Namratha Gowda-Kishen Bilagali: ರೆಟ್ರೋ ಸ್ಟೈಲಲ್ಲಿ ಜೋಡಿಯಾದ ಕಿಶನ್ - ನಮೃತಾ… Old School Love ಹೀಗೆ ಇತ್ತೆ?

Published : Jun 20, 2025, 04:42 PM ISTUpdated : Jun 20, 2025, 04:48 PM IST

ಡ್ಯಾನ್ಸರ್ ಕಿಶನ್ ಬಿಳಗಲಿ ಹಾಗೂ ನಟೀ ನಮ್ರತಾ ಗೌಡ ಮತ್ತೆ ಜೊತೆಯಾಗಿ ಫೋಟೊ ಶೂಟ್ ಮಾಡಿಸಿದ್ದು ಸಖತ್ ಮುದ್ದಾಗಿ ಕಾಣಿಸ್ತಿದ್ದಾರೆ. 

PREV
110

ಕಿಶನ್ ಬಿಳಗಲಿ (Kishen Bilagaliತಮ್ಮ ಡ್ಯಾನ್ಸ್ ಮೂಲಕವೇ ದೇಶದ ಮೂಲೆ ಮೂಲೆಗಳಲ್ಲಿ ಅಭಿಮಾನಿಗಳನ್ನು ಪಡೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಂತೂ ಕಿಶನ್ ತಮ್ಮ ಡ್ಯಾನ್ಸ್ ಜಲಕ್ ಪ್ರದರ್ಶಿಸುತ್ತಲೇ ಇರುತ್ತಾರೆ.

210

ಹೆಚ್ಚಾಗಿ ನಟಿಯರ ಜೊತೆ ಸುಂದರವಾದ ಹಾಡುಗಳಿಗೆ ಹೆಜ್ಜೆ ಹಾಕಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಅದರಲ್ಲಿ ಕಿಶನ್ ಹಾಗೂ ನಮ್ರತಾ ಗೌಡ (Namratha Gowda) ಜೋಡಿ ತುಂಬಾನೆ ಫೇಮಸ್.

310

ಹಲವು ಸಮಯದ ನಂತರ ಇದೀಗ ಮತ್ತೆ ಕಿಶನ್ ಮತ್ತು ನಮ್ರತಾ ಜೋಡಿಯಾಗಿ ಅದೇ ರೆಟ್ರೋ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಹಲವು ದಿನಗಳ ಹಿಂದೆ ಇವರಿಬ್ಬರ ನಗುವ ನಯನ ಮಧುರ ಮೌನ ಹಾಡಿನ ವಿಡಿಯೋ ವೈರಲ್ ಆಗಿತ್ತು, ಇದೀಗ ರೆಟ್ರೋ ಫೋಟೊ ಶೂಟ್ ವೈರಲ್ ಆಗಿದೆ.

410

ನಮ್ರತಾ ಗೌಡ ಕಪ್ಪು ಬಣ್ಣದ ಸೀರೆಯುಟ್ಟು ಅದರ ಜೊತೆ ಬಿಳಿ ಬಣ್ಣದ ಬ್ಲೌಸ್ ಧರಿಸಿ, ಸಿಂಪಲ್ ಲುಕ್ ನಲ್ಲಿ ಕಾಣಿಸಿಕೊಂಡರೆ, ಕಿಶನ್ ಬೆಲ್ ಬಾಟಮ್ ಪ್ಯಾಂಟ್, ಶರ್ಟ್, ಅದರ ಮೇಲೊಂದು ಕೋಟ್, ತಲೆ ಮೇಲೊಂದು ಹ್ಯಾಟ್ ಹಾಗೂ ಕನ್ನಡಕ ಧರಿಸಿದ್ದಾರೆ.

510

ಹೂವಿನ ಮಾರುಕಟ್ಟೆಯಲ್ಲಿ, ಹಣ್ಣಿನ ಅಂಗಡಿ ಬಳಿ, ರಸ್ತೆ ದಾಟುತ್ತಾ, ಹೊಟೇಲ್ ನಲ್ಲಿ ತಿಂಡಿ ತಿನ್ನುತ್ತಾ ಮುದ್ದಾಗಿ ಫೋಟೊ ಶೂಟ್ ಮಾಡಿಸಿದ್ದು ಇದನ್ನ ನೋಡಿದ್ರೆ Old School Love ಅಂದ್ರೆ ಹೀಗೆ ಇರಬೇಕು ಎಂದೆನಿಸದೇ ಇರದು.

610

ಹಳೆ ಕಾಲದ ಸಿನಿಮಾಗಳನ್ನು ನೋಡಿದ್ರೆ, ಅದರಲ್ಲಿ ಜೋಡಿಗಳು ಹೇಗೆ ತಮ್ಮ ಸಂಗಾತಿ ಜೊತೆಗಿನ ಸಮಯಗಳನ್ನು ಸಂಭ್ರಮಿಸುತ್ತಿದ್ದರೋ, ಅದೇ ರೀತಿಯ ಸಂಭ್ರಮಗಳನ್ನು ಈ ಫೋಟೊಗಳಲ್ಲಿ ಕಾಣಬಹುದು. ಹಾಗಾಗಿ ಜನರು ಕೂಡ ಈ ಫೋಟೊಗಳನ್ನು ಸಿಕ್ಕಾಪಟ್ಟೆ ಇಷ್ಟ ಪಟ್ಟಿದ್ದಾರೆ.

710

ಈ ಜೋಡಿ ತುಂಬಾನೆ ಚೆನ್ನಾಗಿದೆ, ಇವರಿಬ್ಬರನ್ನೂ ಹೀಗೆ ನೋಡುತ್ತಿದ್ದರೆ, ಇವರು ಮದುವೆಯಾದ್ರೆ ಆ ಜೋಡಿ ನೋಡೋದಕ್ಕೂ ತುಂಬಾ ಸುಂದರವಾಗಿರೋದು ಖಂಡಿತಾ ಎಂದಿದ್ದಾರೆ ಫ್ಯಾನ್ಸ್. ಅಷ್ಟೇ ಅಲ್ಲದೇ ಮೇಡ್ ಫಾರ್ ಈಚ್ ಅದರ್ ಅಂತಾನೂ ಹೇಳಿದ್ದಾರೆ.

810

ಇನ್ನೂ ಕೆಲವು ಅಭಿಮಾನಿಗಳು ಹಳೆ ಕಾಲದ ಪ್ರೀತಿಯನ್ನು ತುಂಬಾನೆ ಚೆನ್ನಾಗಿ ಚಿತ್ರೀಕರಿಸಿದ್ದೀರಿ. ವಿಂಟೇಜ್ ವೈಬ್, ಇಬ್ಬರ ಕಾಂಬಿನೇಶನ್ ಸೂಪರ್ ಆಗಿದೆ. ಇನ್ನು ಕಿಶನ್ ಬಿಳಗಲಿ ಕೂಡ ತಮ್ಮ ಇನ್’ಸ್ಟಾಗ್ರಾಂನಲ್ಲಿ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದು, ಸದ್ಯದಲ್ಲೇ ಈ ಜೋಡಿಯ ವೀಡಿಯೋ ಹೊರ ಬರಲಿದೆ ಅಂತ ಕಾಣಿಸುತ್ತೆ.

910

ಕಿಶನ್ ಅಂಬಾಸೀಡರ್ ಕಾರು ಹಾಗೂ ಕೈಯಲ್ಲಿ ಗಿಟಾರ್ ಹಿಡಿದಿರುವ ಒಂದಷ್ಟು ಫೋಟೊಗಳನ್ನು ಶೇರ್ ಮಾಡಿದ್ದು, ನಾನು ಪ್ರೀತಿಯಲ್ಲಿ ವಿಫಲನಾದ ವ್ಯಕ್ತಿ, ಆದರೆ ಪ್ರೀತಿಸೋದನ್ನು ಎಂದಿಗೂ ಬಿಟ್ಟಿಲ್ಲ (I’m that soul who failed in love but never stopped loving …) ಎಂದು ಬರೆದುಕೊಂಡಿದ್ದಾರೆ.

1010

ಒಟ್ಟಲ್ಲಿ ಈ ಫೋಟೊಗಳನ್ನು ನೋಡಿ ಅಭಿಮಾನಿಗಳಂತೂ ಯಾವಾಗ ವಿಡಿಯೋ ಹೊರ ಬರಲಿದೆ ಎಂದು ಕಾಯುತ್ತಿದ್ದಾರೆ. ಕಿಶನ್ ನಮ್ರತಾ ಜೋಡಿಯ ಮತ್ತೊಂದು ರೆಟ್ರೋ ಹಾಡನ್ನು ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ ಜನ.

Read more Photos on
click me!

Recommended Stories