Travel Good News: ಕಲಬುರಗಿ-ಬೆಂಗಳೂರು ವಿಮಾನಯಾನ ಸೇವೆ ಪುನಾರಂಭ: ನಾಳೆಯಿಂದಲೇ ಹಾರಲಿವೆ 'ಲೋಹದ ಹಕ್ಕಿಗಳು'!

Published : Jun 09, 2026, 09:24 PM IST

ಕಳೆದ 8 ತಿಂಗಳಿಂದ ಸ್ಥಗಿತಗೊಂಡಿದ್ದ ಕಲಬುರಗಿ ಮತ್ತು ಬೆಂಗಳೂರು ನಡುವಿನ ವಿಮಾನಯಾನ ಸೇವೆ ಜೂನ್ 10 ರಿಂದ ಪುನಾರಂಭಗೊಳ್ಳಲಿದೆ. ರಾಜ್ಯ ಸರ್ಕಾರದ ಆರ್ಥಿಕ ನೆರವಿನೊಂದಿಗೆ, ಸ್ಟಾರ್ ಏರ್ ಸಂಸ್ಥೆಯು ವಾರದ ಏಳೂ ದಿನಗಳ ಕಾಲ ಈ ಮಾರ್ಗದಲ್ಲಿ 'ಎಂಬ್ರೆಯರ್ 175' ವಿಮಾನದ ಮೂಲಕ ಸೇವೆ ಒದಗಿಸಲಿದೆ.

PREV
16

ಕಲಬುರಗಿ (ಜೂ.09): ಕಲ್ಯಾಣ ಕರ್ನಾಟಕದ ಜನತೆಗೆ ಹಾಗೂ ಪ್ರಯಾಣಿಕರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ಕಳೆದ 8 ತಿಂಗಳಿಂದ ಸ್ಥಗಿತಗೊಂಡಿದ್ದ ಕಲಬುರಗಿ ಮತ್ತು ಬೆಂಗಳೂರು ನಡುವಿನ ವಿಮಾನಯಾನ ಸೇವೆ ಜೂನ್ 10 (ನಾಳೆ) ರಿಂದ ಅಧಿಕೃತವಾಗಿ ಪುನಾರಂಭಗೊಳ್ಳಲಿದೆ. ಇದರೊಂದಿಗೆ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮತ್ತೆ ಲೋಹದ ಹಕ್ಕಿಗಳ ಹಾರಾಟ ಶುರುವಾಗಲಿದೆ.

26

8 ತಿಂಗಳ ಸುದೀರ್ಘ ಕಾಯುವಿಕೆಗೆ ಅಂತ್ಯ:

ಕೇಂದ್ರ ಸರ್ಕಾರದ 'ಉಡಾನ್' (UDAN) ಯೋಜನೆಯಡಿ ನೀಡಲಾಗುತ್ತಿದ್ದ ಆರ್ಥಿಕ ನೆರವು ಸ್ಥಗಿತಗೊಂಡ ಹಿನ್ನೆಲೆಯಲ್ಲಿ, ಕಳೆದ ಎಂಟು ತಿಂಗಳ ಹಿಂದೆ ಕಲಬುರಗಿಯಿಂದ ಬೆಂಗಳೂರಿಗೆ ಇದ್ದ ವಿಮಾನ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.

36

ಇದರಿಂದಾಗಿ ಈ ಭಾಗದ ಉದ್ಯಮಿಗಳು, ವಿದ್ಯಾರ್ಥಿಗಳು ಹಾಗೂ ತುರ್ತು ಚಿಕಿತ್ಸೆಗಾಗಿ ಬೆಂಗಳೂರಿಗೆ ತೆರಳುವ ರೋಗಿಗಳಿಗೆ ಭಾರಿ ತೊಂದರೆಯಾಗಿತ್ತು. ಆದರೆ ಈಗ ರಾಜ್ಯ ಸರ್ಕಾರವು ಆರ್ಥಿಕ ನೆರವು ನೀಡಲು ಮುಂದೆ ಬಂದಿರುವ ಹಿನ್ನೆಲೆಯಲ್ಲಿ, ಸ್ಟಾರ್ ಏರ್ (Star Air) ಸಂಸ್ಥೆಯು ತನ್ನ ವಿಮಾನ ಸೇವೆಯನ್ನು ಪುನಾರಂಭಿಸಲು ಸಜ್ಜಾಗಿದೆ.

46

ವಾರದ ಏಳೂ ದಿನಗಳ ಕಾಲ ಸೇವೆ:

ವಿಶೇಷವೆಂದರೆ, ಈ ವಿಮಾನಯಾನ ಸೇವೆಯು ವಾರದ ಏಳೂ ದಿನಗಳ ಕಾಲ ಲಭ್ಯವಿರಲಿದೆ. ಸ್ಟಾರ್ ಏರ್ ಸಂಸ್ಥೆಯು 76 ಆಸನಗಳ ಸಾಮರ್ಥ್ಯದ ಅತ್ಯಾಧುನಿಕ 'ಎಂಬ್ರೆಯರ್ 175' (Embraer 175) ಮಾದರಿಯ ವಿಮಾನವನ್ನು ಈ ಮಾರ್ಗದಲ್ಲಿ ಕಾರ್ಯಾಚರಿಸಲಿದೆ.

56

ವಿಮಾನದ ಸಮಯದ ವಿವರ:

ಪ್ರತಿದಿನ ಬೆಳಿಗ್ಗೆ ಈ ವಿಮಾನವು ಉಭಯ ನಗರಗಳ ನಡುವೆ ಸಂಚರಿಸಲಿದ್ದು, ಸಮಯದ ವಿವರ ಈ ಕೆಳಗಿನಂತಿದೆ:

ಬೆಂಗಳೂರಿನಿಂದ ನಿರ್ಗಮನ: ಬೆಳಿಗ್ಗೆ 6:30 ಗಂಟೆಗೆ

ಕಲಬುರಗಿಗೆ ಆಗಮನ: ಬೆಳಿಗ್ಗೆ 7:40 ಗಂಟೆಗೆ

ಕಲಬುರಗಿಯಿಂದ ನಿರ್ಗಮನ: ಬೆಳಿಗ್ಗೆ 8:10 ಗಂಟೆಗೆ

ಬೆಂಗಳೂರಿಗೆ ಆಗಮನ: ಬೆಳಿಗ್ಗೆ 9:20 ಗಂಟೆಗೆ (ಅಂದಾಜು)

66

ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಮತ್ತು ಬೆಂಗಳೂರಿನೊಂದಿಗೆ ಸುಲಭ ಸಂಪರ್ಕ ಸಾಧಿಸಲು ದೊಡ್ಡ ಮಟ್ಟದ ನೆರವಾಗಲಿದೆ. ಕಲಬುರಗಿ ವಿಮಾನ ನಿಲ್ದಾಣದ ಈ ಮರು ಚಾಲನೆಯಿಂದ ಈ ಭಾಗದ ಆರ್ಥಿಕ ಚಟುವಟಿಕೆಗಳಿಗೂ ಹೆಚ್ಚಿನ ವೇಗ ಸಿಗುವ ನಿರೀಕ್ಷೆಯಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories