AadiLakshmi Purana: ಆದಿಲಕ್ಷ್ಮಿ ಪುರಾಣದಲ್ಲಿ ಲಕ್ಷ್ಮೀ ಮತ್ತು ಎಳನೀರು ಕಿಟ್ಟಿಯ ಮದುವೆ ಸಂಭ್ರಮ ಜೋರಾಗಿಯೇ ನಡೆಯುತ್ತಿತ್ತು, ಆದರೆ ಅಪ್ಪನ ಎದೆಗೆ ಕಾಲಲ್ಲಿ ಒದ್ದ ಕಿಟ್ಟಿನ ಲಕ್ಷ್ಮೀ ಸುಮ್ನೆ ಬಿಡ್ತಾಳ? ಹೆಣ್ಣುಮಕ್ಕಳೇ ನಿಮ್ಮ ಅಮ್ಮನಿಗೆ ಯಾರಾದ್ರು ಅವಮಾನ ಮಾಡಿದ್ರೆ ನೀವು ಸುಮ್ನೆ ಇರ್ತೀರಾ?
ಆದಿಲಕ್ಷ್ಮೀ ಪುರಾಣದಲ್ಲಿ ಇದೀಗ ಲಕ್ಷ್ಮೀ ಮದುವೆ ಸಂಭ್ರಮ ಜೋರಾಗಿಯೇ ನಡೆಯುತ್ತಿದೆ. ಮುದ್ದಿನ ತಂಗಿಯ ಮದುವೆಗೆ ಶಿವಣ್ಣ -ಪಾರು ಕೂಡ ಬಂದಿದ್ದಾರೆ. ಆದರೆ ಕೊನೆಗೂ ಎಳನೀರು ಕಿಟ್ಟಿಯ ಅಸಲಿ ರೂಪ ಎಲ್ಲರ ಮುಂದೆ ಬಯಲಾಗಿದೆ. ಕಿಟ್ಟಿಗೆ ಕಪಾಳಮೋಕ್ಷ ಮಾಡಿ, ತಂದೆಗಾದ ಅವಮಾನಕ್ಕೆ ಲಕ್ಷ್ಮೀ ಸೇಡು ತೀರಿಸಿದ್ದಾಳೆ.
26
ಏನಾಯ್ತು ಮದುವೆಯಲ್ಲಿ?
ಮದುವೆ ಫಿಕ್ಸ್ ಆದಾಗಿನಿಂದ ಇಲ್ಲಿವರೆಗೂ ಕಿಟ್ಟಿ ತಾನು ಒಳ್ಳೆಯವನಂತೆ ನಾಟಕ ಮಾಡಿಕೊಂಡೇ ಬಂದಿದ್ದಾನೆ. ಆದಿ ಕೂಡ ಲಕ್ಷ್ಮೀ ಮೇಲಿನ ಸಿಟ್ಟಿಗಾಗಿ ಕಿಟ್ಟಿ ಕುಡುಕ ಅನ್ನೋದನ್ನು ಮುಚ್ಚಿಟ್ಟು ಮದುವೆಯ ಎಲ್ಲಾ ತಯಾರಿಯನ್ನು ತಾತನ ಆಣತಿಯಂತೆ ತಾನೇ ವಹಿಸಿಕೊಂಡು ಬಂದಿದ್ದಾನೆ..
36
ಲಕ್ಕಿ ಅಪ್ಪನ ಎದೆಗೆ ಒದ್ದ ಕಿಟ್ಟಿ
ಆದರೆ ಕೊನೆ ಗಳಿಗೆಯಲ್ಲಿ ಗಲಾಟೆ ನಡೆದು ಲಕ್ಷ್ಮೀ ತಂದೆಯ ಎದೆಗೆ ಕಾಲಿನಿಂದ ಕಿಟ್ಟಿ ಒದ್ದಿದ್ದಾನೆ. ಅಪ್ಪನಿಗೆ ಎಲ್ಲರೆದುರು ಇಷ್ಟು ದೊಡ್ಡ ಅವಮಾನ ಆದ್ರೆ ಸುಮ್ನೆ ಬಿಡ್ತಾಳ ಲಕ್ಕಿ ಚಾನ್ಸೇ ಇಲ್ಲ. ಕಿಟ್ಟಿ ಕೆನ್ನೆಗೆ ಬಾರಿಸಿ, ನನ್ನ ತಂದೆಗೆ ಅವಮಾನ ಮಾಡುವಂತಹ ಹುಡುಗನನ್ನು ನಾನು ಮದುವೆಯೇ ಆಗೋದಿಲ್ಲ ಎಂದಿದ್ದಾಳೆ.
ಪ್ರತಿಯೊಬ್ಬ ಹೆಣ್ಣುಮಕ್ಕಳಿಗೂ ತಮ್ಮ ತಂದೆಯೇ ಮೊದಲ ಹೀರೋ ಆಗಿರುತ್ತಾರೆ. ಹಾಗಾಗಿ ತಂದೆಗೆ ಅವಮಾನ ಆದ್ರೆ ಹೆಣ್ಣು ಮಕ್ಕಳು ಸುಮ್ಮನೆ ಇರುವ ಮಾತೇ ಇಲ್ಲ. ಅಮ್ಮನ ಬಗ್ಗೆ ಯಾರು ಕೆಟ್ಟದಾಗಿ ಮಾತನಾಡಿದ್ರೇನೆ ಸಹಿಸದೇ ಲಕ್ಷ್ಮೀ, ಇನ್ನು ಅಪ್ಪನಿಗೆ ಕಾಲಲ್ಲಿ ಒದ್ದವನನ್ನು ಸುಮ್ನೆ ಬಿಡ್ತಾಳ ಚಾನ್ಸೇ ಇಲ್ಲ.
56
ವೀಕ್ಷಕರು ಏನು ಹೇಳ್ತಿದ್ದಾರೆ?
ಇನ್ನು ಎರಡು ಏಟು ಬಾರಿಸು ಲಕ್ಕಿ, ಅಪ್ಪನ ಎದೆಗೆ ಒದ್ದರೆ ಯಾವ ಮಗಳು ಸುಮ್ಮನೆ ಇರಲ್ಲ. ಸೂಪರ್ ಲಕ್ಕಿ.
ವಾವ್ ಸೂಪರ್. ಈ ಸಮಾಜದ ಮಾದರಿ ಹೆಣ್ಣು ಲಕ್ಷ್ಮಿ.
ಇನ್ನು ಎರಡು ಏಟು ಬಾರಿಸು ಲಕ್ಕಿ
ನಮ್ಮ ಲಕ್ಷ್ಮೀ ರಾಕ್ಸ್. ಎಳನೀರು ಕಿಟ್ಟಿ ಜೊತೆ ಎಲ್ಲರೂ ಶಾಕ್
ಅದಕ್ಕೆ ಹೇಳೋದು ಹೆಣ್ಣುಮಕ್ಕಳು ಬೇಕು ಅನ್ನೋದು
ಕಾಲು ತೊಳೆದು ಕನ್ಯಾದಾನ ಮಾಡುವವರಿಗೆ ಕಾಲಲ್ಲಿ ಒದ್ದವನಿಗೆ ಸರಿಯಾಗಿ ಆಗಿದೆ.
66
ಇನ್ನಿದೆ ಟ್ವಿಸ್ಟ್
ಇದೀಗ ಲಕ್ಷ್ಮೀ ಮದುವೆ ನಿಲ್ಲುವ ಹಂತಕ್ಕೆ ಬಂದಿದೆ. ತನ್ನ ಅಕ್ಕನ ಜೀವನ ಹಾಳು ಮಾಡಿದ ಲಕ್ಕಿಯ ಜೀವನವನ್ನೂ ಹಾಳು ಮಾಡಬೇಕೆಂದು ಬಯಸಿದ್ದ ಆದಿ ಜೊತೆಗೆ ಲಕ್ಕಿ ಮದುವೆ ಮಾಡಿಸಲು ಹೊರಟಿದ್ದಾರೆ ತಾತ ಧರ್ಮರಾಜ್. ಲಕ್ಕಿಯನ್ನು ಕಂಡರೇನೇ ಆಗದ ಆದಿ ಮದುವೆಯಾಗೋದಕ್ಕೆ ಒಪ್ಪುತ್ತಾನ? ಮುಂದೇನಾಗುತ್ತೆ? ಕಾದು ನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.