ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಸೀತಾ ರಾಮ ಧಾರಾವಾಹಿಯಲ್ಲಿ ಪ್ರಿಯಾ ಪಾತ್ರದಲ್ಲಿ ಅಭಿನಯಿಸುತ್ತಿದ್ದ ನಟಿ ಮೇಘನಾ ಶಂಕರಪ್ಪ, ಇದೀಗ ಫುಲ್ ಜಾಲಿ ಮೂಡ್‌ನಲ್ಲಿ ಗಂಡ ಜಯಂತ್ ಜೊತೆ ಹೊಸ ಫೋಟೋಶೂಟ್ ಮಾಡಿಸಿದ್ದಾರೆ.
‘ಕಿನ್ನರಿ’, ‘ಸೀತಾರಾಮ’ ಸೀರಿಯಲ್‌ಗಳ ಮೂಲಕ ಮನೆ ಮಾತಾದ ನಟಿ ಮೇಘನಾ ಶಂಕರಪ್ಪ ಅವರು ಕಳೆದ ಫೆಬ್ರವರಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ತಮ್ಮ ಗಂಡ ಜಯಂತ್ ಜೊತೆ ಇರುವ ಹೊಸ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
27
ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಸೀತಾ ರಾಮ ಧಾರಾವಾಹಿಯಲ್ಲಿ ಪ್ರಿಯಾ ಪಾತ್ರದಲ್ಲಿ ಅಭಿನಯಿಸುತ್ತಿದ್ದ ನಟಿ ಮೇಘನಾ ಶಂಕರಪ್ಪ, ಇದೀಗ ಫುಲ್ ಜಾಲಿ ಮೂಡ್‌ನಲ್ಲಿ ಗಂಡ ಜಯಂತ್ ಜೊತೆ ಹೊಸ ಫೋಟೋಶೂಟ್ ಮಾಡಿಸಿದ್ದಾರೆ.
37
ಕೆಂಪು ಮಾಡ್ರನ್ ಡ್ರೆಸ್‌ನಲ್ಲಿ ಮೇಘನಾ ಶಂಕರಪ್ಪ ಸಖತ್ತಾಗಿ ಮಿಂಚಿದ್ದು, ಅವರ ಗಂಡ ಜಯಂತ್ ಕೂಡಾ ಫಾರ್ಮಲ್ ಡ್ರೆಸ್‌ನಲ್ಲಿ ಹ್ಯಾಂಡ್ಸಮ್ ಆಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಫೋಟೋಗಳಿಗೆ ಕ್ಯೂಟ್ ಆಗಿ ಪೋಸ್ ಕೊಟ್ಟಿದ್ದಾರೆ.
ರಾತ್ರಿ ಸಮಯದಲ್ಲಿ ಪಾರ್ಕ್ ಥೀಮ್‌ನಲ್ಲಿ ಮೇಘನಾ ಶಂಕರಪ್ಪ ಫೋಟೋಶೂಟ್ ಮಾಡಿಸಿದ್ದಾರೆ. ವಿಶೇಷವಾಗಿ 'ಓ ಸೋನಾ' ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಈ ಮುದ್ದಾದ ಫೋಟೋಗಳನ್ನು ಉಮೇಶ್ ಫೋಟೋಗ್ರಫಿಯವರು ಸೆರೆಹಿಡಿದ್ದಾರೆ.
57
ಫೆಬ್ರವರಿ 9ರಂದು ಬೆಂಗಳೂರಿನಲ್ಲಿ ಮೇಘನಾ ಶಂಕರಪ್ಪ ಹಾಗೂ ಜಯಂತ್ ಮದುವೆ ನಡೆದಿತ್ತು. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಮೇಘನಾ ಅವರು ಈ ಹಿಂದೆ ಉದಯಪುರಕ್ಕೆ ತೆರಳಿದ್ದು, ಅಲ್ಲಿನ ಸುಂದರ ಅರಮನೆ, ಪ್ರಕೃತಿ ಸೌಂದರ್ಯದ ಫೋಟೋಗಳನ್ನು ಹಂಚಿಕೊಂಡಿದ್ದರು.
67
ಎಂಜಿನಿಯರಿಂಗ್ ಕಲಿತಿರುವ ಮೇಘನಾ ಶಂಕರಪ್ಪ ಅವರು ನಟನೆ ಮೇಲೆ ಪ್ರೀತಿಯಿಂದ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಗಗನ್ ಚಿನ್ನಪ್ಪ, ವೈಷ್ಣವಿ ಗೌಡ ಮತ್ತು ರಿತು ಸಿಂಗ್ ಮುಖ್ಯಭೂಮಿಕೆಯಲ್ಲಿರುವ 'ಸೀತಾ ರಾಮ' ಧಾರಾವಾಹಿಯಲ್ಲಿ ಪ್ರಿಯಾ ಎಂಬ ಪಾತ್ರದಲ್ಲಿ ಮೇಘನಾ ಕಾಣಿಸಿಕೊಂಡಿದ್ದರು.
77
ಇನ್ನು ಈ ಪಾತ್ರವು ಮೇಘನಾ ಶಂಕರಪ್ಪಗೆ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಅಷ್ಟೇ ಅಲ್ಲದೆ, ಜೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್'ನಲ್ಲೂ ತಮ್ಮ ಪ್ರತಿಭೆಯನ್ನು ಹೊರಹಾಕಿದ್ದರು.