ಬಿಗ್‌ಬಾಸ್‌ ಮನೆಯಲ್ಲಿ ಕಳ್ಳ, ಪೊಲೀಸ್‌, ಚಿನ್ನ, ಲಾಯರ್‌: ಈ ಸೀಸನ್‌ ಒಂದು ಸಿನಿಮಾ!

First Published | Oct 1, 2024, 6:53 PM IST

ಕನ್ನಡ ಬಿಗ್‌ಬಾಸ್‌ ಸೀಸನ್ 11ರ ಮನೆಯಲ್ಲಿ ಚೈತ್ರಾ ಕುಂದಾಪುರ, ಗೋಲ್ಡ್ ಸುರೇಶ್, ಗೌತಮಿ ಜಾಧವ್ ಮತ್ತು ವಕೀಲ ಜಗದೀಶ್ ಅವರನ್ನು ಒಳಗೊಂಡ ಸ್ಪರ್ಧಿಗಳ ಸಂಗತಿಯನ್ನು ಒಂದು ಕುತೂಹಲಕಾರಿ ಮೀಮ್ಸ್ ಮೂಲಕ ವಿವರಿಸಲಾಗಿದೆ.

ಕನ್ನಡ ಬಿಗ್‌ಬಾಸ್‌ ಸೀಸನ್ 11ರ ಮನೆಯಲ್ಲಿ ಈ ಬಾರಿ ಕದಿಯಲು ಚಿನ್ನ, ಕಳ್ಳ , ಪೊಲೀಸ್‌ ಮತ್ತು ಲಾಯರ್ ಎಲ್ಲರೂ ಇದ್ದಾರೆ ಎಂದು ಮೀಮ್ಸ್ ಗಳು ಓಡಾಡುತ್ತಿದೆ. ಇದರಲ್ಲಿ ಕಳ್ಳ ಯಾರು? ಚಿನ್ನ ಯಾರದ್ದು? ಪೊಲೀಸ್‌ ಯಾರು? ವಕೀಲ ಯಾರು ಎಂಬುದನ್ನು ನೀವಿಗಾಗಲೇ ಊಹಿಸಿರಬಹುದು.

ಚೈತ್ರಾ ಕುಂದಾಪುರ, ಕರಾವಳಿಯ ಫೈರ್ ಬ್ರಾಂಡ್, ಪ್ರಖರ ಭಾಷಣಗಾರ್ತಿ, ಆಕೆಯ ವಿರುದ್ಧ ಕೇಳಿಬಂದಿರುವ ಆರೋಪಗಳು, ಆಕೆಯ ವಿವಾದಗಳು ಒಂದೆರಡಲ್ಲ, ಇದೀಗ ಬಿಗ್‌ಬಾಸ್‌ ಮನೆಯಲ್ಲಿ ಆಕೆ ಸ್ಪರ್ಧಿಯಾಗಿದ್ದು, ಮೊದಲ ದಿನದಿಂದಲೇ ವಾಗ್ವಾದಗಳಲ್ಲಿ ತೊಡಗಿದ್ದಾರೆ.  ಹಿಂದೂಪರ ವಿಚಾರಧಾರೆಗಳನ್ನು ಹೊಂದಿರುವ ಚೈತ್ರಾ ಕುಂದಾಪುರ ಒಂದು ಬಾರಿ ಭಾಷಣಕ್ಕೆ ಮುಖ್ಯ ಅತಿಥಿಯಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಿದ್ದಾಗ ತನ್ನ ಮೇಲೆ ಹಲ್ಲೆ ನಡೆದಿದೆ. ಚಿನ್ನದ ಸರ ಕದ್ದು ಹೋಗಿದೆ ಎಂದು ಪೊಲೀಸ್‌ ದೂರು ನೀಡಿದ್ದರು. ಇದೊಂದು ಸುಳ್ಳು ಆರೋಪ ಹೊರಿಸಿದ್ದಾರೆ ಎಂಬ ಆರೋಪ ಆಕೆಯ ಮೇಲೆ ಇತ್ತು.

Tap to resize

ಇನ್ನು ಬಿಗ್‌ಬಾಸ್‌ ಕನ್ನಡ ಮನೆಗೆ ಗೋಲ್ಡ್ ಸುರೇಶ್ ಸ್ಪರ್ಧಿಯಾಗಿದ್ದಾರೆ. ಕೆಜಿ ಗಟ್ಟಲೆ ಚಿನ್ನ ಹಾಕಿಕೊಂಡು ಬಿಗ್‌ಬಾಸ್‌ ಮನೆಗೆ ಬಂದಿದ್ದು. ಇದನ್ನು ಮೀಮ್ಸ್ ನಲ್ಲಿ ಲಿಂಕ್ ಮಾಡಲಾಗಿದೆ.  ಬಿಗ್‌ಬಾಸ್‌ ಮನೆಯಲ್ಲಿ ಕದಿಯಲು ಚಿನ್ನ ಗೋಲ್ಡ್ ಸುರೇಶ್ ಬಳಿ ಬೇಕಾದಷ್ಷು ಚಿನ್ನ ಇದೆ ಎಂದು ತಮಾಷೆ ಮಾಡಲಾಗುತ್ತಿದೆ.
 

ಇನ್ನು ಪೊಲೀಸ್‌ ಯಾರು ಎಂದು ನೀವು ಯೋಚನೆ ಮಾಡಬಹುದು. ಅದ್ಯಾರು ಅಲ್ಲ. ಗೌತಮಿ ಜಾಧವ್, ಸತ್ಯ ಧಾರವಾಹಿಯಲ್ಲಿ ಗೌತಮಿ ಜಾಧವ್ ಪೊಲೀಸ್‌ ಪಾತ್ರ ನಿರ್ವಹಿಸಿದ್ದರು. ಇವರು ಚಿನ್ನ ಕದ್ದರೆ ಕಳ್ಳನನ್ನು  ಬಂಧಿಸುತ್ತಾರಂತೆ ಗೌತಮಿ.

ಕೊನೆಗೆ ಕಳ್ಳನನ್ನು ಪೊಲೀಸ್‌ ಠಾಣೆಯಿಂದ ಬಿಡಿಸಿಕೊಂಡು ಬರುವ ಲಾಯರ್ ಎಂದರೆ ಅದು ವಕೀಲ ಜಗದೀಶ್ ಆಗಿದ್ದಾರೆ. ಹೀಗಾಗಿ ಬಿಗ್‌ಬಾಸ್‌ ಆರಂಭ ಆದಾಗಿಂದ ಮೀಮ್ಸ್ , ಟ್ರೋಲ್ ಗಳು ಸಿಕ್ಕಾಪಟ್ಟೆ ಈ ವಿಚಾರದಲ್ಲಿ ವೈರಲ್ ಆಗಿದೆ.

Latest Videos

click me!