ರಾಜ್ಯದಲ್ಲಿ ಬೇಸಿಗೆ ಮಳೆ ಅವಾಂತರ: ಹೊತ್ತಿ ಉರಿದ ತೆಂಗಿನ ಮರ, ವ್ಯಕ್ತಿ ಸಿಡಿಲಿಗೆ ಬಲಿ, ಆಲಿಕಲ್ಲು ಮಳೆಗೆ ಭಾರಿ ಬೆಳೆ ಹಾನಿ

Published : Mar 18, 2026, 10:23 AM IST

ಕರ್ನಾಟಕದ  ಹಲವೆಡೆ ಗುಡುಗು, ಸಿಡಿಲು ಸಹಿತ ಸುರಿದ ಭಾರೀ ಮಳೆಯು ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಗದಗದಲ್ಲಿ ಸಿಡಿಲು ಬಡಿದು ರೈತರೊಬ್ಬರು ಮೃತಪಟ್ಟರೆ, ರಾಯಚೂರಿನಲ್ಲಿ ತೆಂಗಿನ ಮರಕ್ಕೆ ಬೆಂಕಿ ಹೊತ್ತಿಕೊಂಡಿದೆ. ಚಾಮರಾಜನಗರದಲ್ಲಿ ಆಲಿಕಲ್ಲು ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

PREV
15
ರಾಯಚೂರಿನಲ್ಲಿ ಸಿಡಿಲಿಗೆ ಹೊತ್ತಿ ಉರಿದ ತೆಂಗಿನ ಮರ

ರಾಯಚೂರು: ನಿನ್ನೆ ಗುಡುಗು ಮಿಂಚು ಆಲಿಕಲ್ಲು ಸಹಿತ ಸುರಿದ ಧಾರಾಕಾರ ಮಳೆಗೆ ರಾಜ್ಯದ ಹಲವು ಕಡೆಗಳಲ್ಲಿ ಕೆಲವೊಂದು ಅನಾಹುತಗಳು ಸಂಭವಿಸಿದೆ. ರಾಯಚೂರು ಜಿಲ್ಲೆ ಅರಕೇರಾ ತಾ. ಹಾಳಜಾಡಲದಿನ್ನಿ ಗ್ರಾಮದಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದು ತೆಂಗಿನ ಮರ ಹೊತ್ತಿ ಉರಿದಿದೆ. ರೈತ ಶರೀಫ್ ಸಾಬ್ ಎಂಬುವರಿಗೆ ಸೇರಿದ ತೆಂಗಿನ ಮರ ಇದಾಗಿದೆ. ಸಿಡಿಲು ಬಡಿದ ಪರಿಣಾಮ ತೆಂಗಿನಮರ ಸಂಪೂರ್ಣ ಸುಟ್ಟು ಹೋಗಿದ್ದು, ಮರ ಹೊತ್ತಿ ಉರಿಯುತ್ತಿರುವ ದೃಶ್ಯ ಈಗ ವೈರಲ್ ಆಗಿದೆ.

ಇದನ್ನೂ ಓದಿ: ಒಡೆದ ತುಂಗಭದ್ರಾ ಎಡದಂಡೆ ಕಾಲುವೆ: ಅಪಾರ ಪ್ರಮಾಣ ನೀರು ಪೋಲು: ರೈತರ ಜಮೀನಿಗೆ ನುಗ್ಗಿದ ನೀರು

25
ಚಾಮರಾಜನಗರ ಆಲಿಕಲ್ಲು ಮಳೆಗೆ ಬೆಳೆ ಹಾನಿ

ಚಾಮರಾಜನಗರ: ನಿನ್ನೆ ಸುರಿದ ಆಲಿಕಲ್ಲು ಮಳೆ ಚಾಮರಾಜನಗರದಲ್ಲಿ ದೊಡ್ಡ ಅವಾಂತರವನ್ನೇ ಸೃಷ್ಟಿಸಿದ್ದು, ಬೆಳೆದ ಬೆಳೆ ಕೈಗೆ ಸಿಗದೇ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಆಲಿಕಲ್ಲು ಮಳೆಯಿಂದ ಬೆಳೆಗಳಿಗೆ ಹಾನಿಯಾಗಿದ್ದು, ಮೆಣಸಿನಕಾಯಿ,ಟೊಮ್ಯಾಟೊ, ಕಲ್ಲಂಗಡಿ, ಬಾಳೆ ಸೇರಿ ಹಲವು ಬೆಳೆಗೆ ಹಾನಿಯಾಗಿದೆ. ಚಾಮರಾಜನಗರ ಗ್ರಾಮಾಂತರ ಪ್ರದೇಶದಲ್ಲಿ ಬಿದ್ದ ಆಲಿಕಲ್ಲು ಮಳೆಯಿಂದಾಗಿ ಚಾಮರಾಜನಗರ ತಾಲೂಕಿನ ಉತ್ತುವಳ್ಳಿ,ಕಾಡಳ್ಳಿ,ಸಂತೇಮರಹಳ್ಳಿ, ಬಸವಟ್ಟಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

ಇದನ್ನೂ ಓದಿ: ಕೌಟುಂಬಿಕ ಕಲಹ ಎರಡು ಮಕ್ಕಳಾದ ಬಳಿಕ ಸನ್ಯಾಸಿಯಾದ ಪತಿಗೆ ಬೀದಿಯಲ್ಲೇ ಥಳಿಸಿದ ಮಹಿಳೆ: ವೀಡಿಯೋ

35
ಆಲಿಕಲ್ಲು ಮಳೆ ಬಳಿಕದ ದೃಶ್ಯ

ಚಾಮರಾಜನಗರ ಜಿಲ್ಲೆಯ ನಂಜೇದೇವನಪುರ ಹಾಗು ಜಿಲ್ಲೆಯ ಗಡಿಭಾಗದ ತಾಳವಾಡಿಯಲ್ಲಿ ಕಂಡೂ ಕೇಳರಿಯದ ರೀತಿಯಲ್ಲಿ ಆಲಿಕಲ್ಲು ಮಳೆಯಾಗಿದೆ. ಈ ಗ್ರಾಮಗಳ ಬೀದಿಬೀದಿಗಳಲ್ಲಿ ಹಾಗು ಜಮೀನು, ತೋಟಗಳಲ್ಲಿ ಆಲಿಕಲ್ಲು ರಾಶಿರಾಶಿಯಾಗಿ ಬಿದ್ದಿದ್ದು ಗ್ರಾಮಸ್ಥರು ಆಶ್ಚರ್ಯ ಚಿಕಿತರಾಗಿದ್ದಾರೆ..

ಇದನ್ನೂ ಓದಿ:  ರಾಜ್ಯದಲ್ಲಿ ಬೇಸಿಗೆ ಮಳೆಗೆ ಮತ್ತೊಂದು ಬಲಿ: ಮನೆ ಗೋಡೆ ಕುಸಿದು ಪತ್ನಿ ಸಾವು, ಪತಿ ಜಸ್ಟ್ ಮಿಸ್

45
ಬೀದರ್‌ನಲ್ಲೂ ಮೂರು ದಿನಗಳಿಂದ ರಾತ್ರಿ ನಿರಂತರ ಮಳೆ

ಬೀದರ್: ಗಡಿ ಜಿಲ್ಲೆ ಬೀದರ್‌ನಲ್ಲಿಯೂ ಆಕಾಲಿಕ ಮಳೆಗೆ ಜನ ಹೈರಾಣಾಗಿದ್ದಾರೆ.ಜಿಲ್ಲೆಯಾದ್ಯಂತ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗಿದ್ದು, ಸತತ ಎರಡು ಗಂಟೆ ಕಾಲ ಆಲಿಕಲ್ಲು ಮಳೆ ಸುರಿದಿದೆ. ಕಳೆದ ಮೂರು ದಿನಗಳಿಂದ ಇಲ್ಲಿ ರಾತ್ರಿ ನಿರಂತರ ಮಳೆಯಾಗಿದೆ.ಬೀದರ್ ಜಿಲ್ಲೆಯ ಹುಮನಾಬಾದ್‌, ಔರಾದ್, ಬಸವಕಲ್ಯಾಣ ಸೇರಿದಂತೆ ಹಲವೆಡೆ ಆಲಿಕಲ್ಲು ಮಳೆಯಾಗಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ.

ಇದನ್ನೂ ಓದಿ: ಚಿಕ್ಕಮಗಳೂರು : 50 ಅಡಿ ಆಳದ ಕಂದಕಕ್ಕೆ ಬಿದ್ದ ‌ಕಾರು: ಅನುಮಾನ ಹುಟ್ಟಿಸಿದ ಅಪಘಾತ ಪ್ರಕರಣ

55
ಗದಗದಲ್ಲಿ ಸಿಡಿಲು ಬಡಿದು ರೈತ ಸಾವು

ಗದಗ: ಗದಗ ಜಿಲ್ಲೆ ರೋಣ ತಾಲೂಕಿನ ಮೆಣಸಗಿ ಗ್ರಾಮದಲ್ಲಿ ಸಿಡಿಲು ಬಡಿದು ರೈತ ನಿಂಗಪ್ಪ ಅಮಾತ್ಯ (58) ಮೃತಪಟ್ಟಿದ್ದಾರೆ. ಬೆಣ್ಣೆಹಳ್ಳ ಸಮೀಪ ಜಮೀನಿನಲ್ಲಿ ಕೆಲಸಕ್ಕೆ ಹೋಗಿದ್ದ ಅವರು ಕೆಲಸ ಮುಗಿಸಿ ವಾಪಾಸ್ ಬರುವ ವೇಳೆ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಹಾಗೆಯೇ ಗದಗ ಜಿಲ್ಲೆಯ ರೋಣ ತಾಲೂಕಿನ ಹಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದೆ.

ಇದನ್ನೂ ಓದಿ: ರೈತರ ಕೈಗೆ ಸಿಕ್ಕ ಪಂಪ್‌ಸೆಟ್ ಕೇಬಲ್ ಕಳ್ಳರು: ಕದ್ದ ಕೇಬಲ್‌ನಿಂದ ಮರಕ್ಕೆ ಕಟ್ಟಿ ಥಳಿಸಿದ ರೈತರು

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories