'Doddmane ಊta': ದಿಲೀಪ್ ಶೆಟ್ಟಿ ಜೊತೆ ಸೇರಿ ಜೀವನದ ಹೊಸ ಅಧ್ಯಾಯ ಆರಂಭಿಸಿದ Ramika Shivu

Published : Jan 02, 2026, 11:21 AM IST

Actress Ramika Shivu: ಇತ್ತೀಚೆಗಷ್ಟೇ ತಮ್ಮ ಹೆಸರನ್ನೇ ಬದಲಾಯಿಸಿಕೊಂಡ ಕನ್ನಡ ಕಿರುತೆರೆ ನಟಿ ರಮಿಕಾ ಶಿವು, ಇದೀಗ ಹೊಸ ವರ್ಷಕ್ಕೆ ಹೊಸ ಅಧ್ಯಾಯ ಶುರು ಮಾಡಿದ್ದಾರೆ. ಈ ಕುರಿತು ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

PREV
17
ಕನ್ನಡ ಕಿರುತೆರೆಯೆ ಮುದ್ದು ಜೋಡಿ

ಕನ್ನಡ ಕಿರುತೆರೆಯ ಮುದ್ದಾದ ಜೋಡಿಗಳಲ್ಲಿ ಒಬ್ಬರು ಅಂದ್ರೆ ಅದ್ರು ರಮಿಕಾ ಶಿವು ಮತ್ತು ದಿಲೀಪ್ ಆರ್ ಶೆಟ್ಟಿ. ಈ ಜೋಡಿ ಜೊತೆಯಾಗಿ ‘ನೀನಾದೆ ನಾ’ ಸೀರಿಯಲ್’ಗಳಲ್ಲಿ ನಟಿಸಿದ್ದರು. ಇದೀಗ ಜೊತೆಯಾಗಿ ಮತ್ತೊಂದು ಅಧ್ಯಾಯ ಶುರು ಮಾಡಿದ್ದಾರೆ.

27
ಹೊಸ ಅಧ್ಯಾಯ ಆರಂಭ

ಇತ್ತೀಚೆಗಷ್ಟೇ ನಟಿ ರಮಿಕಾ ತಮ್ಮ ಹೆಸರನ್ನು ಖುಷಿ ಶಿವು ನಿಂದ ರಮಿಕಾ ಶಿವು ಆಗಿ ಬದಲಾಯಿಸಿದ್ದರು. ಇದೀಗ ಹೊಸ ಅಧ್ಯಾಯ ಆರಂಭ ಮಾಡಿರೋದಾಗಿ ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

37
'Doddmane ಊta'

ಅಂದ ಹಾಗೇ ರಮಿಕಾ ಶಿವು ತಮ್ಮದೇ ಆದ ಹೊಟೇಲ್ ಉದ್ಯಮವನ್ನು ಆರಂಭಿಸಿದ್ದು, ಈ ಕುರಿತು ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನಟಿ ತಮ್ಮ ಪೋಸ್ಟ್ ನಲ್ಲಿ ಸಚಿನ್ ವಿಜಯ್ ಗೌಡ ಅವರನ್ನು ಮಾತ್ರ ಟ್ಯಾಗ್ ಮಾಡಿದ್ದಾರೆ. ಆದರೆ ‘ಶ್ರಾವಣಿ ಸುಬ್ರಹ್ಮಣ್ಯ’ ನಟ ಅಥರ್ವ ದಿಲೀಪ್ ಶೆಟ್ಟಿಯವರಿಗೂ ಕೂಡ ಶುಭಾಶಯವನ್ನು ಕೋರಿದ್ದಾರೆ.

47
ನಟಿ ಹೇಳಿದ್ದೇನು?

ಹೊಸ ಅಧ್ಯಾಯ ಆರಂಭ. ನಮ್ಮ ಹೊಸ ಹೋಟೆಲ್ ಉದ್ಯಮದ ಉದ್ಘಾಟನೆಯನ್ನು ಘೋಷಿಸಲು ಹೆಮ್ಮೆಪಡುತ್ತೇನೆ 'Doddmane ಊta'- ಮನದ ಹಿತದ ಊಟ, ಇದು ನನ್ನ ಜೀವನದಲ್ಲಿ ಬಹಳ ವಿಶೇಷವಾದ ಮೈಲಿಗಲ್ಲನ್ನು ಸೂಚಿಸುತ್ತದೆ ಮತ್ತು ಮುಂದೆ ಏನಾಗಲಿದೆ ಎಂಬುದರ ಕುರಿತು ನಾವು ನಿಜವಾಗಿಯೂ ಉತ್ಸುಕರಾಗಿದ್ದೇವೆ ಎಂದು ಬರೆದುಕೊಂಡಿದ್ದಾರೆ.

57
ಭರವಸೆ ನೀಡಿದ ರಮಿಕಾ

ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲದೊಂದಿಗೆ, ನಿರಾಶೆಗೊಳಿಸದ ಅನುಭವ ಮತ್ತು ರುಚಿಯನ್ನು ನಾವು ನೀಡುವ ಭರವಸೆ ನೀಡುತ್ತೇವೆ. ಕೃತಜ್ಞತೆ, ಉತ್ಸಾಹ ಮತ್ತು ಈ ಪ್ರಯಾಣಕ್ಕೆ ಸಿದ್ಧ. ಹೊಸ ವರ್ಷದ ಶುಭಾಶಯಗಳು ಎಂದು ರಮಿಕಾ ಶುಭ ಹಾರೈಸಿದ್ದಾರೆ.

67
ಹೊಸ ವರ್ಷದ ಟೆಂಪಲ್ ರನ್

ಅಂದ ಹಾಗೆ ದಿಲೀಪ್ ಮತ್ತು ರಮಿಕಾ ಹೊಸ ವರ್ಷದ ದಿನ ಜೊತೆಯಾಗಿ ದೇವಸ್ಥಾನಕ್ಕೆ ಹೋಗಿ ಬಂದಿದ್ದು, ದಿಲೀಪ್ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು.

77
ಡೇಟಿಂಗ್ ರೂಮರ್ಸ್

ದಿಲೀಪ್ ಮತ್ತು ರಮಿಕಾ ಎರಡು ಸೀರಿಯಲ್ ಜೊತೆಯಾಗಿ ಮಾಡಿದ್ದು, ಜೊತೆಯಾಗಿ ಯೂಟ್ಯೂಬ್ ಚಾಲೆನ್ ಕೂಡ ಮಾಡಿದ್ದಾರೆ. ಅಷ್ಟೇ ಅಲ್ಲದೇ ಹೆಚ್ಚಾಗಿ ಜೊತೆಯಾಗಿ ಕಾಣಿಸಿಕೊಂಡಿರುವ ಜೋಡಿ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಗುಸು ಗುಸು ಎಲ್ಲಾ ಕಡೆಯಿಂದ ಕೇಳಿ ಬರುತ್ತಿದೆ. ಇದೀಗ ಹೊಟೇಲ್ ಕೂಡ ಜೊತೆಯಾಗಿ ಶುರು ಮಾಡಿದ್ದಾರೆ. ಆದರೆ ಪ್ರೀತಿ ಬಗ್ಗೆ ಈ ಜೋಡಿ ಇಲ್ಲಿವರೆಗೂ ಅಧಿಕೃತ ಮಾಹಿತಿ ಕೊಟ್ಟಿಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories