'ನನಗೆ ಯಾವುದೇ ಪಶ್ಚಾತ್ತಾಪ ಇಲ್ಲ'; ಫೋಟೋ ಸಮೇತ ಸ್ಪಷ್ಟನೆ ಕೊಟ್ಟ ರಾಮಾಚಾರಿ ನಟಿ ಐಶ್ವರ್ಯಾ ಸಾಲೀಮಠ

Published : Feb 27, 2025, 12:07 PM ISTUpdated : Feb 27, 2025, 12:45 PM IST

‘ರಾಮಾಚಾರಿ’ ಧಾರಾವಾಹಿ ನಟಿ ಐಶ್ವರ್ಯಾ ಸಾಲೀಮಠ ಅವರು ಸೋಶಿಯಲ್‌ ಮೀಡಿಯಾದಲ್ಲಿ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಐಶ್ವರ್ಯಾ ಸಾಲೀಮಠ ಅವರು ʼರಾಮಾಚಾರಿʼ ಸೀರಿಯಲ್‌ ತೆರೆ ಹಿಂದಿನ ಫನ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ತಾವು ನಟಿಸುತ್ತಿರೋದು ತುಂಬ ಖುಷಿ ಕೊಟ್ಟಿದೆ ಎಂದು ಹೇಳಿದ್ದಾರೆ. 

PREV
16
'ನನಗೆ ಯಾವುದೇ ಪಶ್ಚಾತ್ತಾಪ ಇಲ್ಲ'; ಫೋಟೋ ಸಮೇತ ಸ್ಪಷ್ಟನೆ ಕೊಟ್ಟ ರಾಮಾಚಾರಿ ನಟಿ ಐಶ್ವರ್ಯಾ ಸಾಲೀಮಠ

“ನಟನೆಯನ್ನು ವೃತ್ತಿಯಾಗಿ ಪರಿಗಣಿಸಿದ್ದು ನನಗೆ ತುಂಬ ಖುಷಿಯಾಗಿದೆ, ಅದನ್ನು ಹೇಳಲು ಪದಗಳು ಸಾಲೋದಿಲ್ಲ. ನನ್ನ ಜರ್ನಿ ಸುಲಭ ಇರಲಿಲ್ಲ. ಅಲ್ಲಿ ಏರಿಳಿತ ಇತ್ತು. ನಾನು ಆಯ್ಕೆ ಮಾಡಿಕೊಂಡ ದಾರಿಗಳಿಂದಲೇ ನಾನು ಇಲ್ಲಿದ್ದೇನೆ. ವಿಭಿನ್ನ ಪಾತ್ರಗಳನ್ನು ಮಾಡುತ್ತ, ಜನರಿಂದ ಹೊಗಳಿಕೆ ಪಡೆಯುತ್ತಿದ್ದೇನೆ. ನನಗೆ ಯಾವುದೇ ಪಶ್ಚಾತ್ತಾಪ ಇಲ್ಲ" ಎಂದು ಐಶ್ವರ್ಯಾ ಸಾಲೀಮಠ ಅವರು ಬರೆದುಕೊಂಡಿದ್ದಾರೆ.
 

26

ರಾಮಾಚಾರಿ ಧಾರಾವಾಹಿಯಲ್ಲಿ ವೈಶಾಖ ಪಾತ್ರದಲ್ಲಿ ಐಶ್ವರ್ಯಾ ಸಾಲೀಮಠ ಅವರು ನಟಿಸುತ್ತಿದ್ದಾರೆ. ಇದು ನೆಗೆಟಿವ್‌ ಪಾತ್ರ ಆಗಿದೆ. 

36

ನಾಯಕಿ ಚಾರುಲತಾ ಹಾಗೂ ರಾಮಾಚಾರಿ ಕುಟುಂಬಕ್ಕೆ ತೊಂದರೆ ಕೊಡೋದು ವೈಶಾಖ ಕೆಲಸ. ಈಗಾಗಲೇ ಇವಳು ಸಾಕಷ್ಟು ಮನೆಹಾಳು ಮಾಡುವ ಕೆಲಸ ಮಾಡಿದ್ದಾಳೆ. 

46

ವೈಶಾಖ ಪಾತ್ರ ಸಾಕಷ್ಟು ಕುತಂತ್ರ ಮಾಡಿದೆ. ಹೀಗಾಗಿ ಅವಳ ಮುಖಕ್ಕೆ ಸಗಣಿ ಹಚ್ಚಲಾಗಿತ್ತು, ಹುಚ್ಚಿ ಮಾಡಲಾಗಿತ್ತು, ಮುಖದ ಮೇಲೆ ಪೌಡರ್‌ ಹಾಕಲಾಗಿತ್ತು. 

56

ವೈಶಾಖ ಪಾತ್ರ ನೋಡಿ ಎಲ್ಲರೂ ಬೈಯ್ಯುತ್ತಾರೆ. ಇದನ್ನು ನೋಡಿದಾಗ ಅವರ ಪಾತ್ರ ವೀಕ್ಷಕರಿಗೆ ಕನೆಕ್ಟ್‌ ಆಗುತ್ತದೆ ಎಂದರ್ಥ ಎಂದು ಹೇಳಬಹುದು. 

66

ಮುಂದಿನ ದಿನಗಳಲ್ಲಿ ರಾಮಾಚಾರಿ ಧಾರಾವಾಹಿ ಹೇಗೆ ಮೂಡಿ ಬರಲಿದೆ ಎಂದು ಕಾದು ನೋಡಬೇಕಿದೆ. ಮುಂದೆ ವೈಶಾಖ ಒಳ್ಳೆಯವಳು ಆಗಲೂಬಹುದು.

Read more Photos on
click me!

Recommended Stories