ದುಬೈನಿಂದ ಬೆಂಗಳೂರಿಗೆ ಆಗಮಿಸಿದ್ದ ವಿಮಾನದಲ್ಲಿ ಪ್ರಯಾಣಿಸಿದ್ದ ಭೂಪನೊಬ್ಬ, ತನ್ನ ಬಳಿ ಇದ್ದ 3.5 ಕೆಜಿ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ಮಾಡುತ್ತಾರೆಂಬ ಭಯದಿಂದ ತನ್ನ ಟ್ರಾಲಿ ಬ್ಯಾಗ್‌ನಿಂದ ಸಹ ಪ್ರಯಾಣಿಕನ ಟ್ರಾಲಿ ಬ್ಯಾಗ್‌ಗೆ ಹಾಕಿದ್ದಾನೆ. ಬೇರೊಬ್ಬ ಪ್ರಯಾಣಿಕನ ಲಗೇಜ್ ಟ್ರಾಲಿಗೆ ಚಿನ್ನದ ಗಟ್ಟಿಗಳನ್ನು ಹಾಕಿದ ನಂತರ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ ಎಂದು ಹೇಳಲಾಗುತ್ತಿದೆ.