ಜನಪ್ರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರು ಕಾರು ಅಪಘಾತದಲ್ಲಿ ನಿಧನರಾಗಿದ್ದಾರೆ. ಬಡತನದಿಂದ ಬಂದಿದ್ದ ಮಹಾಂತೇಶ್ ಬೀಳಗಿ ಅವರ ಈ ಕನಸು ನನಸಾಗುವ ಮುನ್ನವೇ ಇಹಲೋಕ ತ್ಯಜಿಸಿದ್ದು, ಅವರ ವ್ಯಕ್ತಿತ್ವವನ್ನು ಸಹೋದ್ಯೋಗಿಗಳು ಸ್ಮರಿಸಿದ್ದಾರೆ.
ಕಾರ್ ಅಪಘಾತದಲ್ಲಿ ಮೃತರಾದ ಕರ್ನಾಟಕದ ಜನಪ್ರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಬಡ ಮಕ್ಕಳಿಗಾಗಿಯೇ ಮಹತ್ವದ ಕನಸು ಕಂಡಿದ್ದರು. ಆ ಕನಸು ಈಡೇರುವ ಮುನ್ನವೇ ಮಹಾಂತೇಶ್ ಬೀಳಗಿ ಮೃತರಾಗಿದ್ದಾರೆ. ಮಹಾಂತೇಶ್ ಬೀಳಗಿ ಅವರ ಅಂತಿಮ ದರ್ಶನ ಪಡೆದ ಬೆಳಗಾವಿ ಪ್ರಾದೇಶಿಕ ಆಯುಕ್ತೆ ಕೆ.ಎಂ.ಜಾನಕಿ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
25
ಬೆಳಗಾವಿ ಪ್ರಾದೇಶಿಕ ಆಯುಕ್ತೆ ಕೆ.ಎಂ.ಜಾನ
ಬೆಳಗಾವಿ ಪ್ರಾದೇಶಿಕ ಆಯುಕ್ತೆ ಕೆ.ಎಂ.ಜಾನಕಿ ಮಾತನಾಡಿ, ಕೊನೆಯದಾಗಿ ಅವರ ತಾಯಿ ತೀರಿಕೊಂಡಾಗ ಬಂದು ಮಾತಾಡಿದ್ದೆ. ತಾಯಿಯನ್ನು ಬಹಳ ಚೆನ್ನಾಗಿ ನೋಡಿಕೊಂಡಿದ್ದರು. ರೊಟ್ಟಿ ಮಾರಿ ತಾಯಿ ನನ್ನನ್ನು ಓದಿಸಿದ್ದರು ಅಂತ ಹೇಳುತ್ತಿದ್ದರು. ಅದೆಲ್ಲವನ್ನೂ ನೋಡಿ ಐಎಎಸ್ ಅಧಿಕಾರಿ ಆಗಬೇಕು ಅಂದುಕೊಂಡು ಬಂದವರು ಎಂದು ಭಾವುಕರಾದು.
35
ಕೋಚಿಂಗ್ ಸೆಂಟರ್ ಆರಂಭಿಸುವ ಕನಸು
ಬಡತನವನ್ನು ಮೆಟ್ಟಿ ನಿಲ್ಲಲು ಏಕೈಕ ಮಾರ್ಗವೆಂದರೆ ಓದುವುದು, ಆ ಮೂಲಕ ಉನ್ನತ ಹುದ್ದೆ ಪಡೆಯುವುದು ಎಂಬುದು ಅವರ ನಿಲುವಾಗಿತ್ತು. ಧಾರವಾಡದಲ್ಲಿ ಬಡ ಮಕ್ಕಳಿಗೆ ಅನುಕೂಲವಾಗಲು ಕೋಚಿಂಗ್ ಸೆಂಟರ್ ತೆರೆಯಲು ನಿರ್ಧರಿಸಿದ್ದರು ಎಂದರು.
ಮಹಾಂತೇಶ ಅವರ ಸ್ನೇಹಿತ ಹಿರಿಯ ಐಎಎಸ್ ಅಧಿಕಾರಿ ಶಿವಾನಂದ ಕಾಪಶಿ ಮಾತನಾಡಿ, ಘಟನೆ ನಿಜಕ್ಕೂ ನಂಬಲು ಆಗುತ್ತಿಲ್ಲ. ಸಾವಿನ ಸುದ್ದಿ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅವರಲ್ಲಿದ್ದ ಜೀವನೋತ್ಸಾಹ ಯಾರಲ್ಲಿಯೂ ಕಾಣಲು ಸಾಧ್ಯವಿಲ್ಲ. ಅಪರೂಪದ ವ್ಯಕ್ತಿತ್ವ. ಅಪ್ಪಟ ಬಸವತತ್ವ ನಿಷ್ಠರು, ಉತ್ತಮ ವಾಗ್ಮಿಗಳು, ಯುವಕರಿಗೆ ಸ್ಫೂರ್ತಿದಾಯಕವಾಗಿದ್ದರು. ಕೆಎಎಸ್, ಐಎಎಸ್ ಆಕಾಂಕ್ಷಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದರು ಎಂದು ಸ್ಮರಿಸಿದರು.