ನಂಗಿನ್ನೂ ಮದ್ವೆ ಆಗಿಲ್ಲ ಎನ್ನುತ್ತಾ ದೊಡ್ಮನೆಗೆ ಎಂಟ್ರಿ ಕೊಟ್ಟ ಶಿಶಿರ್ ಶಾಸ್ತ್ರಿ ಡಿವೋರ್ಸಿ… ಇವರ ಮಾಜಿ ಪತ್ನಿ ಯಾರು ಗೊತ್ತಾ?

Published : Oct 02, 2024, 12:37 PM ISTUpdated : Oct 02, 2024, 01:10 PM IST

ಕಿಚ್ಚ ಸುದೀಪ್ ಎದುರು ನನಗಿನ್ನೂ ಮದ್ವೆನೆ ಆಗಿಲ್ಲ ಎನ್ನುತ್ತಾ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಕನ್ನಡ ಕಿರುತೆರೆ ನಟ ಶಿಶಿರ್ ಶಾಸ್ತ್ರೀ ಈಗಾಗಲೇ ಡೀವೊರ್ಸಿ ಅನ್ನೋದು ಗೊತ್ತಾ?   

PREV
17
ನಂಗಿನ್ನೂ ಮದ್ವೆ ಆಗಿಲ್ಲ ಎನ್ನುತ್ತಾ ದೊಡ್ಮನೆಗೆ ಎಂಟ್ರಿ ಕೊಟ್ಟ ಶಿಶಿರ್ ಶಾಸ್ತ್ರಿ ಡಿವೋರ್ಸಿ… ಇವರ ಮಾಜಿ ಪತ್ನಿ ಯಾರು ಗೊತ್ತಾ?

ಬಿಗ್ ಬಾಸ್ ಸೀಸನ್ 11 (Bigg Boss Season 11) ಅದ್ಧೂರಿಯಾಗಿ ಆರಂಭವಾಗಿದೆ. ಆರಂಭವಾದ ಎರಡೆ ದಿನದಲ್ಲಿ ಜಗಳ ಕೂಡ ಶುರುವಾಗಿದೆ. ಸ್ವರ್ಗ, ನರಕದ ಜನರ ಮಧ್ಯೆ ಕಿಚ್ಚು ಕೂಡ ಹಚ್ಚಿಕೊಂಡಿದೆ. ಮುಂದಿನ ದಿನಗಳಲ್ಲಿ ಇನ್ನು ಏನೇನು ಆಗಬಹುದು ಎನ್ನುವ ಮಾತು ಕೂಡ ಕೇಳಿ ಬರ್ತಿದೆ. ಸದ್ದು ಮಾಡಿದವರಲ್ಲಿ ಶಿಶಿರ್ ಶಾಸ್ತ್ರಿ ಕೂಡ ಒಬ್ಬರು. 
 

27

ಶಿಶಿರ್ ಶಾಸ್ತ್ರೀ (Shishir Shastry) ಮೊದಲ ದಿನವೇ ಯಮುನಾ ಸನ್ನಿಧಿ ಜೊತೆ, ಗೌತಮಿ ನರಕದ ಜನರ ಜೊತೆ ಮಾತನಾಡೋ ವಿಷಯವಾಗಿ ಜಗಳ ನಡೆದಿತ್ತು, ಶಿಶಿರ್ ಶಾಸ್ತ್ರಿ ಬಗ್ಗೆ ಕನ್ನಡ ಕಿರುತೆರೆ ವೀಕ್ಷಕರಿಗೆ ಹೊಸದಾಗಿ ಹೇಳುವ ಅಗತ್ಯಾನೆ ಇಲ್ಲ. ಯಾಕಂದ್ರೆ ಶಿಶಿರ್ ಹಲವಾರು ವರ್ಷಗಳಿಂದ ಕನ್ನಡ ಸೀರಿಯಲ್ ಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ಸಿನಿಮಾಗಳಲ್ಲೂ ನಟಿಸಿದ್ದಾರೆ ಶಿಶಿರ್. 
 

37

ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ ವೇಳೆ ವೇದಿಕೆಯಲ್ಲಿ ಕಿಚ್ಚ ಸುದೀಪ್ ಜೊತೆ ಮಾತನಾಡಿಡ ಶಿಶಿರ್, ಬಿಗ್‌ಬಾಸ್‌ಗೆ ಬರಬೇಕೆನ್ನುವುದು ತುಂಬಾ ವರ್ಷಗಳ ಕನಸು. ಈಗ ಅದು ನನಸಾಗಿದೆ.  ಕಳೆದ 13 ವರ್ಷಗಳಿಂದ ಇಂಡಸ್ಟ್ರಿಯಲ್ಲಿದ್ದೇನೆ. ಆ 13 ವರ್ಷಗಳ ಪ್ರತಿಫಲವಾಗಿ ಈಗ ಬಿಗ್ ಬಾಸ್ ವೇದಿಕೆ ಸಿಕ್ಕಿದೆ. ಈ ಸೀಸನ್ ಗೆಲ್ಲುವ ಹಠದೊಂದಿದೆ ನಟ ಬಿಗ್ ಬಾಸ್ ಗೆ ಕಾಲಿಟ್ಟಿದ್ದಾರೆ. 
 

47

ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುತ್ತಾ, ಶಿಶಿರ್ ತನಗಿನ್ನೂ ಮದ್ವೇನೆ ಆಗಿಲ್ಲ ಎಂದು ಹೇಳಿದ್ದರು. ಈಗ ನನಗೆ 33 ವರ್ಷ. ಬಿಗ್ ಬಾಸ್ ಮನೆಗೆ ಹೋಗಿ ಏನಾದರೂ ಸಾಧಿಸೋಣ ಅಂತ ಬಂದಿದ್ದೇನೆ ಎಂದು ಶಿಶಿರ್ ಹೇಳಿದ್ರು. ಆದರೆ ಸೋಶಿಯಲ್ ಮೀಡಿಯಾದಲ್ಲಿ ದೊರೆತಿರುವ ಮಾಹಿತಿಯ ಪ್ರಕಾರ ಶಿಶಿರ್ ಶಾಸ್ತ್ರಿಗೆ ಈಗಾಗಲೇ ಮದ್ವೆ ಆಗಿದೆ. 
 

57

ಹೌದು, ಈ ಕುರಿತು ಈ ಹಿಂದೆ ಹಲವಾರು ಸುದ್ದಿಗಳು ಕೇಳಿ ಬಂದಿವೆ. ಶಿಶಿರ್ ಶಾಸ್ತ್ರೀ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ಖ್ಯಾತಿಯ ಕೋಳಿ ರಮ್ಯಾ (Koli Ramya) ಜೊತೆ ಮದುವೆಯಾಗಿತ್ತು ಎನ್ನಲಾಗಿದೆ. ಮದುವೆಯಾಗಿ ಸ್ವಲ್ಪ ಸಮಯದಲ್ಲೇ ಇವರಿಬ್ಬರ ನಡುವೆ ವೈಮಸ್ಸು ಉಂಟಾಗಿ, ದೂರ ನಂತರ ಡೀವೋರ್ಸ್ ಪಡೆದುಕೊಂಡಿದ್ದಾರೆ ಎಂದು ಸಹ ಹೇಳಲಾಗುತ್ತೆ. 
 

67

ಕೋಳಿ ರಮ್ಯಾ ಕೂಡ ಕಿರುತೆರೆ ನಟಿ. ಇವರು ಮಿಥುನ ರಾಶಿ ಸೇರಿ ಹಲವಾರು ಕನ್ನಡ, ತೆಲುಗು ಮತ್ತು ತಮಿಳು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. ಈಗಾಗಲೇ ಜೀವನದಲ್ಲಿ ಮುಂದೆ ಬಂದಿರುವ ರಮ್ಯಾ ಡ್ಯಾನ್ಸ್ ಮಾಸ್ಟರ್ ವರದಾ ಜೊತೆ ರಿಲೇಶನ್ ಶಿಪ್ ನಲ್ಲೂ ಇದ್ದಾರೆ. ಆದರೆ ಶಿಶಿರ್ ಮಾತ್ರ ಇನ್ನೂ ಸಿಂಗಲ್ ಆಗಿ ಉಳಿದಿದ್ದಾರೆ. 
 

77

ಈಗಾಗಲೇ ಕನ್ನಡ ಕಿರುತೆರೆಯ ಅದ್ಭುತ ನಟ ಎಂದು ಗುರುತಿಸಿಕೊಂಡಿರುವ ಶಿಶಿರ್ ಶಾಸ್ತ್ರಿ ಮೇಲೆ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ನಂಬಿಕೆ ಇದೆ. ಬಿಗ್ ಬಾಸ್ ನಲ್ಲಿ ಅದ್ಭುತವಾಗಿ ಆಡುವ ಮೂಲಕ ಗೆದ್ದು ಬರುತ್ತಾರೆ ಎನ್ನುವ ನಂಬಿಕೆ ಇದೆ. ಮುಂದೆ ಇವರ ಆಟ ಹೇಗಿರಲಿದೆ ಅನ್ನೋದನ್ನ ಕಾದು ನೋಡಬೇಕು. 
 

Read more Photos on
click me!

Recommended Stories