ಲಕ್ಷ್ಮೀ ನಿವಾಸ ನಿರ್ದೇಶಕರಿಗೆ ಜಯಂತ್ ಅಭಿಮಾನಿಗಳಿಂದ ವಿಶೇಷ ಮನವಿ!

Published : Jun 20, 2025, 04:47 PM IST

Kannada Serial Lakshmi Nivasa: ಜಯಂತ್ ಪತ್ನಿ ಜಾಹ್ನವಿ ಸಾವಿನ ನೋವಿನಲ್ಲಿ ಕಣ್ಣೀರಿಡುತ್ತಿದ್ದಾನೆ. ಗೆಳೆಯ ಸಚಿನ್ ಜಾಹ್ನವಿ ಬಗ್ಗೆ ವಿಚಾರಿಸಿದಾಗ ಜಯಂತ್ ಭಾವುಕನಾಗುತ್ತಾನೆ. 

PREV
17

ಖಾಸಗಿ ವಾಹಿನಿಯ ಲಕ್ಷ್ಮೀ ನಿವಾಸ ಧಾರಾವಾಹಿಯ ಜಯಂತ್ ಕಥೆ ಹೆಚ್ಚು ಗಮನ ಸೆಳೆದಿದೆ. ಸಮುದ್ರದಲ್ಲಿ ಜಿಗಿದ ಚಿನ್ನುಮರಿ ಸೋದರಮಾವ ನರಸಿಂಹನ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದಾಳೆ. ನರಸಿಂಹನ ಮನೆಯಲ್ಲಿ ಚಿನ್ನುಮರಿ ಇದ್ರೂ ಜಯಂತ್‌ಗೆ ಆ ವಿಷಯ ತಿಳಿದಿಲ್ಲ.

27

ಪತ್ನಿ ಕಣ್ಮುಂದೆಯೇ ಸಮುದ್ರದ ಪಾಲಾದ್ರೂ ಜಾಹ್ಮವಿ ಸಾವನ್ನು ಜಯಂತ್ ನಂಬುತ್ತಿಲ್ಲ. ಜಾಹ್ಮವಿಗಾಗಿ ಜಯಂತ್ ಹುಡುಕಾಟ ನಡೆಸುತ್ತಿದ್ದಾನೆ. ಸದ್ಯ ಮನೆಯಲ್ಲಿ ವಿಶ್ವ ಬರೆದಿರುವ ಪತ್ನ ಜಯಂತ್‌ ಕೈಗೆ ಸಿಕ್ಕಿದ್ದು, ಪತ್ನಿಯ ಆಪ್ತ ಗೆಳೆಯನಿಗಾಗಿ ಹುಡುಕಾಟ ನಡೆಸುತ್ತಿದ್ದಾನೆ.

37

ಇತ್ತೀಚಿನ ಸಂಚಿಕೆಯಲ್ಲಿ ಜಯಂತ್‌ ಮನೆಗೆ ಬಾಲ್ಯದ ಗೆಳೆಯ ಸಚಿನ್ ಬಂದಿದ್ದಾನೆ. ಶ್ರೀಲಂಕಾದಲ್ಲಿಯೂ ಸಚಿನ್ ಮತ್ತು ಜಾಹ್ನವಿ ಭೇಟಿಯಾಗಿದ್ದರು. ಇದೀಗ ಮನೆಗೆ ಬಂದಿರುವ ಸಚಿನ್, ತನ್ನ ತಂಗಿ ಜಾಹ್ನವಿ ಎಲ್ಲಿ ಎಂದು ಹುಡುಕಾಟ ನಡೆಸಿದ್ದಾನೆ. ಜಾಹ್ನವಿ ಸತ್ತಿರುವ ವಿಷಯವನ್ನು ಸಚಿನ್‌ಗೆ ಹೇಳಬೇಕಾ ಅಥವಾ ಬೇಡವಾ ಅನ್ನೋ ಶಾಂತಮ್ಮ ಗೊಂದಲ್ಲಿರುವಾಗಲೇ ಜಯಂತ್ ಬರುತ್ತಾನೆ.

47

ಜಯಂತ್ ಬರುತ್ತಿದ್ದಂತೆ ಸಚಿನ್ ಖುಷಿಯಿಂದ ಗೆಳೆಯನನ್ನು ತಬ್ಬಿಕೊಳ್ಳುತ್ತಾನೆ. ಈ ಹಿಂದೆ ನಡೆದ ಘಟನೆಯನ್ನು ಮರೆಯುವಂತೆ ಸಚಿನ್ ಹೇಳುತ್ತಾನೆ. ಜಾಹ್ನವಿ ಎಲ್ಲಿ ಎಂದು ಸಚಿನ್ ಕೇಳಿದಾಗ ಚಿನ್ನುಮರಿ ಸತ್ತಿರುವ ವಿಷಯವನ್ನು ಜಯಂತ್ ಹೇಳುತ್ತಾನೆ. ನಂತರ ಇಬ್ಬರು ಮನೆಯಿಂದ ಹೊರಗೆ ಬಂದು ಜಾಹ್ನವಿ ವಿಷಯದ ಬಗ್ಗೆ ಮಾತನಾಡುತ್ತಾರೆ.

57

ಜಯಂತ್ ಕಣ್ಣೀರು

ಗೆಳೆಯನ ಮುಂದೆ ಜಯಂತ್, ಪತ್ನಿಯನ್ನು ಕಳೆದುಕೊಂಡಿರುವ ಬಗ್ಗೆ ಮಾತನಾಡುತ್ತಾ ಭಾವುಕನಾಗುತ್ತಾನೆ. ಸಮುದ್ರದಲ್ಲಿ ಬಿದ್ದ ನಂತರ ಜಾಹ್ನವಿಯನ್ನು ಹುಡುಕಾಡಿದ ಸ್ಥಳವಿಲ್ಲ. ಇಂದಿಗೂ ಜಾಹ್ನವಿ ಬರುತ್ತಾಳೆ ಎಂದು ಕಾಯುತ್ತಿದ್ದೇನೆ ಎಂದು ಕಣ್ಣೀರು ಹಾಕುತ್ತಾನೆ. ಜಯಂತ್ ಕಣ್ಣೀರು ನೋಡಿದ ವೀಕ್ಷಕರು ಸೀರಿಯಲ್ ನಿರ್ದೇಶಕರಿಗೆ ವಿಶೇಷ ಮನವಿ ಮಾಡಿಕೊಂಡಿದ್ದಾರೆ.

67

ಅಭಿಮಾನಿಗಳಿಂದ ವಿಶೇಷ ಮನವಿ

ಜಯಂತ್ ಅದ್ಭುತ ನಟನೆಯಿಂದ ಈ ಹಿಂದೆ ಬೈಯ್ಯುತ್ತಿದ್ದ ನೆಟ್ಟಿಗರು, ಇದೀಗ ಜಾಹ್ನವಿಯನ್ನು ಭೇಟಿಯಾಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಜಯಂತ್‌ಗೆ ಜಾಹ್ನವಿ ಮೇಲಿರೋದು ನಿಜವಾದ ಪ್ರೀತಿ. 

77

ಹಾಗಾಗಿ ಆತನ ನಿಷ್ಕಲ್ಮಶ ಪ್ರೀತಿಗೆ ಮೋಸ ಮಾಡಬೇಡಿ. ಸ್ವಲ್ಪ ಸೈಕೋ ಅನ್ನೋದು ನಿಜ, ಆತನ ಬಾಳಲ್ಲಿ ಜಾಹ್ನವಿ ಬಂದ್ರೆ ಜಯಂತ್ ಸರಿಯಾಗುತ್ತಾನೆ ಎಂದು ಧಾರಾವಾಹಿ ಪ್ರೋಮೋಗೆ ಕಮೆಂಟ್ ಮಾಡಿದ್ದಾರೆ.

Read more Photos on
click me!

Recommended Stories