ಬೆಂಗಳೂರಿನ ಟೆಕ್ಕಿಯೊಬ್ಬರು ಲೈಂ*ಗಿಕ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಹೋಗಿ ನಕಲಿ ಗುರೂಜಿಯಿಂದ 48 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. 'ದೇವರಾಜ್ ಬೂಟಿ' ಎಂಬ ದುಬಾರಿ ಔಷಧಿಯನ್ನು ಖರೀದಿಸಿ ಸೇವಿಸಿದ್ದರಿಂದ, ಅವರ ಆರೋಗ್ಯ ಮತ್ತಷ್ಟು ಹದಗೆಟ್ಟು ಕಿಡ್ನಿ ಸಮಸ್ಯೆಯೂ ಕಾಣಿಸಿಕೊಂಡಿದೆ.
ಬೆಂಗಳೂರಿನ ಟೆಕ್ಕಿಯೊಬ್ಬರು 48 ಲಕ್ಷ ರೂಪಾಯಿ ಕಳೆದುಕೊಂಡಿದ್ದು, ಜಾನ್ಞಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಲೈಂ*ಗಿಕ ಸಮಸ್ಯೆಯಿಂದ ಬಳಲುತ್ತಿದ್ದ ಟೆಕ್ಕಿಯೊಬ್ಬರಿಗೆ ವ್ಯಕ್ತಿಯೊಬ್ಬರು ಬರೋಬ್ಬರಿ 48 ಲಕ್ಷ ರೂಪಾಯಿ ವಂಚಿಸಿದ್ದಾರೆ.
25
ಲೈಂ*ಗಿಕ ಸಮಸ್ಯೆ
ಶ್ರೇಯಸ್ (ಹೆಸರು ಬದಲಾಯಿಸಲಾಗಿದೆ) ಎಂಬವರು ಲೈಂಗಿ*ಕ ಸಮಸ್ಯೆಯಿಂದ ಬಳಲುತ್ತಿದ್ದು, ಬೆಂಗಳೂರಿನ ಕೆಂಗೇರಿಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆಸ್ಪತ್ರೆಯಿಂದ ಬರುವಾಗ ರಸ್ತೆಬದಿಯಲ್ಲಿರುವ ಲೈಂ*ಗಿಕ ಸಮಸ್ಯೆಗೆ ಚಿಕಿತ್ಸೆ ನೀಡುವುದಾಗಿ ಟೆಂಟ್‌ಗೆ ಭೇಟಿ ನೀಡಿದ್ದಾರೆ. ಈ ಟೆಂಟ್‌ನಲ್ಲಿದ್ದ ವಿನಯ್ ಗುರೂಜಿ ಎಂಬಾತ ಆಯುರ್ವೇದಿಕ ಔಷಧಿ ನೀಡುವುದಾಗಿ ಹೇಳಿದ್ದಾನೆ.
35
1 ಗ್ರಾಂ ಔಷಧಿಗೆ 1,60,000 ರೂಪಾಯಿ
'ದೇವರಾಜ್ ಬೂಟಿ' ಎಂಬ ಹೆಸರಿನ ಔಷಧಿ ತೆಗೆದುಕೊಳ್ಳುವಂತೆ ಹೇಳಿದ್ದಾರೆ. ದೇವರಾಜ್ ಬೂಟಿ 1 ಗ್ರಾಂ ಔಷಧಿಗೆ 1,60,000 ಬೆಲೆ ನಿಗದಿ ಮಾಡಿದ್ದಾರೆ. ಈ ಔಷಧಿಯನ್ನು ಯಶವಂತಪುರ ವಿಜಯಲಕ್ಷ್ಮೀ ಆಯುರ್ವೇದಿಕ್ ಶಾಪ್‌ನಿಂದ ಮಾತ್ರ ಖರೀದಿಸಬೇಕು ಎಂದು ಒತ್ತಾಯಿಸಿದ್ದಾನೆ. ಔಷಧಿ ಖರೀದಿ ವೇಳೆ ಆನ್‌ಲೈನ್ ಪೇಮೆಂಟ್ ಮಾಡಬಾರದು ಮತ್ತು ಜೊತೆಗೆ ಯಾರನ್ನು ಕರೆದುಕೊಂಡು ಬರಬಾರದು ಎಂದು ಷರತ್ತು ಹಾಕಿದ್ದನು.
ದೇವರಾಜ್ ಬೂಟಿ ಜೊತೆಯಲ್ಲಿ ಭವನ ಬೂಟಿ ಎಂಬ ತೈಲವನ್ನು ಒಟ್ಟು 17 ಲಕ್ಷ ರೂಪಾಯಿ ಖರ್ಚು ಮಾಡಿ ಶ್ರೇಯಸ್ ಖರೀದಿಸಿದ್ದಾರೆ. ಸಮಸ್ಯೆ ಪರಿಹಾರವಾಗದಿದ್ದಾಗ HDFC ಬ್ಯಾಂಕ್‌ನಲ್ಲಿ 20 ಲಕ್ಷ ಲೋನ್ ತೆಗೆದು ಮತ್ತೆ 18 ಗ್ರಾಂ ಔಷಧಿ ಖರೀದಿಸಿದ್ದಾರೆ. ಸಮಸ್ಯೆ ನಿವಾರಣೆಯಾಗುವ ಸಂದರ್ಭದಲ್ಲಿ ಚಿಕಿತ್ಸೆ ಪಡೆದುಕೊಳ್ಳದಿದ್ದಾಗ ಮತ್ತೆ ಬೇರೆ ಸಮಸ್ಯೆಗಳು ಬರುತ್ತವೆ ಎಂದು ಶ್ರೇಯಸ್ ಅವರಿಗೆ ಹೆದರಿಸಿದ್ದಾರೆ.
ದೇವರಾಜ್ ಬೂಟಿ ಮತ್ತು ಭವನ ಬೂಟಿ ತೈಲ ತೆಗೆದುಕೊಳ್ಳುತ್ತಿರುವಾಗ ಆರೋಗ್ಯ ಕ್ಷೀಣಿಸುತ್ತಿರೋದು ಶ್ರೇಯಸ್ ಗಮನಕ್ಕೆ ಬಂದಿದೆ. ರಕ್ತ ಪರೀಕ್ಷೆ ಮಾಡಿಸಿದಾಗ ಕಿಡ್ನಿಗೆ ಸಮಸ್ಯೆಗೆ ಆಗಿರುವುದು ಪತ್ತೆಯಾಗಿದೆ. ಕಿಡ್ನಿ ಸಮಸ್ಯೆಗೆ ತೆಗೆದುಕೊಳ್ಳುತ್ತಿರುವ ಔಷಧಿ ಕಾರಣ ಎಂದು ತಿಳಿದು ಬಂದಿದೆ. ಇದೀಗ ವಿಜಯ್ ಗೂರೂಜಿ, ವಿಜಯಲಕ್ಷ್ಮಿ ಆಯುರ್ವೇದಿಕ್ ವಿರುದ್ಧ ಜಾನ್ಞಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ