Srinath Vasistha: ಪುತ್ರನ ಮದುವೆ ಸಂಭ್ರಮದಲ್ಲಿ ಶ್ರೀರಸ್ತು ಶುಭಮಸ್ತು ಜುಗ್ಗ ಮಾವ ಶ್ರೀನಾಥ್ ವಸಿಷ್ಠ

Published : Jun 06, 2025, 05:26 PM IST

ಕನ್ನಡದ ಕಿರುತೆರೆ, ಹಿರಿತೆರೆಯ ನಟ ಶ್ರೀರಸ್ತು ಶುಭಮಸ್ತು ಜುಗ್ಗ ಮಾವ ಖ್ಯಾತಿಯ ಶ್ರೀನಾಥ್ ವಸಿಷ್ಠ ಅವರ ಪುತ್ರನ ವಿವಾಹ ಅದ್ಧೂರಿಯಾಗಿ ನಡೆದಿದೆ.

PREV
17

ಕನ್ನಡ ಸಿನಿಮಾ, ಕಿರುತೆರೆ, ಹಿರಿತೆರೆಯಲ್ಲಿ ನಟರಾಗಿ, ನಿರ್ದೇಶಕರಾಗಿ, ಬರಹಗಾರರಾಗಿ ಗುರುತಿಸಿಕೊಂಡ ನಟ ಶ್ರೀನಾಥ್ ವಸಿಷ್ಠ (Srinath Vasistha) ಅವರ ಪುತ್ರನ ವಿವಾಹ ಸಮಾರಂಭ ಅದ್ಧೂರಿಯಾಗಿ ನಡೆದಿದೆ.

27

ಶ್ರೀನಾಥ್ ವಸಿಷ್ಠ ಅವರ ಪುತ್ರ ರಿತ್ವಿಕ್ ವಸಿಷ್ಠ (rithvik Vasistha) ಅವರ ವಿವಾಹ ಇತ್ತಿಚೆಗೆ ನಡೆದಿದ್ದು, ಮದುವೆಯ ವಿಡಿಯೋ, ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಶ್ರೀನಾಥ್ ವಸಿಷ್ಠ ಅವರ ಸೊಸೆಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ, ಹಾಗೆ ಮದುವೆ ಎಲ್ಲಿ ನಡೆದಿದೆ ಎನ್ನುವ ಮಾಹಿತಿ ಕೂಡ ಸಿಕ್ಕಿಲ್ಲ.

37

ಶ್ರೀನಾಥ ವಸಿಷ್ಠ ಅವರ ಪತ್ನಿ ವಂಧ್ಯಾ ಶ್ರೀನಾಥ್ ಡ್ಯಾನ್ಸರ್ ಆಗಿದ್ದು, ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ, ಹಿರಿಯ ಮಗ ರಿತ್ವಿಕ್ ವಸಿಷ್ಠ ಅವರ ಮದುವೆ ಈಗ ನಡೆದಿದೆ, ಕಿರಿಯ ಮಗಳು ಚಿನ್ಮಯಿ ವಸಿಷ್ಠ.

47

ರಿತ್ವಿಕ್ ವಸಿಷ್ಠ ಅವರು ಲಂಡನ್ ನ ಕ್ರಾನ್ ಫೀಲ್ಡ್ ಯುನಿವರ್ಸಿಟಿಯಲ್ಲಿ Safety and Human Factors in Avatuon ನಲ್ಲಿ ಎಂಎಸ್ಸಿ ಮಾಡಿದ್ದಾರೆ. ಮಗಳು ತಾಯಿಯಂತೆ ಭರತನಾಟ್ಯ ಕಲಾವಿದೆ.

57

ಶ್ರೀನಾಥ್ ವಸಿಷ್ಠ ಬಗ್ಗೆ ಹೇಳೊದಾದರೆ ಅವರೊಬ್ಬ ಪ್ರತಿಭಾನಿತ್ವಿತ ಕಲಾವಿದ ಕೂಡಾ ಹೌದು. ಕನ್ನಡದಲ್ಲಿ ಹರಕೆಯ ಕುರಿ, ರಂಗಿತರಂಗ, (Rangi Taranga) ಮಿ. ಮೊಮ್ಮಗ ಸೇರಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಮಂಥನ, ಡಾ. ಸುಕನ್ಯಾ, ಸಲೀಲ ಎನ್ನುವ ಸಿನಿಮಾ ನಿರ್ದೇಶನ ಕೂಡ ಮಾಡಿದ್ದಾರೆ.

67

ಅಷ್ಟೇ ಅಲ್ಲ ಮಳೆ ಬಿಲ್ಲು, ಮುಕ್ತ, ಮುತ್ತಿನ ತೆನೆ, ಸಿಲ್ಲಿ ಲಲ್ಲಿ (Silli Lalli) ಸೀರಿಯಲ್ ಗಳಿಗೆ ರೈಟರ್ ಆಗಿ ಕೆಲಸ ಮಾಡಿದ್ದಾರೆ. ಹಾಸ್ಯ ತರಂಗ, ತಿರುಕನ ಕನಸು, ನಿಗೂಢ ಮುಸ್ಸಂಜೆ ನಿರ್ದೇಶನ ಕೂಡ ಮಾಡಿದ್ದಾರೆ.

77

ಶ್ರೀನಾಥ್ ವಸಿಷ್ಠ ಅವರು ಸದ್ಯ ಕನ್ನಡ ಸಿರಿಯಲ್ ಗಳಲ್ಲಿ (Kannada serial) ಬ್ಯುಸಿಯಾಗಿದ್ದಾರೆ. ಕನ್ನಡದ ಕಾವೇರಿ ಕನ್ನಡ ಮೀಡಿಯಂ, ಶ್ರೀರಸ್ತು ಶುಭಮಸ್ತು ಸೇರಿದಂತೆ ಹಲವು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಸದ್ಯ ಮಗನ ಮದುವೆ ಸಂಭ್ರಮದಲ್ಲಿದ್ದಾರೆ.

Read more Photos on
click me!

Recommended Stories