ಸಣ್ಣ ಖಾಲಿ ಜಾಗದಲ್ಲೇ 'ಗರಿ ಗರಿ ನೋಟು ಕೊಡುವ ಉದ್ಯಮ'! ಹಳ್ಳಿಹೈದನ ಬ್ಯುಸಿನೆಸ್ ಐಡಿಯಾಗೆ ದೊಡ್ಡ ಉದ್ಯಮಿಗಳೇ ಫಿದಾ!

Published : Jun 11, 2026, 07:11 PM IST

ಸಣ್ಣ ಜಾಗವನ್ನೇ ನೋಟು ಮುದ್ರಿಸುವ ಯಂತ್ರ (Currency printing Machine) ಮಾಡಿಕೊಂಡ ಹಳ್ಳಿ ಹೈದ. ತಿಂಗಳಿಗೆ 20 ಸಾವಿರ ಖರ್ಚಿನಲ್ಲಿ 22 ಲಕ್ಷ ರೂ. ಆದಾಯ ಗಳಿಸುವ ಈತನ ಬ್ಯುಸಿನೆಸ್(Business) ಐಡಿಯಾವನ್ನು ನೋಡಿ ದೊಡ್ಡ ದೊಡ್ಡ ಉದ್ಯಮಿಗಳೇ ಶಾಕ್ ಆಗಿದ್ದಾರೆ. ಅಷ್ಟಕ್ಕೂ ಏನದು ಉದ್ಯಮ ನೀವೇ ಓದಿ.

PREV
16

ಸಾಮಾನ್ಯವಾಗಿ ಈಜುಕೊಳ ಎಂದರೆ ಅದೊಂದು ಹವ್ಯಾಸ ಅಥವಾ ಕೇವಲ ಮನರಂಜನೆಯ ತಾಣ ಎಂದು ನಾವು ಭಾವಿಸುತ್ತೇವೆ. ಆದರೆ ಉತ್ತರ ಪ್ರದೇಶದ ಮೀರತ್‌ನ ವ್ಯಕ್ತಿಯೊಬ್ಬರು ತಮ್ಮ ಈಜುಕೊಳವನ್ನು ತಿಂಗಳಿಗೆ ಲಕ್ಷಾಂತರ ರೂಪಾಯಿ ಲಾಭ ತಂದುಕೊಡುವ 'ಹಣ ಮುದ್ರಿಸುವ ಯಂತ್ರ'ವಾಗಿ ಮಾರ್ಪಡಿಸಿದ್ದಾರೆ. ಬೇಸಿಗೆಯ ಕೇವಲ ಒಂದು ತಿಂಗಳಲ್ಲಿ ಇವರು ಬರೋಬ್ಬರಿ 22.5 ಲಕ್ಷ ರೂಪಾಯಿ ಸಂಪಾದಿಸುತ್ತಿರುವ ವಿಚಾರ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

26

ಏನಿದು ಯಶೋಗಾಥೆ?:

ಪೂಜಾ ಎಂಬ ಎಕ್ಸ್ (ಟ್ವಿಟರ್) ಬಳಕೆದಾರರು ತಮ್ಮ ಸ್ನೇಹಿತನ ಈ ವಿನೂತನ ವ್ಯವಹಾರದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಮೀರಾಟ್‌ನ NH-58 ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಫಾರ್ಮ್ ಹೌಸ್‌ನಲ್ಲಿ ಈ ಈಜುಕೊಳವನ್ನು ನಿರ್ಮಿಸಲಾಗಿದೆ. ಆರಂಭದಲ್ಲಿ ಇದು ಕೇವಲ ಹವ್ಯಾಸದಂತೆ ಕಂಡರೂ, ಅದರ ಆರ್ಥಿಕ ಲೆಕ್ಕಾಚಾರ ಮಾತ್ರ ದೊಡ್ಡ ಉದ್ಯಮಗಳನ್ನೂ ಮೀರಿಸುವಂತಿದೆ.

36

ಲೆಕ್ಕಾಚಾರ ಹೀಗಿದೆ:

ಪೂಜಾ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಬೇಸಿಗೆಯ ರಜಾ ದಿನಗಳಲ್ಲಿ ಈ ಈಜುಕೊಳಕ್ಕೆ ಪ್ರತಿದಿನ ಸರಾಸರಿ 700 ರಿಂದ 800 ಜನರು ಭೇಟಿ ನೀಡುತ್ತಾರೆ. ಪ್ರವೇಶ ಶುಲ್ಕವಾಗಿ ಒಬ್ಬರಿಗೆ 100 ರೂಪಾಯಿ ನಿಗದಿಪಡಿಸಲಾಗಿದೆ. ಪ್ರತಿದಿನ 750 ಜನರು ಬಂದರೂ ಸಹ ದಿನಕ್ಕೆ 75,000 ರೂಪಾಯಿ ಆದಾಯ ಬರುತ್ತದೆ. ಅಂದರೆ ಒಂದು ತಿಂಗಳಿಗೆ ಬರೋಬ್ಬರಿ 22.5 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಬೇಸಿಗೆಯ ಅಬ್ಬರ ಕಡಿಮೆಯಾದ ನಂತರವೂ ಪ್ರತಿದಿನ ಸುಮಾರು 250 ಜನರು ಭೇಟಿ ನೀಡುತ್ತಿದ್ದು, ತಿಂಗಳಿಗೆ 7.5 ಲಕ್ಷ ರೂಪಾಯಿ ಆದಾಯ ಬರುತ್ತಿದೆಯಂತೆ.

46

ಖರ್ಚು ಕಡಿಮೆ, ಲಾಭ ಹೆಚ್ಚು:

ಈ ಉದ್ಯಮದ ವಿಶೇಷತೆಯೆಂದರೆ ನಿರ್ವಹಣಾ ವೆಚ್ಚ ಅತ್ಯಂತ ಕಡಿಮೆ. ಜಾಗ ಸ್ವಂತದ್ದಾದ ಕಾರಣ ಬಾಡಿಗೆ ನೀಡುವ ಅಗತ್ಯವಿಲ್ಲ. ಕೇವಲ ಇಬ್ಬರು ಭದ್ರತಾ ಸಿಬ್ಬಂದಿಗಳನ್ನು ಕೆಲಸಕ್ಕೆ ಇಟ್ಟುಕೊಳ್ಳಲಾಗಿದ್ದು, ಅವರಿಗೆ ತಿಂಗಳಿಗೆ ಕೇವಲ 20,000 ರೂಪಾಯಿ ವೇತನ ನೀಡಲಾಗುತ್ತಿದೆ. ಅಂದರೆ ಅಲ್ಪ ಹೂಡಿಕೆ ಮತ್ತು ಕಡಿಮೆ ನಿರ್ವಹಣೆಯಲ್ಲಿ ಗರಿಷ್ಠ ಲಾಭ ಪಡೆಯುತ್ತಿದ್ದಾರೆ.

56

ನೀರಿನಲ್ಲೂ ಡಬಲ್ ಲಾಭ:

ಈ ಬ್ಯುಸಿನೆಸ್ ಮಾಡೆಲ್‌ನಲ್ಲಿ ನೆಟ್ಟಿಗರನ್ನು ಹೆಚ್ಚು ಆಕರ್ಷಿಸಿದ್ದು ನೀರಿನ ಮರುಬಳಕೆಯ ತಂತ್ರ. ಈಜುಕೊಳದ ನೀರನ್ನು ಬದಲಾಯಿಸುವ ಸಮಯದಲ್ಲಿ, ಹಳೆಯ ನೀರನ್ನು ವ್ಯರ್ಥವಾಗಿ ಚರಂಡಿಗೆ ಬಿಡುವ ಬದಲು, ಸ್ಥಳೀಯ ರೈತರಿಗೆ ನೀರಾವರಿ ಉದ್ದೇಶಕ್ಕಾಗಿ ಮಾರಾಟ ಮಾಡಲಾಗುತ್ತಿದೆ. ಒಂದೇ ಸಂಪನ್ಮೂಲದಿಂದ ಎರಡು ಬಾರಿ ಹಣ ಗಳಿಸುವ ಈ 'ಐಡಿಯಾ'ಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

66

ನೆಟ್ಟಿಗರ ಪ್ರತಿಕ್ರಿಯೆ:

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ಜನರು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. 'ಇದು ನಿಜವಾದ ಬ್ಯುಸಿನೆಸ್ ಮೈಂಡ್‌ಸೆಟ್, ಒಂದು ಅಸೆಟ್‌ನಿಂದ ಹಲವು ರೀತಿಯಲ್ಲಿ ಹಣ ಗಳಿಸುವುದು ಜಾಣತನ' ಎಂದು ಕೆಲವರು ಹೊಗಳಿದರೆ, 'ದಿನಕ್ಕೆ 800 ಜನರು ಒಂದೇ ಈಜುಕೊಳದಲ್ಲಿದ್ದರೆ ಅಲ್ಲಿ ಈಜಲು ಹೇಗೆ ಸಾಧ್ಯ? ಶುಚಿತ್ವದ ಕಥೆಯೇನು?' ಎಂದು ಕೆಲವರು ಪ್ರಶ್ನಿಸಿದ್ದಾರೆ. 

ಒಟ್ಟಾರೆ, ಸಣ್ಣ ಹೂಡಿಕೆಯೊಂದಿಗೆ ದೊಡ್ಡ ಮಟ್ಟದ ಹಣ ಗಳಿಸುವ ಈ ಐಡಿಯಾ ಮಾತ್ರ ಯುವ ಉದ್ಯಮಿಗಳಿಗೆ ಸ್ಫೂರ್ತಿಯಾಗಿರುವುದಂತೂ ನಿಜ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories