ಕನ್ನಡ ಕಿರುತೆರೆ ನಟ, ಬಿಗ್ ಬಾಸ್ ಸ್ಪರ್ಧಿ ಹಾಗೂ ರಾಪರ್ ಆಗಿರುವ ಶಮಂತ್ ಬ್ರೋ ಗೌಡ ಪತ್ನಿ ಜೊತೆ ಶಿರಡಿ ಸಾಯಿ ಬಾಬಾ ದರ್ಶನ ಪಡೆದು ಬಂದಿದ್ದು, ಸಾಯಿ ಬಾಬಾ ಪವಾಡದ ಬಗ್ಗೆ ಶಮಂತ್ ಪತ್ನಿ ಮೇಘನಾ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಕನ್ನಡದ ರ್ಯಾಪರ್ ಆಗಿ ಗುರುತಿಸಿಕೊಂಡಿರುವ, ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿಯಾಗಿ ಜನಮನ ಗೆದ್ದ ಹಾಗೂ ಲಕ್ಷ್ಮೀ ಬಾರಮ್ಮ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ನಟ ಶಮಂತ್ ಬ್ರೋ ಗೌಡ ಪತ್ನಿ ಜೊತೆ ಶಿರಡಿಗೆ ಭೇಟಿ ನೀಡಿದ್ದಾರೆ.
25
ಶಿರಡಿಯಲ್ಲಿ ಪತ್ನಿ ಜೊತೆ ಶಮಂತ್
ಶಮಂತ್ ತಮ್ಮ ಪತ್ನಿ ಮೇಘನಾ ಜೊತೆ ಶಿರಡಿ ಸಾಯಿ ಬಾಬಾನ ದರ್ಶನ ಪಡೆದು ಬಂದಿದ್ದಾರೆ. ಸಾಯಿ ಬಾಬಾನ ಮೂರ್ತಿ ಹಿಡಿದು, ಶಿರಡಿ ದೇಗುಲದ ಮುಂದೆ ನಿಂತು ಫೋಟೊ ತೆಗೆಸಿಕೊಂಡಿದ್ದಾರೆ. ಫೋಟೊಗಳನ್ನು ಮೇಘನಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
35
ಸಾಯಿಬಾಬ ಕುರಿತು ಮೇಘನಾ ಹೇಳಿದ್ದೇನು?
ಇದು ಒಂದು ದೊಡ್ಡ ಕಥೆ ಅಂತ ನಾನು ಹೇಳಲೇಬೇಕು! 2019 ರಲ್ಲಿ ನಾನು ಶಿರಿಡಿಗೆ ಭೇಟಿ ನೀಡಿದಾಗ ನನ್ನ ಜೀವನದಲ್ಲಿ ಏನೂ ಇರಲಿಲ್ಲ! ನನ್ನ ಜೀವನ ಎಲ್ಲಿಗೆ ಹೋಗುತ್ತದೆ ಎಂದು ಯಾವುದೇ ಯೋಜನೆಗಳಿಲ್ಲ, ನನ್ನ ವೃತ್ತಿಜೀವನ ಬಗ್ಗೆಯೂ ಗೊತ್ತಿರಲಿಲ್ಲ ಮತ್ತು ನನ್ನ ಸಂಗಾತಿಯೊಂದಿಗಿನ ಸಂಬಂಧ ಎಲ್ಲಿಗೆ ಹೋಗುತ್ತದೆ ಎಂದೂ ಕೂಡ ತಿಳಿದಿರಲಿಲ್ಲ. ಆದರೆ ನಾನು ಅವರ ಮೇಲೆ ನಂಬಿಕೆ ಇಟ್ಟಿದ್ದೆ ಮತ್ತು ನನಗೆ ಎಲ್ಲವೂ ಇದ್ದಾಗ ನನ್ನನ್ನು ಮತ್ತೆ ಕರೆಸಿಕೊಳ್ಳುವಂತೆ ಬಾಬಾ ಅವರನ್ನು ಕೇಳಿದೆ.
ನನ್ನ ಪ್ರೀತಿಯ ಗಂಡ ಶಮಂತ್ ಗೌಡ ಅವರನ್ನು ಮದುವೆಯಾದ ನಂತರ ಎಲ್ಲಾ ಬದಲಾಯಿತು. ಇದು ಒಂದು ಪವಾಡ ಎಂದು ನಾನು ಹೇಳಲೇಬೇಕು, ಈ 6 ವರ್ಷಗಳಲ್ಲಿ ನಾನು ಶಿರಿಡಿಗೆ ಹಲವು ಬಾರಿ ಭೇಟಿ ನೀಡಲು ಪ್ರಯತ್ನಿಸಿದೆ, ಆದರೆ ಭೇಟಿ ನೀಡಲು ನನಗೆ ಸಾಧ್ಯವಾಗಲಿಲ್ಲ! ನೀವು ಬಾಬಾ ಅವರ ಮುಂದೆ ಏನನ್ನಾದರೂ ಇಟ್ಟುಕೊಂಡು ಕೇಳಿದಾಗ ಅವರು ಎಂದಿಗೂ ನಿಮ್ಮ ಕೈ ಬಿಡುವುದಿಲ್ಲ!
55
6 ವರ್ಷಗಳ ಬಳಿಕ ಶಿರಡಿಗೆ ಭೇಟಿ
ಇದೀಗ 6 ವರ್ಷಗಳ ನಂತರ ನಾನು ನನ್ನ ಪತಿಯೊಂದಿಗೆ ನನ್ನ ಜೀವನದಲ್ಲಿ ಸ್ಪಷ್ಟತೆ ಮತ್ತು ನನ್ನ ವೃತ್ತಿಜೀವನದಲ್ಲಿ ಕೈ ತುಂಬ ಕೆಲಸದೊಂದಿಗೆ ಶಿರಿಡಿಗೆ ಭೇಟಿ ನೀಡಿದ್ದೇನೆ! ನೀವು ಅವರನ್ನು ಬಂಬಿದ್ದೇ ಆದರೆ ಅವರು ನಿಮ್ಮನ್ನು ಎಂದಿಗೂ ಬಿಡುವುದಿಲ್ಲ! ಸಾಯಿ ರಾಮ್ ಎಂದು ಬರೆದುಕೊಂಡಿದ್ದಾರೆ ಮೇಘನಾ. ಆ ಮೂಲಕ ತಮ್ಮ ಜೀವನದಲ್ಲಿ ನಡೆದ ಸಾಯಿ ಬಾಬಾನ ಪವಾಡವನ್ನು ತಿಳಿಸಿದ್ದಾರೆ ಮಿಸಸ್ ಶಮಂತ್.