲ ಅನ್ನೋ ಹಾಗೆ ಮಾಡಿದ್ರಲ್ವಾ? ನಾಯಕಿಗೆ ಆರಂಭದಿಂದ ಇಲ್ಲಿವರೆಗೆ ನೋವು ಮಾತ್ರ ಕೊಟ್ಟಿದ್ದೀರಲ್ಲ? ಇದು ಸರೀನಾ ಎಂದು ಪ್ರಶ್ನಿಸಿದ್ದಾರೆ. 
 

Latest Videos

click me!