'ಮಹಾನಟಿ' ಗಗನಾ ಮದ್ವೆ ಫಿಕ್ಸ್ ?; ಇದ್ದೋಳ್ ಒಬ್ಳುನೂ ಹಾರ್ಟ್‌ ಬ್ರೇಕ್ ಮಾಡಿದ್ಲು ಎಂದ ನೆಟ್ಟಿಗರು

Published : Feb 27, 2025, 08:15 AM ISTUpdated : Feb 27, 2025, 08:49 AM IST

ಗಗನ ಮೇಕಪ್ ಮಾಡಿಸಿಕೊಳ್ಳುತ್ತಿರುವ ಫೋಟೋ ಮತ್ತು ವಿಡಿಯೋಗಳನ್ನು ನೋಡಿ ಹುಡುಗರ ಹಾರ್ಟ್ ಬ್ರೇಕ್ ಆಗಿದೆ. ಸತ್ಯ ತಿಳಿದುಕೊಳ್ಳದೆ ಬೇಸರ ಮಾಡಿಕೊಂಡಿದ್ದಾರೆ.....   

PREV
16
'ಮಹಾನಟಿ' ಗಗನಾ ಮದ್ವೆ ಫಿಕ್ಸ್ ?; ಇದ್ದೋಳ್ ಒಬ್ಳುನೂ ಹಾರ್ಟ್‌ ಬ್ರೇಕ್ ಮಾಡಿದ್ಲು ಎಂದ ನೆಟ್ಟಿಗರು

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಮಹಾನಟಿ ಧಾರಾವಾಹಿ ಮೂಲಕ ಕಿರುತೆರೆ ಜರ್ನಿ ಆರಂಭಿಸಿದ ಚಿತ್ರದುರ್ಗದ ಪ್ರತಿಭೆ ಗಗನಾ. ಈಗ ಬೇಡಿಕೆಯಲ್ಲಿ ಇರುವ ರಿಯಾಲಿಟಿ ಶೋ ಸ್ಪರ್ಧಿ ಎನ್ನಬಹುದು.

26

ಮಹಾನಟಿ ಕಾರ್ಯಕ್ರಮದಲ್ಲಿ ಜನರ ಗಮನ ಸೆಳೆದ ಗಗನ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದರು. ಎರಡು ರಿಯಾಲಿಟಿ ಶೋ ಗಗನ ಅವರಿಗೆ ಕೈ ತುಂಬಾ ಆಫರ್ ನೀಡಿತ್ತು.

36

ಪಟಪಟ ಅಂತ ಮಾತನಾಡುವ ಗಗನ ಹುಡುಗ ಗಮನ ಸೆಳೆದರು. ಆದರೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಮೇಕಪ್ ಫೋಟೋ ಮತ್ತು ವಿಡಿಯೋಗಳನ್ನು ನೋಡಿ ಈಗ ನೆಟ್ಟಿಗರು ಬೇಸರ ಮಾಡಿಕೊಂಡಿದ್ದಾರೆ. 

46

'ಅಯ್ಯೋ ಚೆನ್ನಾಗಿ ಮಾತನಾಡಿಕೊಂಡು ಸಿಂಗಲ್ ಆಗಿದ್ದಿದ್ದು ಗಗನ ಮಾತ್ರ ..ಈಗ ಇದ್ದೋಳ್ ಒಬ್ಬಳು ಕೂಡ ಹಾರ್ಟ್ ಬ್ರೇಕ್ ಮಾಡಿ ಮದ್ವೆ ಆಗ್ತಿದ್ದಾಳೆ' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

56

ಈ ಫೋಟೋಶೂಟ್‌ ಹಿಂದೆ ಬೇರೆ ಸತ್ಯವಿದೆ. ಇದು ಮೇಕಪ್ ಆರ್ಟಿಸ್ಟ್‌ ಜೊತೆ ಕೋಲಾಬೋರೆಟ್ ಆಗಿ ಹಬ್ಬದ ಪ್ರಯುಕ್ತ ಮಾಡಿಸಿರುವ ಫೋಟೋಶೂಟ್. ಇದನ್ನು ಮದುವೆ ಎಂದು ಜನರು ಅಪಾರ್ಥ ಮಾಡಿಕೊಂಡಿದ್ದಾರೆ.

66

'ನನ್ನ ಪಾಲಿಗೆ ಬಂದಿರುವುದು ದೇವರು ಕೊಟ್ಟಿರುವ ಅವಕಾಶ. ದುಡ್ಡು ಕೊಡದೆ ನಟನೆ ಕಲಿತಿದ್ದೀನಿ ಹಾಗೂ ಡ್ಯಾನ್ಸ್ ಕಷ್ಟ ಆದರೂ ಕಲಿತಿದ್ದೀನಿ. ಮಿಡಲ್ ಕ್ಲಾಸ್ ಹುಡುಗಿಗೆ ಇದೆಲ್ಲಾ ಕನಸು' ಎಂದು ಗಗನ ಈ ಹಿಂದೆ ಹೇಳಿದ್ದರು. 

Read more Photos on
click me!

Recommended Stories