ಮಾನವೀಯತೆ ಮನುಷ್ಯರಿಗಾಗಿ, ರಾಕ್ಷಸರಿಗಾಗಿ ಅಲ್ಲ… ಅತ್ಯಾಚಾರಿಗಳನ್ನ ಕೊಂದು ಬಿಡಿ… ಕಾನೂನು ಬದಲಾವಣೆಗೆ ಆಗ್ರಹಿಸಿದ ಶೈನ್ ಶೆಟ್ಟಿ

First Published Aug 17, 2024, 12:25 PM IST

ಕೊಲ್ಕತ್ತಾ ವೈದ್ಯಕೀಯ ಕಾಲೇಜಿನಲ್ಲಿ ನಡೆದ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಕುರಿತು ನಟ, ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದು, ಕಾನೂನು ಬದಲಾವಣೆಗೆ ಆಗ್ರಹಿಸಿದ್ದಾರೆ.  ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿರುವ ಅವರ ಮಾತುಗಳು ಚರ್ಚೆಗೆ ಗ್ರಾಸವಾಗಿವೆ.   
 

ದೇಶವನ್ನೇ ನಡುಗಿಸಿದ ಕೊಲ್ಕತ್ತಾ ವೈದ್ಯಕೀಯ ಕಾಲೇಜಿನಲ್ಲೇ ನಡೆದ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ (rape and murder case) ವಿರುದ್ಧ ದೇಶವೇ ತಿರುಗಿ ಬಿದ್ದಿದ್ದು, ಇದೀಗ ಸೆಲೆಬ್ರಿಟಿಗಳು ಸಹ ಧನಿ ಎತ್ತಿದ್ದಾರೆ. ನಟ ಹಾಗೂ ಬಿಗ್ ಬಾಸ್ 7 ವಿನ್ನರ್ ಆಗಿರುವ ಶೈನ್ ಶೆಟ್ಟಿ ಸಹ ಈ ಬಗ್ಗೆ ಖಡಕ್ ಮಾತುಗಳನ್ನಾಡಿದ್ದಾರೆ. 
 

ತಮ್ಮ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡದಾದ ನೋಟ್ ಗಳನ್ನ ಬರೆದಿರುವ ಶೈನ್ ಶೆಟ್ಟಿ (Shine Shetty) ಕಾನೂನು ಬದಲಾಗಲೇಬೇಕು ಎಂದು ಕೇಳಿಕೊಂಡಿದ್ದಾರೆ. ಭಾರತದಲ್ಲಿನ ಕಾನೂನುಗಳನ್ನು ಶಾಸನಾತ್ಮಕ ತಿದ್ದುಪಡಿಯ ಮೂಲಕ ಮತ್ತು ಸಾಂವಿಧಾನಿಕ ಸವಾಲಿನ ಮೂಲಕ ಎರಡು ರೀತಿಯಲ್ಲಿ ಬದಲಾಯಿಸಬಹುದು.' ಮತ್ತು ಭಾರತದ ಸಂಸತ್ತು ಮತ್ತು ಅಲ್ಲಿ ಕುಳಿತಿರುವ ಪ್ರತಿಯೊಬ್ಬರೂ ಅದನ್ನ ಬದಲಾಯಿಸಿ, ಇದೀಗ ಸಮಯ ಬಂದಿದೆ ಎನ್ನುತ್ತಲೇ ಮತ್ತಷ್ಟು ಮಾಹಿತಿಯನ್ನ ಹಂಚಿಕೊಂಡಿದ್ದಾರೆ. 

Latest Videos


ಶೈನ್ ಶೆಟ್ಟಿ ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದು, ನಾನು ಭಾರತವನ್ನು ಭಾರತ ಮಾತೆ ಎನ್ನುವ ದೇಶಕ್ಕೆ ಸೇರಿದವನಾಗಿದ್ದೇನೆ, ನಾನು ಹಲವಾರು ದೇವತೆಗಳನ್ನ ಮತ್ತು ಹಬ್ಬಗಳನ್ನ ಆಚರಿಸುವ, ಈ ಹಬ್ಬಗಳಲ್ಲಿ ಲಕ್ಷ್ಮೀ, ಸರಸ್ವತಿ ಎಂದು ಮಹಿಳೆಯರಿಗೆ ಗೌರವ ಕೊಡುವ, ಮಹಿಳೆಯರನ್ನು ಪೂಜಿಸುವ, ಮಹಿಳೆಯರನ್ನು ಸೆಲೆಬ್ರೇಟ್(celebrating women)  ಮಾಡುವ ದೇಶಕ್ಕೆ ಸೇರಿದವನಾಗಿದ್ದೇನೆ.
 

ಇಂದು 78ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ನಿಜವಾಗಿಯೂ ನಾವು ಸ್ವಾತಂತ್ರ್ಯವನ್ನು ಆಚರಿಸುತ್ತಿದ್ದೇವೆಯೆ?  ನಿಜವಾಗಿಯೂ ಸ್ವತಂತ್ರ್ಯ ಭಾರತ (Independent India) ಎನ್ನುವ ಹೆಮ್ಮೆ ನಮ್ಮಲ್ಲಿ ಇದೆಯೇ? ಲಕ್ಷ್ಮೀ, ಸರಸ್ವತಿ ಎಂದು ಗೌರವಿಸುವ ಮಹಿಳೆಯರನ್ನೇ ಅತ್ಯಾಚಾರ ಮಾಡಿ, ಕೊಲೆ ಮಾಡುತ್ತಿರುವಾಗ ನಾನು ಮನೆಯಲ್ಲಿ ಲಕ್ಷ್ಮೀ ಪೂಜೆ ಮಾಡಬೇಕೆ? ಎಂದು ಪ್ರಶ್ನಿಸಿದ್ದಾರೆ ಶೈನ್ ಶೆಟ್ಟಿ. 

ನನ್ನ ದೇಶದ ನಾಯಕರೇ? ದೇಶದ ಅಧಿಕಾರಿಗಳೇ? ದೇಶದ ನ್ಯಾಯಂಗ ವ್ಯವಸ್ಥೇಯೇ…? ಇನ್ನೆಷ್ಟು ಜನ? ಇನ್ನೆಷ್ಟು ಸಮಯ? 3 ವರ್ಷದಿಂದ ಹಿಡಿದು, 31 ವರ್ಷದಿಂದ ಹಿಡಿದು, 75ವಯಸ್ಸಿನ ಮಹಿಳೆಯವರೆಗೂ, ಏಳು ವರ್ಷದ ಮಗುವಿನ ಅಮ್ಮನಿಂದ ಹಿಡಿದು, ಸ್ಪಾನಿಶ್ ಬೈಕರ್ ವರೆಗೆ, ಮಗುವಿನಿಂದ ಹಿಡಿದು, ವೈದ್ಯರವರೆಗೆ ಇನ್ನೆಷ್ಟು ಜನ? ಒಬ್ಬರ ತಾಯಿ, ಇನ್ನೊಬ್ಬರ ಅಮ್ಮ, ಮತ್ತೊಬ್ಬರ ಹೆಂಡತಿ, ಮಗದೊಬ್ಬರ ಗರ್ಲ್ ಫ್ರೆಂಡ್ ಇನ್ನೆಷ್ಟು ಜನ? 
 

ನೀವು ಯಾವುದಕ್ಕೆ ಕಾಯುತ್ತಿದ್ದೀರಿ ನಾಯಕರೇ? ನಿಮ್ಮ ಕುಟುಂಬದ ಯಾರಾದರೊಬ್ಬ ಮಹಿಳಾ ಸದಸ್ಯರಿಗೆ ಈ ರೀತಿ ಆಗೋದಿಕ್ಕೆ ಕಾಯ್ತಿದ್ದೀರಾ? ಅಥವಾ ಶ್ರೀಮಂತ ಗೌರವಾನ್ವಿತ ಕುಟುಂಬದ ಮನೆ ಮಗಳ ಜೊತೆ ಈ ರೀತಿ ಆಗೋದಕ್ಕೆ ಕಾಯ್ತಿದ್ದೀರಾ? ಇಲ್ಲಿವರೆಗೆ ಅದೆಷ್ಟೋ ಕಾನೂನುಗಳು ಬದಲಾಗಿದೆ. ಒಳ್ಳೆಯದಕ್ಕಾಗಿ ಕಾನೂನುಗಳು ಬದಲಾಗಲೇಬೇಕು (change the law). ಹಾಗಿದ್ರೆ ಅತ್ಯಾಚಾರಿಗಳ ವಿಷಯದಲ್ಲಿ ಯಾಕೆ ಕಾನೂನು ಬದಲಾಗಿಲ್ಲ ನಾಯಕರೇ ಎಂದು ಕೇಳಿದ್ದಾರೆ ಶೈನ್ ಶೆಟ್ಟಿ. 
 

ಅತ್ಯಾಚಾರಿಗಳಿಗೆ ಅತ್ಯಂತ ದೊಡ್ಡ ಶಿಕ್ಷೆಯೇ ವಿಧಿಸಬೇಕು (capital punishment for the rapist). ಅದು ಅವರಿಗೆ ನೋವನ್ನುಂಟುಮಾಡಬೇಕು, ಅತ್ಯಂತ ಕ್ರೂರವಾಗಿರಬೇಕು, ಭಯಾನಕವೂ ಆಗಿರಬೇಕು. ಅದನ್ನ ನೋಡಿದ್ರೆ, ಮತ್ತೆ ಯಾವ ಪುರುಷನ ತಲೆಯಲ್ಲೂ ಅತ್ಯಾಚಾರದ ಬಗ್ಗೆ ಸಣ್ಣ ಯೋಚನೆ ಕೂಡ ಬರಬಾರದು ಅಂತಹ ಶಿಕ್ಷೆ ನೀಡಬೇಕು ಎಂದು ಶೈನ್ ಶೆಟ್ಟಿ ಕೇಳಿಕೊಂಡಿದ್ದಾರೆ. 
 

ಕೊನೆಯದಾಗಿ ನಟ ಶೈನ್ ಅಧಿಕಾರಿಗಳನ್ನ, ನ್ಯಾಯಾಂಗ ವ್ಯವಸ್ಥೆಯನ್ನು ಪ್ರಶ್ನಿಸುತ್ತಾ ನೀವು ಮಾನವೀಯತೆಗೆ ಬದ್ಧರಾಗಿದ್ದೀರಿ ಎಂದು ನಿಮಗೆ ಅನಿಸುತ್ತಾ? ಮಾನವೀಯ ಮನುಷ್ಯರಿಗಾಗಿ ಇರೋದು, ರಾಕ್ಷಸರಿಗಾಗಿ ಅಲ್ಲ. ಆ ರಾಕ್ಷಸರನ್ನು ಕೊಂದು ಹೊಸ ಬದಲಾವಣೆ ತನ್ನಿ, ಇಲ್ಲಾಂದ್ರೆ ನಾವೇ ಬದಲಾಗಿ ರಾಕ್ಷಸರನ್ನ ಕೊಂದು ಬಿಡುತ್ತೇವೆ. ಕೊನೆಯ ಭರವಸೆ ಇಟ್ಟುಕೊಂಡಿರುವ ಒಬ್ಬ ಪುರುಷನಿಂದ ಈ ಪತ್ರ ಎಂದು ಬರೆದುಕೊಂಡಿದ್ದಾರೆ. 
 

click me!