ಪುಟ್ಟಕ್ಕನ ಮಕ್ಕಳಲ್ಲಿ ಕನ್ನಡತಿ ನಟಿ; ಯಾರೆಂದು ನೀವೇ ಗೆಸ್ ಮಾಡಿ

Published : Jun 12, 2023, 05:25 PM ISTUpdated : Jun 12, 2023, 05:37 PM IST

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಸೀರಿಯಲ್ ತಂಡಕ್ಕೆ ಕಳೆದ ವಾರವಷ್ಟೇ ಕನ್ನಡತಿ ಸೀರಿಯಲ್ ನಟಿ ದೀಪಾಶ್ರೀ ಸೇರಿಕೊಂಡಿದ್ದು, ಸೀರಿಯಲ್ ಗಳಲ್ಲಿ ಸದಾ ಸೀರಿಯುಡುವ ನಟಿ ಎಷ್ಟೊಂದು ಸ್ಟೈಲಿಶ್ ಆಗಿದ್ದಾರೆ ನೋಡಿ. 

PREV
17
ಪುಟ್ಟಕ್ಕನ ಮಕ್ಕಳಲ್ಲಿ ಕನ್ನಡತಿ ನಟಿ; ಯಾರೆಂದು ನೀವೇ ಗೆಸ್ ಮಾಡಿ

ಪುಟ್ಟಕ್ಕನ ಮಕ್ಕಳು ಸೀರಿಯಲ್ ನಲ್ಲಿ ನಾಯಕ ಕಂಠಿ ಪಾತ್ರದ ಸಹೋದರಿ ವಸು ಪಾತ್ರ ಇದೀಗ ಬದಲಾಗಿದ್ದು, ಹಿಂದೆ ಸೌಮ್ಯ ಮಾಡುತ್ತಿದ್ದ ಪಾತ್ರವನ್ನು ಇದೀಗ ದೀಪಶ್ರೀಯವರು (Deepashree)  ಮಾಡುತ್ತಿದ್ದಾರೆ. ಈಗಾಗಲೇ ಅವರು ಹಿಂದಿನ ಎಪಿಸೋಡ್ ಗಳಲ್ಲಿ ನಟಿಸಿಯಾಗಿದೆ.

27

ಈ ದೀಪಶ್ರೀ ಬೇರೆ ಯಾರೂ ಅಲ್ಲ, ಈ ಹಿಂದೆ ಕಲರ್ಸ್ ಕನ್ನಡದಲ್ಲಿ  ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರವಾಹಿ ಕನ್ನಡತಿಯಲ್ಲಿ (Kannadathi serial) ನಾಯಕ ಹರ್ಷನ ಅತ್ತಿಗೆ ವೈದ್ಯೆ ತಾಪ್ಸಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಕನ್ನಡತಿ ಸೀರಿಯಲ್ ಮುಗಿದು ನಾಲ್ಕು ತಿಂಗಳ ಬಳಿಕ ಪುಟ್ಟಕ್ಕನ ಮಕ್ಕಳು ತಂದ ಸೇರಿಕೊಂಡಿದ್ದಾರೆ. 
 

37

ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್ ನಲ್ಲಿ ವಸು ಪಾತ್ರವೂ ಪ್ರಮುಖವಾಗಿದ್ದು, ನಾಯಕ ಕಂಠಿಯ ಸಹೋದರಿಯ ಪಾತ್ರ ಇದಾಗಿದೆ. ಕಂಠಿಯನ್ನು ತುಂಬಾನೆ ಪ್ರೀತಿಸುವ ಆತನ ಎಲ್ಲಾ ಏಳು ಬೀಳುಗಳಲ್ಲಿ ಜೊತೆಯಾಗಿ ನಿಲ್ಲುವ ಸಹೋದರಿಯ ಪಾತ್ರ ಇದು.

47

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪೌರಾಣಿಕ ಧಾರಾವಾಹಿ `ಜೈ ಹನುಮಾನ್'ನಲ್ಲಿ' 'ದೇವಿ ಸಂಧ್ಯಾ' ಪಾತ್ರದ ಮೂಲಕ ನಟನೆಗೆ ಎಂಟ್ರಿ ಕೊಟ್ಟ ದೀಪಶ್ರೀ, ಬಳಿಕ ಕನ್ನಡತಿ ಸೀರಿಯಲ್ ನಲ್ಲಿ ನಟಿಸಿದ್ದರು. ಆ ಸಮಯದಲ್ಲಿ ನನ್ನರಸಿ ರಾಧೆ ಮತ್ತು ನಮ್ಮನೆ ಯುವರಾಣಿ ಸೀರಿಯಲ್ ನಲ್ಲಿ ಗೆಸ್ಟ್ ಎಪಿಯರೆನ್ಸ್ ಕೂಡ ಕೊಟ್ಟಿದ್ದರು. ಇದೀಗ ಪುಟ್ಟಕ್ಕನ ಮಕ್ಕಳು ಸೀರಿಯಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. 

57

ಮಾತೃ ಭಾಷೆ ತೆಲುಗಾದರೂ ಕನ್ನಡತಿ ಸೀರಿಯಲ್ ನಲ್ಲಿ ಇವರು ಮಾತನಾಡುವ ರೀತಿ ಕನ್ನಡ ಉಚ್ಚಾರಣೆ ಎಲ್ಲರಿಗೂ ಇಷ್ಟವಾಗಿದ್ದು, ಸೀರಿಯಲ್ ನಲ್ಲಿ ಹೆಚ್ಚಾಗಿ ತೆರೆ ಮೇಲೆ ಕಾಣಿಸಿಕೊಳ್ಳದಿದ್ದರೂ, ಕಾಣಿಸಿಕೊಂಡಾಗಲೆಲ್ಲಾ, ಅದ್ಭುತವಾಗಿ ನಟಿಸಿ ಅಭಿಮಾನಿಗಳನ್ನು ಸಹ ಪಡೆದಿದ್ದರು ದೀಪಶ್ರೀ. 

67

ಸಿವಿಲ್ ಇಂಜಿನಿಯರ್ (cicil engineer) ಆಗಿದ್ರೂ ಮೊದಲಿನಿಂದಲೂ ಫ್ಯಾಷನ್ ಕಡೆಗೆ ಆಸಕ್ತಿ ಹೊಂದಿದ್ದ ದೀಪಶ್ರೀ, ಕಾಲೇಜಿನಲ್ಲಿರುವಾಗಲೇ ಮಾಡೆಲಿಂಗ್ ಮಾಡುತ್ತಿದ್ದರು. ಜೊತೆಗೆ ಹಲವು ಫ್ಯಾಷನ್ ಶೋಗಳಲ್ಲಿ ಭಾಗವಹಿಸುತ್ತಿದ್ದರು. ಅದರಿಂದಲೇ ಅವರಿಗೆ ಬಣ್ಣದ ಜಗತ್ತಿನ ಕಡೆಗೆ ಒಲವು ಮೂಡಿತು. 

77

ಸೀರಿಯಲ್ ಗಳಲ್ಲಿ ಯಾವಾಗಲೂ ಸೀರೆಯಲ್ಲಿ ಕಾಣಿಸಿಕೊಳ್ಳುವ ದೀಪಶ್ರೀ, ತುಂಬಾನೆ ಸ್ಟೈಲಿಶ್ ಆಗಿದ್ದಾರೆ. ಇವರ ಸೋಶಿಯಲ್ ಮೀಡಿಯಾ ಖಾತೆ ತೆರೆದರೆ ಗ್ಲಾಮರ್ ಗೊಂಬೆ ಅಂತಾನೆ ಹೇಳಬಹುದು. ತುಂಬಾನೆ ಮಾಡರ್ನ್ ಆಗಿರುವ ಇವರು, ಸಿಕ್ಕಾಪಟ್ಟೆ ಫೋಟೋ ಕೂಡ ಶೇರ್ ಮಾಡುತ್ತಿರುತ್ತಾರೆ. 

Read more Photos on
click me!

Recommended Stories