ರಿಯಾಲಿಟಿ ಶೋ ಮೂಲಕವೇ ಜಗ್ಗಪ್ಪ ಮತ್ತು ಸುಶ್ಮಿತಾ ಕನ್ನಡಿಗರ ಮನಸ್ಸು ಗೆದ್ದವರು. ಸದ್ಯ ಸುಶ್ಮಿತಾ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಭಾಗ್ಯ ಲಕ್ಷ್ಮಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಹಿತಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದಕ್ಕೂ ಮೊದಲು ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ನಟಿಸಿದ್ದರು.
ಇತ್ತ ಜಗ್ಗಪ್ಪ ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ನ ಪ್ರಮುಖ ಕಲಾವಿದರಲ್ಲಿ ಒಬ್ಬರಾಗಿದ್ದಾರೆ. ತಮ್ಮ ನಟನೆ ಮೂಲಕ ತೀರ್ಪುಗಾರರಿಂದ ಒಳ್ಳೆಯ ಕಮೆಂಟ್‌ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಮೊದಲು ಗಿಚ್ಚ ಗಿಲಿ ಗಿಲಿ ಶೋನಲ್ಲಿ ಕಾಣಿಸಿಕೊಂಡಿದ್ದರು.
ಸುವರ್ಣ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಜಗ್ಗಪ್ಪ ಲವ್ ಸ್ಟೋರಿ ಬಗ್ಗೆ ಮಾತನಾಡಿದ್ದರು. ನೋಡಿದಾಗ ಯಾರಪ್ಪಾ ಇದು ಸೂಪರ್ ಹಕ್ಕಿ ಅಂತ ಅನ್ನಿಸಿತು. ಮದುವೆ ಆದ್ಮೇಲೆ ಗೊತ್ತಾಯ್ತು ಶೂರ್ಪನಕಿ ಅಂತ ನಗೆ ಚಟಾಕಿ ಹಾರಿಸಿದ್ದರು.
ಮಜಾ ಭಾರತ ಹಾಸ್ಯ ಕಾರ್ಯಕ್ರಮದಲ್ಲಿ ಜಗ್ಗಪ್ಪ-ಸುಶ್ಮಿತಾ ಒಂದಾಗಿದ್ದರು. ಈ ಶೋನಿಂದಲೇ ಜಗ್ಗಪ್ಪ-ಸುಶ್ಮಿತಾ ನಡುವೆ ಪ್ರೇಮಾಂಕುರವಾಗಿತ್ತು. ಆರು ವರ್ಷ ಪ್ರೀತಿಸಿದ ಬಳಿಕ ಜಗ್ಗಪ್ಪ-ಸುಶ್ಮಿತಾ ಮದುವೆಯಾಗಿದ್ದರು.
ಕಾಮಿಡಿ ಕಿಲಾಡಿಗಳ ವೇದಿಕೆಯಲ್ಲಿ ಪತ್ನಿ ಆಸೆಯಂತೆ ಗುಲಾಬಿ ಹಿಡಿದು ಮೊಳಕಾಲೂರಿ ಪ್ರಪೋಸ್ ಮಾಡಿದ್ದರು. ಪ್ರಪೋಸ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
2023ರಲ್ಲಿ ಜಗ್ಗಪ್ಪ ಮತ್ತು ಸುಶ್ಮಿತಾ ಬೆಂಗಳೂರಿನ ಸಿಂಧೂರ್ ಕನ್ವೆನ್ಶನ್ ಹಾಲ್‌ನಲ್ಲಿ ಮದುವೆ ಆಗಿದ್ದರು. ಇಬ್ಬರ ಮದುವೆಗೆ ಹಲವು ಕಿರುತೆರೆ ಕಲಾವಿದರು ಆಗಮಿಸಿ ಜೋಡಿಗೆ ಶುಭ ಹಾರೈಸಿದ್ದರು.
ಇದೀಗ ಜಗ್ಗಪ್ಪ ಮತ್ತು ಸುಶ್ಮಿತಾ ಹೊಸ ಕಾರ್ ಬರಮಾಡಿಕೊಂಡಿದ್ದಾರೆ. ಸದ್ಯ ಇಬ್ಬರು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಜಗ್ಗಪ್ಪ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುತ್ತಾರೆ.