ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ ಸೀರಿಯಲ್‌ನ (Gattimela Serial) ಪ್ರತಿ ಪಾತ್ರಗಳು ಲೀಡ್ ಪಾತ್ರದಷ್ಟೇ ಮುಖ್ಯವಾಗಿದ್ದು, ಇದರಲ್ಲಿನ ಅಣ್ಣ ತಮ್ಮಂದಿರ ಬಾಂಧವ್ಯ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು, ಆದರೆ ಇದೀಗ ಸೀರಿಯಲ್‌ನಲ್ಲಿ ವಿಕ್ಕಿ ಸಾವು ಸೀರಿಯಲ್ ಪ್ರಿಯರಿಗೆ ಶಾಕ್ ನೀಡಿದೆ.
ತಾಯಿ ಯಾರೆಂದು ತಿಳಿದ ಮೇಲೆ,ಖುಷಿಯಾಗಿ ಅದನ್ನು ಮನೆಗೆ ಬಂದು ಎಲ್ಲರಿಗೂ ತಿಳಿಸಲು ಹೊರಟ ವಿಕ್ಕಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದು, ಸುಹಾಸಿನಿ ಕಾರು ಅಪಘಾತ ಮಾಡಿಸಿದ್ದಾಳೆ. ಇದನ್ನು ತಿಳಿದ ಅಗ್ರಜ ವೇದಾಂತ್, ಎಲ್ಲರಿಂದ ವಿಷಯ ಮುಚ್ಚಿಟ್ಟು ತಾನೇ ಸ್ವತಃ ನಿಂತು ಅನುಜನ ಚಿತೆಗೆ ಬೆಂಕಿ ಇಟ್ಟಿದ್ದಾನೆ.
ಕಥೆ ಇನ್ನೇನು ಇಂಟ್ರೆಸ್ಟಿಂಗ್ ತಿರುವು ಪಡೆಯುತ್ತಿದೆ, ಸಡನ್ ಆಗಿ ವಿಕ್ರಾಂತ್ ಸಾವು ಅಭಿಮಾನಿಗಳಿಗೆ ಶಾಖ್ ನೀಡಿತ್ತು. ಆದರೆ ಇದೀಗ ವಿಕ್ರಾಂತ್ ಪಾತ್ರಧಾರಿ ಅಭಿಷೇಕ್ ರಾಮ್ ದಾಸ್ (Abhishek Ramdas) ಅವರೇ ತಾವು ಸೀರಿಯಲ್ ತೊರೆಯುತ್ತಿರುವುದಕ್ಕಾಗಿ ಪಾತ್ರವನ್ನು ಅಂತ್ಯ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ (social media) ಬರೆದುಕೊಂಡಿರುವ ಅಭಿ ಕೆಲವು ಪಾತ್ರಗಳು ಅಂತ್ಯವಾಗತ್ತೆ, ಕಥೆಗೆ ದುರಂತ ಅಂತ್ಯ ಆಗಿರತ್ತೆ. ಈ ಮೊದಲು ನಾನು ಸೀರಿಯಲ್ ನಿಂದ ಹೊರ ಬರುವ ಬಗ್ಗೆ ಹೇಳಿದಾಗ ಝೀ ಕನ್ನಡ ವಿಕ್ಕಿ ಜಾಗಕ್ಕೆ ಬೇರೊಬ್ಬರನ್ನು ತರಲು ಸಾಧ್ಯವಿಲ್ಲ ಎಂದು ಹೇಳಿತು. ನನಗೂ ಕೂಡ ವಿಕ್ರಾಂತ್ ಪಾತ್ರದಿಂದ ಹೊರಗಡೆ ಬರೋದು ಕಷ್ಟವಾಗಿತ್ತು.ವಿಕ್ರಾಂತ್ ಪಾತ್ರ ನನಗೆ ತುಂಬಾನೆ ಇಷ್ಟ. ನನ್ನ ಜರ್ನಿಯ ಫೇವರಿಟ್ ಪಾತ್ರ ಇದಾಗಿತ್ತು ಎಂದಿದ್ದಾರೆ.
ಅಲ್ಲದೇ ನಾನು ಇಲ್ಲಿವರೆಗೆ ಗಟ್ಟಿಮೇಳದ 1100 ಎಪಿಸೋಡ್‌ಗಳಿಗೆ ನ್ಯಾಯ ಒದಗಿಸಿದ್ದೇನೆ ಎಂದು ನಂಬಿದ್ದೇನೆ. ಇದೀಗ ನನ್ನ ಜೀವನದ ಮುಂದಿನ ಗುರಿಯನ್ನು ಸಾಧಿಸುವ ಸಮಯ ಬಂದಿದೆ. ವಿಕ್ಕಿ ನಮ್ಮ ಹೃದಯದಲ್ಲಿ ಮತ್ತು ಅಗ್ರಜನ ಹೃದಯದಲ್ಲಿ ಯಾವಾಗ್ಲೂ ಇರುತ್ತಾನೆ. ಇದು ಕಥೆ, ಟ್ರಾಜಿಡಿಯೂ ಇದಕ್ಕೆ ಅಗತ್ಯ, ಟೇಕ್ ಇಟ್ ಈಸಿ.ಇಲ್ಲಿವರೆಗೆ ನೀವು ಕೊಟ್ಟಿರುವ ಪ್ರೀತಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಇನ್ನೂ ಈ ರೀತಿಯಾಗಿ ವಿಕ್ರಾಂತ್ ಸಾವನ್ನಪ್ಪಿರೋದನ್ನು ಅಭಿಮಾನಿಗಳು ಮಾತ್ರ ಈಸಿಯಾಗಿ ತೆಗೆದುಕೊಳ್ಳುತ್ತಿಲ್ಲ. ವಿಕ್ರಾಂತ್ ಸಾವನ್ನು ಒಪ್ಪಿಕೊಳ್ಳಲು ಸಾಧ್ಯ ಆಗ್ತಾ ಇಲ್ಲ. ನಾವು ಆ ಪಾತ್ರದ ಜೊತೆ ತುಂಬಾನೆ ಕನೆಕ್ಟ್ ಆಗಿದ್ವಿ. ಇದ್ರೆ ಈ ರೀತಿ ಅಣ್ಣ ತಮ್ಮಂದಿರು ಇರಬೇಕು ಅನ್ನೋವಷ್ಟು ನೀವು ಇಂಪ್ರೆಸ್ ಮಾಡಿದ್ರಿ. ವಿಕ್ಕಿ ಮತ್ತೆ ಬರ್ಲಿ ಎಂದು ಕೆಲವರು ಹೇಳಿದ್ದಾರೆ.
ಇನ್ನು ಕೆಲವು ಅಭಿಮಾನಿಗಳು ನಿಮ್ಮನ್ನ ತುಂಬಾ ಮಿಸ್ ಮಾಡುತ್ತೇವೆ. ಮತ್ತೆ ಸೀರಿಯಲ್ ಗೆ (serial) ಬರುತ್ತೀರಿ ಅನ್ನೋ ಕನಸು ಇದೆ. ಅದಕ್ಕೋಸ್ಕರ ಕಾಯ್ತಿವಿ ಎಂದು ಬರೆದರೆ. ಇನ್ನೂ ಕೆಲವರು ಹೀಗೆ ಪಾತ್ರವನ್ನು ಸಾಯಿಸೋ ಬದಲು ಬೇರೆ ಪಾತ್ರಧಾರಿಗಳನ್ನಾದ್ರೂ ಹಾಕಿ ಎಂದು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಇನ್ನು ಅಭಿ ಕರಿಯರ್ (career) ವಿಷಯಕ್ಕೆ ಬರೋದಾದ್ರೆ ಇವರು ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಾಗೇ ಹಿರಿತೆರೆಯತ್ತ ಹೆಚ್ಚು ಗಮನ ಹರಿಸುವ ಸಲುವಾಗಿ ಅವರು ಕಿರುತೆರೆಗೆ ಗುಡ್ ಬೈ ಹೇಳಿದ್ದಾರೆ.