ಬ್ಯಾಕ್ ಗ್ರೌಂಡ್ ಡ್ಯಾನ್ಸರ್ ಆಗಿದ್ದೋಳು ಈಗ ನಾಯಕಿ, ಭಾವನಿಂದ ಹೊರ ಹಾಕಲ್ಪಟ್ಟ ಈ ಸೀರಿಯಲ್ ನಟಿ ಅಮ್ಮ ಇಂದಿಗೂ ಹೂ ಮಾರ್ತಾರೆ!

Published : Jun 30, 2024, 05:54 PM IST

ಅಂತರಪಟ ಧಾರಾವಾಹಿಯಲ್ಲಿ ಆರಾಧನಾ ಆಗಿ ನಟಿಸುತ್ತಿರುವ ನಟಿ ತನ್ವಿಯಾ ಬಾಲರಾಜ್ ಇವತ್ತು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ನಟಿಯ ಲೈಫ್ ಸ್ಟೋರಿ ಬಗ್ಗೆ ನೀವು ತಿಳಿಯಲೇಬೇಕು.   

PREV
17
ಬ್ಯಾಕ್ ಗ್ರೌಂಡ್ ಡ್ಯಾನ್ಸರ್ ಆಗಿದ್ದೋಳು ಈಗ ನಾಯಕಿ, ಭಾವನಿಂದ ಹೊರ ಹಾಕಲ್ಪಟ್ಟ ಈ ಸೀರಿಯಲ್ ನಟಿ ಅಮ್ಮ ಇಂದಿಗೂ ಹೂ ಮಾರ್ತಾರೆ!

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಅಂತರಪಟ (Antarapata). ಈ ಧಾರಾವಾಹಿಯಲ್ಲಿ ಮುನಿಯಮ್ಮ, ಆರಾಧನಾ ಆಗಿ ನಟಿಸುತ್ತಿರುವ ನಟಿ ತನ್ವಿಯಾ ಬಾಲರಾಜ್. ವಠಾರದ ಹುಡುಗಿಯಿಂದ ಸದ್ಯ ಸುಶಾಂತ್ ಹೆಂಡ್ತಿಯಾಗೋವರೆಗೂ ಪಾತ್ರಕ್ಕೆ ನ್ಯಾಯ ಒದಗಿಸಿಕೊಟ್ಟಿದ್ದಾರೆ ತನ್ವಿಯಾ. 
 

27

ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಜನಮೆಚ್ಚಿದ ಹೊಸ ಪರಿಚಯ ಅವಾರ್ಡ್ ಪಡೆದಿರುವ ತನ್ವಿಯಾ (Thanviya Bhalraj)… ಅಂತರಪಟದಲ್ಲಿ ನಾಯಕಿಯಾಗೋ ಮುನ್ನ ಬ್ಯಾಕ್ ಗ್ರೌಂಡ್ ಡ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದರು. ಅಲ್ಲಿಂದ ನಟಿಯಾಗೋವರೆಗೂ ತನ್ವಿಯಾ ಬಹಳಷ್ಟು ಕಷ್ಟಗಳನ್ನ ಎದುರಿಸಿದ್ದಾರೆ. 
 

37

ಮಿಡಲ್ ಕ್ಲಾಸ್ ಫ್ಯಾಮಿಲಿಯ ಹುಡುಗಿಯಾಗಿರುವ ತನ್ವಿಯಾ ತಂದೆ ಕಾಂಟ್ರಾಕ್ಟರ್, ತಾಯಿ ಹೂವು ಮಾರಿ ಜೀವನ ನಡೆಸ್ತಾರೆ. ತನ್ವಿಯಾ ನಟಿಯಾಗಿ ಮಿಂಚುತ್ತಿದ್ದರೂ ಅವರ ತಾಯಿ ಇನ್ನು ಹೂಮಾರಿ ಜೀವನ ನಡೆಸುವ ಮೂಲಕ ಸ್ವಾಭಿಮಾನಿಯಾಗಿ ಬದುಕು ಸಾಗಿಸುತ್ತಿದ್ದಾರೆ. 
 

47

ತನ್ವಿಯಾ ಮೂಲತಃ ಮಂಡ್ಯದವರು ಸದ್ಯ ಶೂಟಿಂಗ್ ಇರೋದರಿಂದ ಬೆಂಗಳೂರಿನಲ್ಲಿ ತಮ್ಮ ಹಿರಿಯ ಅಕ್ಕನ ಮನೆಯಲ್ಲಿ ನೆಲೆಸಿದ್ದಾರೆ. ಈ ಹಿಂದೆ ಕಿರಿಯ ಅಕ್ಕನ ಮನೆಲಿದ್ರಂತೆ, ಆದ್ರೆ ಭಾವನಿಗೆ ಇಷ್ಟವಿಲ್ಲದೇ, ಅವರ ಕೆಟ್ಟ ಬೈಗುಳ ಕೇಳಿಸಿಕೊಂಡು, ಮಧ್ಯರಾತ್ರಿ ಮನೆಬಿಟ್ಟು ಬಂದಿದ್ದರಂತೆ ನಟಿ. 
 

57

ಅಪ್ಪ- ಅಮ್ಮನಿಗೆ ಇಷ್ಟವಿಲ್ಲದೇ ಇದ್ದರೂ ಡ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದ ತನ್ವಿಯಾಗೆ ನಟಿಯಾಗೋ ಅವಕಾಶ ಸಿಕ್ಕಿದ್ದೆ ಪವಾಡವಂತೆ. ಬಾಲ್ಯದಿಂದಲೂ ನಟಿಯಾಗುವ ಕನಸು ಹೊಂದಿದ್ದ ನಟಿ ಸೋಶಿಯಲ್ ಮೀಡಿಯಾದಲ್ಲಿ (social media) ಸಿಕ್ಕಾಪಟ್ಟೆ ಡ್ಯಾನ್ಸ್, ರೀಲ್ಸ್ ಮಾಡಿ ಹಾಕುತ್ತಿದ್ದರು. 
 

67

ವಾಹಿನಿಗಳ ವಿವಿಧ ಕಾರ್ಯಕ್ರಮಗಳಲ್ಲಿ ಡ್ಯಾನ್ಸರ್ (background Dancer) ಆಗಿ ಕೆಲಸ ಮಾಡುತ್ತಿದ್ದ ತನ್ವಿಯಾ, ಒಂದು ಸಲ ಸೀರಿಯಲ್ ಸಂತೆಯಲ್ಲಿ ಗಿಣಿರಾಮ ಧಾರಾವಾಹಿ ನಟರಿಗೆ ಡ್ಯಾನ್ಸ್ ಹೇಳಿಕೊಡುತ್ತಿದ್ದರಂತೆ. ಆ ಸಂದರ್ಭದಲ್ಲೇ ಇವರನ್ನ ನೋಡಿ, ಅಂತರಪಟ ಸೀರಿಯಲ್ ಆಡಿಶನ್ ಗೆ ಕರೆದಿದ್ದು, ನಟಿ ಆಯ್ಕೆಯಾಗಿದ್ದು. ಈಗ ಜನರ ಪ್ರೀತಿಯ ಆರಾಧನಾ ಆಗಿ ಜನಪ್ರಿಯತೆ ಪಡೆದಿದ್ದಾರೆ. 

77

ಸದ್ಯ ತನ್ವಿಯಾ , ಆರಾಧನಾ ಆಗಿ ತನ್ನನ್ನು ಮನೆಯಿಂದ ಓಡಿಸಲು ಕುತಂತ್ರ ನಡೆಸುತ್ತಿರುವ ಅಮಲಾಳ ದಾಳಗಳನ್ನು ಎದುರಿಸುತ್ತಾ ನೋವು ಅನುಭವಿಸುತ್ತಿದ್ದಾಳೆ. ಎಲ್ಲಾ ಸಮಸ್ಯೆ ಮೀರಿ, ಸುಶಾಂತ್ ಜೊತೆ ಸೇರಿ ತನ್ನದೇ ಆದ ಈವೆಂಟ್ ಕಂಪನಿ ನಡೆಸುವಳೇ ಆರಾಧನಾ ಅನ್ನೋದನ್ನ ಕಾದು ನೋಡಬೇಕು. ಅದಕ್ಕೂ ಮುನ್ನ ಇವತ್ತು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ನಟಿಗೆ ನಮ್ ಕಡೆಯಿಂದ ಹ್ಯಾಪಿ ಬರ್ತ್ ಡೆ. 

Read more Photos on
click me!

Recommended Stories