ಭರ್ಜರಿ ಬ್ಯಾಚುಲರ್ಸ್ ಆಸಿಯಾ ಬೇಗಂ ಲಂಬಾಣಿ ಡ್ರೆಸ್‌ನಲ್ಲಿ ಮಿಂಚಿಂಗ್! ಗೋರ್‌ಮಾಟಿ, ವೈನಿ ಎಂದ ಫ್ಯಾನ್ಸ್

First Published | Oct 4, 2023, 6:33 PM IST

ಜೀ ಕನ್ನಡ ವಾಹಿನಿಯ ರಿಯಾಲಿಟಿ ಶೋ ಭರ್ಜರಿ ಬ್ಯಾಚುಲರ್ಸ್‌ನಲ್ಲಿ ಗಾಯಕ ಹನುಮಂತನ ಜೋಡಿಯಾಗಿರುವ ಮಾಡೆಲ್‌ ಆಸಿಯಾ ಬೇಗಂ, ಹನುಮಂತನ ತಾಂಡಾಕ್ಕೆ ಹೋಗಿದ್ದಳು. ಈ ವೇಳೆ ಲಂಬಾಣಿ ಡ್ರೆಸ್‌ ಹಾಕಿ ಕಂಗೊಳಿಸಿದ್ದು, ಫೋಟೋಗಳನ್ನು ಹಂಚಿಕೊಂಡಿದ್ದಾಳೆ. ಹಲವರು ಆಸಿಯಾಳನ್ನು ವೈನೀ (ಅತ್ತಿಗೆ), ಗೋರ್‌ಮಾಟಿ ಎಂದು ಕರೆದಿದ್ದಾರೆ.

ಕುರಿಗಾಹಿ ಗಾಯಕ ಹನುಮಂತನ ಮನೆ ಹಳ್ಳಿ ಸೊಗಡಿನಲ್ಲಿದ್ದು, ಯಾವುದೇ ನಗರ ವಾಸಿಗಳ ಸಂಸ್ಕೃತಿಯನ್ನು ಅಳವಡಿಕೆ ಮಾಡಿಕೊಂಡಿಲ್ಲ. ಅಲ್ಲಿ ಖಾರದ ಮೆಣಸಿನಕಾಯಿ ಚಟ್ನಿ ಅರೆಯುವುದು, ಜೋಳದ ರೊಟ್ಟಿ ಮಾಡಿದ ಆಸಿಯಾ ಬೇಗಂ ಬಂಜಾರ ಸಮುದಾಯದವರಿಂದ ಸೈ ಎನಿಸಿಕೊಂಡಿದ್ದಾರೆ. 
 

ನಮ್‌ ಲಂಬಾಣಿ ಸಾಂಗ್ ಮೇಲೆ ಒಂದ್ ವಿಡಿಯೋ ಮಾಡ್ರಿ, ನಾವು ವೇಟಿಂಗ್‌ ಮಾಡ್ತಿದೀವಿ ಎಂದು ಹೇಳಿದ ಒಂದೆರಡು ದಿನದಲ್ಲಿ ಲಂಬಾಣಿ ಸಾಂಗ್‌ಗೆ ಹೆಜ್ಜೆ ಹಾಕಿದ ವಿಡಿಯೋ ಅಪ್ಲೋಡ್‌ ಮಾಡಿದ್ದಾರೆ. 

Tap to resize

ಈ ಯುಗದ ಅದ್ಭುತವಾದ ಜೋಡಿ ನಿಮ್ಮದು, ಹಳ್ಳಿ ಹೈದ ಪ್ಯಾಟೆ ಹುಡುಗಿ. ಹೀಗೆ ಜೊತೆಯಾಗಿದ್ದು ಮನರಂಜನೆ ಕೊಡಿ ಎಂದು ಕೆಲವರು ಹೊಗಳಿದ್ದಾರೆ.

ಆಸಿಯಾ ಬೇಗಂ ಬಂಜಾರ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದನ್ನು ನೊಡಿದ ಫ್ಯಾನ್ಸ್ ಇದು ಹೆಮ್ಮೆಯ ಬಂಜಾರ ಬಂಧುಗಳ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದೀರಿ. ನಮ್ಮ ಆಸೆಯೊಂದಿತ್ತು ನಮ್ಮ ‌ಉಡುಗೆಯಲ್ಲಿ ನಿನ್ನೊಮ್ಮೆ ಶೋಭಸಿಬೇಕು ಎಂದು‌ ಆ ಇಚ್ಛೆ ಕಾರ್ಯರೂಪಕ್ಕೆ ಬಂದಿತು ಎಂದು ಸಂತಸಪಟ್ಟಿದ್ದಾರೆ.

ಆಸಿಯಾ ಬೇಗಂ ರೊಟ್ಟಿ ಮಾಡುವಾಗ ತೆಗೆಸಿಕೊಂಡು ಫೋಟೋ ಹಂಚಿಕೊಂಡಿದ್ದು, ಎಷ್ಟು ರೊಟ್ಟಿ ಮಾಡಿದ್ದೀರಿ..? ನೀವು ಬಜಾರ ಡ್ರೆಸ್ ನಲ್ಲಿ ಸೂಪರ್ ಕಾಣ್ತಿದ್ದೀರಾ ಎಂದು ಫ್ಯಾನ್ಸ್‌ ಕಮೆಂಟ್‌ ಮಾಡಿದ್ದಾರೆ.

ಹೌದು, ಬಂಜಾರ ಸಮುದಾಯದ ಉಡುಗೆಯನ್ನು ‌ಯಾರ ಸಹಾಯವು ಇಲ್ಲದೆ ತೊಟ್ಟುಕೊಳ್ಳುವುದು ಬರತ್ತಾ ಆಸಿಯಾ....? ಎಂದು ಕೆಲವರು ಕೇಳಿದ್ದಾರೆ. ಇನ್ನು ಕೆಲವರು ಕಮಲಿ ಬಾಯಿ ಎಂದು ಹೇಳಿದ್ದಾರೆ.

ನಮ್ಮ ಹನುಮಂತ ಅಣ್ಣನ ಮನೆ ನಮ್ಮ ತಾಲೂಕಿನ ಹೆಮ್ಮೆ ನಮ್ಮ ಹನುಮಂತ ಅಣ್ಣ ಎಂದು ಕಮೆಂಟ್‌ ಮಾಡಿದ್ದಾರೆ. ಇನ್ನು ಕೆಲವರು ನಮ್ಮ ವೈನೀ (ಅತ್ತಿಗೆ) ನಮ್ಮ ಊರಿಗೆ ಬಂದಿದ್ದು ತುಂಬಾನೆ ಖುಷಿಯಾಯಿತು ಎಂದು ಹೇಳಿಕೊಂಡಿದ್ದಾರೆ.

ಆಸಿಯಾ ನೀವು ಹಾವೇರಿಗೆ ಈ ತರ ಬಂದಿದ್ದೀರಾ ಅಂತ ಗೊತ್ತಾಗಿದ್ರೆ ದೇವರ ಆಣೆಗೂ ನಾವು ಬರ್ತಿದ್ದೆವು. ನೀವು ಬರ್ತೀರಿ ಅಂತ ಒಂದ ಪ್ರೂ ಆದ್ರೂ ಕೊಡ್ಬೇಕು ತಾನೇ ಎಂದು ಫ್ಯಾನ್ಸ್‌ ಪ್ರಶ್ನೆ ಮಾಡಿದ್ದಾರೆ.

ಅಕ್ಕ ನೀವು ನಮ್ಮ ಹಾವೇರಿಗೆ ಬಂದಿದ್ದು ತುಂಬಾನೇ ಖುಷಿಯಾಯಿತು ಅದರಲ್ಲೂ ನಮ್ಮ ಹನುಮಂತಣ್ಣನ ಜೋಡಿ ನೀವು ನೀವು ನೋಡೋಕೆ ತುಂಬಾ ಚೆನ್ನಾಗಿದ್ದೀರಾ. ಹಾಗೆ ಒಳ್ಳೆಯ ಗುಣನೂ ಇದೆ ನಿಮಗೆ ಆ ದೇವರು ಯಾವಾಗಲೂ ಖುಷಿಯಾಗಿ ಇರಲಿ ಎಂದು ಕೆಲವರು ಹಾರೈಸಿದ್ದಾರೆ.

Latest Videos

click me!