ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾ ರಾಮ ಸೀರಿಯಲ್ ನಲ್ಲಿ ಸೀತಾ ಮತ್ತು ರಾಮನ ಪಾತ್ರದಷ್ಟೇ ಪ್ರಮುಖವಾದ ಪಾತ್ರ ರಾಮನ ಗೆಳೆಯ ಅಶೋಕ್ ಅವರದ್ದು. ಅಶೋಕ್ ಪಾತ್ರದಲ್ಲಿ ಅಭಿನಯಿಸುತ್ತಿರೋ ನಟ ಅಶೋಕ್ ಶರ್ಮಾ.
ಜೀವದ ಗೆಳೆಯ
ಗೆಳೆಯ ಮತ್ತು ಗೆಳೆತನ ಅಂದ್ರೆ ಹೀಗೆ ಇರ್ಬೇಕು ಎನ್ನುವ ಪಾತ್ರಕ್ಕೆ ಜೀವ ತುಂಬಿ, ನಾಯಕನಷ್ಟೇ ಪ್ರಮುಖ ಪಾತ್ರದ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಿ, ಇದೀಗ ಅಭಿಮಾನಿಗಳ ಬಳಗವನ್ನೇ ಪಡೆದಿರುವ ನಟ ಅಶೋಕ್ ಶರ್ಮಾ (Ashok Sharma) ಇಂದು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದು. ಈ ಹಿನ್ನೆಲೆಯಲ್ಲಿ ಅವರ ಕುರಿತು ಕೆಲವು ಇಂಟ್ರೆಸ್ಟಿಂಗ್ ಮಾಹಿತಿ ತಿಳಿಯೋಣ.
ನಟರೂ ಹೌದು, ಗಾಯಕರೂ ಹೌದು
ಅಶೋಕ್ ಕೇವಲ ನಟ ಮಾತ್ರ ಅಲ್ಲ, ಇವರೊಬ್ಬ ಅದ್ಭುತ ಸಿಂಗರ್ (singer) ಕೂಡ ಹೌದು, ಕನ್ನಡದ ಹಲವಾರು ಸಿನಿಮಾಗಳಿಗೆ ಇವರು ಹಾಡು ಹಾಡಿದ್ದಾರೆ. ಅದರಲ್ಲಿ ಜಿಂಗ್ ಚಿಕ, ಜಿಂಗ್ ಚಿಕಾ ಹಾಡು ಭಾರಿ ವೈರಲ್ ಆಗಿತ್ತು, ಇತ್ತೀಚೆಗಷ್ಟೆ ಆ ಹಾಡನ್ನು ಹಾಡಿದ್ದು ಅಶೋಕ್ ಅನ್ನೋದು ಗೊತ್ತಾಗಿತ್ತು.
ಇಲೆಕ್ಟ್ರಾನಿಕ್ ಅಂಗಡಿಯಿಂದ ಆರ್ಕೆಸ್ಟ್ರಾ
ಸಣ್ಣ ಒಂದು ಇಲೆಕ್ಟ್ರಾನಿಕ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಶೋಕ್ ಕೆಲವೊಮ್ಮೆ ಕಾರ್ಯಕ್ರಮಗಳಲ್ಲಿ ಹಾಡು ಹೇಳಲು ಹೋಗುತ್ತಿದ್ದರಂತೆ. ಆ ಸಂದರ್ಭದಲ್ಲಿ ಇವರ ಹಾಡನ್ನು ಮೆಚ್ಚಿದ ಮಾಧುರಿ ಮೆಲೋಡೀಸ್ ತಮ್ಮ ಆರ್ಕೆಸ್ಟ್ರಾ ಕಂಪನಿಯಲ್ಲಿ ಹಾಡುವಂತೆ ಹೇಳಿದ್ರಂತೆ. ಅಂದಿನಿಂದ ಇಲೆಕ್ಟ್ರಾನಿಕ್ ಕೆಲಸ ತೊರೆದು ಆರ್ಕೆಸ್ಟ್ರಾದಲ್ಲಿ ನಾಲ್ಕು ವರ್ಷ ಹಾಡು ಹಾಡಿದ್ದಾರೆ.
ಕೀಬೋರ್ಡ್ ಕೂಡ ಗೊತ್ತು
ಈ ನಟನನ್ನು ಸಕಲಾ ಕಲಾ ವಲ್ಲಭ (multitalented) ಅಂತಾನೆ ಹೇಳಬಹುದು, ಯಾಕಂದ್ರೆ, ನಟನೆ, ಗಾಯನ, ಜೊತೆಗೆ ಕೀ ಬೋರ್ಡ್ ಕೂಡ ಕಲಿತ್ತಿದ್ದರು. ಅಷ್ಟೇ ಅಲ್ಲ, ಇತರರಿಗೆ ಕೀಬೋರ್ಡ್ ಕಲಿಸುವ ಕೆಲಸ ಕೂಡ ಮಾಡುತ್ತಿದ್ದರು. ಜೊತೆಗೆ ಇವರು ಆಂಕರ್ ಆಗಿಯೂ ಕೆಲಸ ಮಾಡಿದ್ದಾರೆ.
ಆ್ಯಂಕರ್ ಕೂಡ ಹೌದು
ಹಾಡು ಹೇಳುತ್ತಿದ್ದ ಇವರಿಗೆ, ಯಾರೋ ಆಂಕರಿಂಗ್ ಗೆ ಆಡಿಶನ್ ಕೊಡು ಎಂದು ಹೇಳಿದಾಗ, ಮೊದಲು ಹೆದರಿ, ಆಮೇಲೆ ಆಡಿಶನ್ ಕೊಟ್ಟು ಆಂಕರ್ ಆಗಿ ಆಯ್ಕೆ ಆಗಿದ್ದರು ಅಶೋಕ್. ಇವರು ಸುವರ್ಣ ವಾಹಿನಿಯಲ್ಲಿ ಹೃದಯ ಹೃದಯ ಮ್ಯೂಸಿಕ್ ಕಾರ್ಯಕ್ರಮದಲ್ಲಿ ಆಂಕರ್ ಆಗಿ ಕಾಣಿಸಿಕೊಂಡಿದ್ದರು. ಇದಾದ ನಂತರ ರಾಜ್ ಮ್ಯೂಸಿಕ್ ನಲ್ಲೂ ಆಂಕರ್ ಆಗಿ ಕೆಲಸ ಮಾಡಿದ್ದರು.
ಸೀರಿಯಲ್ ಪಯಣ
ಅಶೋಕ್ ಶರ್ಮಾ ಅವಲಕ್ಕಿ ಪವಲಕ್ಕಿ, ವಾತ್ಸಲ್ಯ, SSLC ನನ್ ಮಕ್ಕಳು, ಮರಳಿ ಮನಸಾಗಿದೆ, ಸೀತಾ ರಾಮ ಸೀರಿಯಲ್ ಗಳಲ್ಲಿ (Serial) ನಟಿಸಿದ್ದಾರೆ. ಮಾಸ್ಟರ್ ಆನಂದ್ ನಿರ್ದೇಶನದ ಎಸ್ ಎಸ್ ಎಲ್ ಸಿ ನನ್ ಮಕ್ಕಳು ಇವರು ನಟಿಸಿದ ಮೊದಲ ಸೀರಿಯಲ್.
ರಾಕಿಂಗ್ ಸ್ಟಾರ್ ಯಶ್ ಜೊತೆ 21 ವರ್ಷದ ಸ್ನೇಹ
ಅಶೋಕ್ ಶರ್ಮಾ ಮತ್ತು ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರದ್ದು 21 ವರ್ಷಗಳ ಸ್ನೇಹಾ. ಇಬ್ಬರೂ ಹೋಗೋ ಬಾರೋ ಎನ್ನುವಷ್ಟು ಖಾಸಾ ದೋಸ್ತ್ ಗಳು. ಹಾಗಾಗಿ ಯಶ್ ಅಭಿನಯದ ಹೆಚ್ಚಿನ ಸಿನಿಮಾಗಳಲ್ಲಿ ಅಶೋ ಶರ್ಮಾ ನಟಿಸಿದ್ದಾರೆ.
ಸಿನಿ ಜರ್ನಿ
ಅಶೋಕ್ ಶರ್ಮಾ ದಿಲ್ ಕಾ ರಾಜಾ, ಚಡ್ಡಿ ದೋಸ್ತ್, ಸಪ್ನೋ ಕೀ ರಾಣಿ, ಮಿ. ಆಂಡ್ ಮಿ. ರಾಮಾಚಾರಿ, ಕೆಜಿಎಫ್, ವಿಜಯಾನಂದ, ಗೂಗ್ಲಿ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ಟೆಲಿ ಸಿನಿಮಾ, ಶಾರ್ಟ್ ಫಿಲಂಗಳಲ್ಲೂ ಅಶೋಕ್ ನಟಿಸಿದ್ದಾರೆ.
ಜನಪ್ರಿಯತೆ ಕೊಟ್ಟ ಸಿನಿಮಾಗಳು
ಯಶ್ ಜೊತೆಗೆ ನಟಿಸಿದ ಮಿ. ಆಂಡ್ ಮಿ. ರಾಮಾಚಾರಿ ಚಿತ್ರದಲ್ಲಿ ಯಶ್ ಬೆಸ್ಟ್ ಫ್ರೆಂಡ್ ಮತ್ತು ರಾಧಿಕಾ ಪಂಡಿತ್ ಅಣ್ಣ ದತ್ತಾ ಪಾತ್ರದಲ್ಲಿ ಇವರು ಮಿಂಚಿದ್ದರು. ಇದಲ್ಲದೇ ಕೆಜಿಎಫ್ ಚಿತ್ರದಲ್ಲಿ ಅನಂತ್ ನಾಗ್ ಅವರ ಯಂಗರ್ ವರ್ಶನ್ ಆಗಿ ಸಹ ಅಶೋಕ್ ನಟಿಸಿದ್ದರು.