ಲಂಗ ದಾವಣಿ ತೊಟ್ಟು 'ಏನು ಹೇಳಿ ಅಂದನಾ' ಎಂದ ಅನುಪಮಾ ಗೌಡ: ಅಕ್ಕನ ಸೌಂದರ್ಯಕ್ಕೆ ಕವಿಗಳಾದ ಫ್ಯಾನ್ಸ್‌!

Published : Oct 05, 2023, 08:27 AM IST

ಕನ್ನಡದ ನಟಿ, ನಿರೂಪಕಿ ಅನುಪಮಾ ಗೌಡ ಅವರು ಇತ್ತಿಚೆಗಷ್ಟೇ ರೆಡ್‌ ಡ್ರೆಸ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೀಗ ಅನುಪಮಾ ಲಂಗ ದಾವಣಿ ತೊಟ್ಟು ಕ್ಯಾಮರಾಗೆ ಭರ್ಜರಿ ಪೋಸ್ ನೀಡಿದ್ದಾರೆ.

PREV
17
ಲಂಗ ದಾವಣಿ ತೊಟ್ಟು 'ಏನು ಹೇಳಿ ಅಂದನಾ' ಎಂದ ಅನುಪಮಾ ಗೌಡ: ಅಕ್ಕನ ಸೌಂದರ್ಯಕ್ಕೆ ಕವಿಗಳಾದ ಫ್ಯಾನ್ಸ್‌!

ಅಕ್ಕ ಧಾರಾವಾಹಿ ಮೂಲಕ ಎಲ್ಲರ ಮನೆ ಮಾತಾದ ನಟಿ ಅನುಪಮಾ ಗೌಡ. ಭೂಮಿಕಾ ಹಾಗೂ ದೇವಿಕಾ ಎಂಬ ಎರಡು ಬಗೆಯ ಪಾತ್ರಗಳಲ್ಲಿ ಅದ್ಭುತವಾಗಿ ನಟಿಸಿ ಜನರ ಮನಗೆದ್ದ ನಟಿ ಎಂದರೆ ಅನುಪಮಾ ಗೌಡ. 

27

ನಿರೂಪಕಿಯಾಗಿ ಎಲ್ಲರ ಗಮನ ಸೆಳೆದ ನಟಿ ಅನುಪಮಾ, ಬದುಕಿನಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ತಾನು ಮನಸ್ಸನ್ನು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂಬ ರೀತಿ ಸಾಧಿಸಿ ತೋರಿಸಿದ್ದಾರೆ. 

37

ಇದೀಗ ಅನುಪಮಾ ಗೌಡ ಲಂಗ ದಾವಣಿ ತೊಟ್ಟು ಕ್ಯಾಮರಾಗೆ ಭರ್ಜರಿ ಪೋಸ್ ನೀಡಿದ್ದು, ದರ್ಶನ ಅಭಿನಯದ ಗಜ ಚಿತ್ರದ, ಏನು ಹೇಳಿ ಅಂದನಾ.... ಸಾಲುತಿಲ್ಲ ವ್ಯಾಕರಣ... ಕಣ್ಣಿನ ಬಾಣನಾ..ಬೀಸುತ್ತಾಳೆ ನೋಡಣ್ಣ ಎಂಬ ಹಾಡಿನ ಸಾಲುಗಳನ್ನು ಬರೆದುಕೊಂಡಿದ್ದಾರೆ.

47

ಅನುಪಮಾ ಹೊಸ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿರುವುದು ಖಚಿತ. ಇದೀಗ ಅಭಿಮಾನಿಗಳು ಅನುಪಮಾ ಅವರ ಫೋಟೋಗಳಿಗೆ ನಾನಾ ರೀತಿಯ ಕಾಮೆಂಟ್ ಮಾಡುತ್ತಾ ಇದ್ದು, ಗೂಳಿ ಕೆನ್ನೆಯ ಚೆಲುವೆ ಬಹಳ ಇಷ್ಟ ಪಟ್ಟಿದ್ದಾರೆ. ಹಲವಾರು ಅಭಿಮಾನಿಗಳು ಗುಳಿಕೆನ್ನೆಯ ಚೆಲುವೆ.. ಸುಂದರಿಯ ಹಾಗೆ ಕಾಣಿಸುತ್ತಾ ಇದ್ದಿರಿ ಎಂದೆಲ್ಲ ಕಾಮೆಂಟ್ ಮಾಡುತ್ತಾ ಇದ್ದಾರೆ.

57

ಅನುಪಮಾ ಗೌಡ ಈಗಾಗಲೇ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗುತ್ತಿದೆ. ಅಭಿಮಾನಿಗಳು ಮುದ್ದು ಮುದ್ದಾಗಿ ಕಾಣಿಸಿಕೊಂಡಿರುವ ಅನುಪಮಾ ಅವರ ಪೋಟೋಗಳನ್ನು ಇಷ್ಟಪಟ್ಟಿದ್ದಾರೆ.

67

ಅನುಪಮಾ ಗೌಡ ಕಿರುತೆರೆಯಲ್ಲಿ ಮಾತ್ರ ಮಿಂಚದೆ ಹಿರಿತೆರೆಯಲ್ಲಿಯೂ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ. ಹೌದು ಕಿರುತೆರೆಯಲ್ಲಿ ಅನೇಕ ಧಾರಾವಾಹಿಯಲ್ಲಿ ನಟನೆ ಮಾಡಿದ ಈ ನಟಿಗೆ ಅನೇಕ ಅಭಿಮಾನಿಗಳಿದ್ದಾರೆ.

77

ಅನುಪಮಾಗೆ ಸೋಲೋ ಟ್ರಿಪ್ ಹೋಗುವುದು ಎಂದರೆ ಬಹಳ ಇಷ್ಟವಂತೆ. ಹಾಗೆಯೇ ಹಲವಾರು ಬಾರಿ ಟ್ರಿಪ್‌ಗಳಿಗೂ ಹೋಗಿದ್ದಾರೆ. ಟ್ರಿಪ್‌ನಲ್ಲಿ ಎಂಜಾಯ್ ಮಾಡುತ್ತಿರುವ ದೃಶ್ಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories