ರಮ್ಯಾ ನಾಯರ್ 8 ದಿನಗಳ ಬ್ಯೂಟಿಷಿಯನ್ ಕೋರ್ಸ್ ಹಿಂದಿದೆ ವಂಚನೆ ಜಾಲ; ಪೊಲೀಸ್ ಠಾಣೆಗೆ ದೂರು!

Published : Jul 21, 2025, 12:13 PM IST

ಬೆಂಗಳೂರಿನ ನಾಗರಭಾವಿಯಲ್ಲಿರುವ ರಮ್ಯಾ ನಾಯರ್ ಮೇಕಪ್ ಅಕಾಡೆಮಿ ವಿರುದ್ಧ 8 ದಿನಗಳ ಬ್ಯೂಟಿಷಿಯನ್ ತರಬೇತಿಯ ಹೆಸರಿನಲ್ಲಿ ಮೋಸ ಮಾಡುತ್ತಿರುವ ಆರೋಪದ ಮೇಲೆ ಮಹಿಳಾ ಬ್ಯೂಟಿಷಿಯನ್ ಸಂಘವು ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

PREV
18

ಬೆಂಗಳೂರು (ಜು.21): ಮಹಿಳೆಯರ ಭವಿಷ್ಯದ ಜೊತೆಗೆ ಚೆಲ್ಲಾಟವಾಡುತ್ತಾ ಹಣವನ್ನು ಸುಲಿಗೆ ಮಾಡುತ್ತಿರುವ ಬ್ಯೂಟಿಷಿಯನ್ ತರಬೇತಿ ಕೇಂದ್ರದ ವಿರುದ್ಧ ಬೆಂಗಳೂರಿನಲ್ಲಿ ವಂಚನೆ ಕೇಸ್ ದಾಖಲಿಸಲಾಗಿದೆ. ಇದೀಗ ದೊಡ್ಡ ವಿವಾದವನ್ನೇ ಹುಟ್ಟುಹಾಕಿದೆ. ನಾಗರಭಾವಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 'ರಮ್ಯಾ ನಾಯರ್ ಮೇಕಪ್ ಅಕಾಡೆಮಿ' ವಿರುದ್ಧ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಗೆ ಬ್ಯೂಟಿಷಿಯನ್ ಮಹಿಳೆಯರ ಸಂಘ ದೂರು ಸಲ್ಲಿಸಿದೆ.

28

ಶಿವಮೊಗ್ಗ ಮೂಲದ ರಮ್ಯಾ ಎಂಬ ಯುವತಿ ಈ ಅಕಾಡೆಮಿಯನ್ನು ಆರಂಭಿಸಿ, ಕೇವಲ 8 ದಿನಗಳ 'ಕ್ರ್ಯಾಶ್ ಕೋರ್ಸ್' ಮೂಲಕ ಬ್ಯೂಟಿಷಿಯನ್ ಮತ್ತು ಮೇಕಪ್ ತರಬೇತಿ ನೀಡುತ್ತಿರುವುದಾಗಿ ಜಾಹೀರಾತು ಮಾಡುತ್ತಿದ್ದಾರೆ. ₹7200 ರೂಪಾಯಿ ಫೀಸ್‌ನೊಂದಿಗೆ ಪ್ರಸಾರ ಮಾಧ್ಯಮಗಳಲ್ಲಿ ಆಕರ್ಷಕ ಜಾಹೀರಾತುಗಳ ಮೂಲಕ ಮಹಿಳೆಯರನ್ನು ಸೆಳೆಯುತ್ತಿದ್ದಾರೆ.

38

ಹೀಗಾಗಿ, ವೃತ್ತಿಪರ ತರಬೇತಿಗೆ ಅಗತ್ಯವಿರುವ ಸಮಯ, ಗುಣಮಟ್ಟ, ಅನುಭವ ಈ ಎಲ್ಲಾ ಅಂಶಗಳನ್ನು ನಿರ್ಲಕ್ಷಿಸಿ, ' ಕೇವಲ 8 ದಿನದ ಕೋರ್ಸ್ ಮೂಲಕ ಸ್ವತಂತ್ರವಾಗಿ ಮತ್ತು ಸುಲಭವಾಗಿ ಬ್ಯೂಟೀಷಿಯನ್ ತರಬೇತಿ ಪೂರ್ಣಗೊಳಿಸಬಹುದು' ಎಂಬ ಅಭಿಪ್ರಾಯ ಬಿತ್ತಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

48

30ಕ್ಕೂ ಹೆಚ್ಚು ಮಹಿಳೆಯರಿಂದ ದೂರು

ಈ ಕುರಿತಾಗಿ, 30ಕ್ಕೂ ಹೆಚ್ಚು ಮಹಿಳೆಯರು ರಮ್ಯಾ ನಾಯರ್ ಅಕಾಡೆಮಿಯ ವಿರುದ್ಧ ದೂರು ನೀಡಿದ್ದಾರೆ. ಅವರ ಪ್ರಕಾರ, ಬ್ಯೂಟೀಷಿಯನ್ ಕೋರ್ಸ್‌ನಲ್ಲಿ ಪೂರ್ಣ ಕೌಶಲ್ಯ ಸಾಧಿಸಲು ಕನಿಷ್ಠ 3 ತಿಂಗಳು ಅಥವಾ 6 ತಿಂಗಳ ತರಬೇತಿ ಅವಶ್ಯಕ. ಆದರೆ, ಇಂಥ ತಾತ್ಕಾಲಿಕ ಕೋರ್ಸ್‌ಗಳು ಭವಿಷ್ಯವನ್ನು ನಿರ್ಮಿಸಲು ಸಾಧ್ಯವಿಲ್ಲ. ಇವು ಮಹಿಳೆಯರ ಭವಿಷ್ಯ ನಾಶ ಪಡಿಸುತ್ತವೆ ಎಂದು ಸಂಘದ ಸದಸ್ಯರು ಕಿಡಿಕಾರಿದ್ದಾರೆ.

58

'ಬ್ಯೂಟಿಷಿಯನ್ ತರಬೇತಿ ಸುಲಭ ವಿಷಯವಲ್ಲ. ಕೇವಲ 8 ದಿನದಲ್ಲಿ ಯಾವುದೇ ವೃತ್ತಿಪರ ಕೌಶಲ್ಯವನ್ನು ಸಂಪೂರ್ಣವಾಗಿ ಕಲಿಯಲು ಸಾಧ್ಯವಿಲ್ಲ. ಇದು ಕೇವಲ ಹಣ ಗಳಿಸುವ ಗಿಮಿಕ್' ಎಂದು ಸಂಘದ ಅಧ್ಯಕ್ಷೆ ಆಕ್ರೋಶ ವ್ಯಕ್ತಪಡಿಸಿದರು.

68

ಅವಾಚ್ಯ ನಿಂದನೆಗೂ ಒಳಗಾದ ಆರೋಪಿಗಳು:

ಮಾಹಿತಿಯ ಪ್ರಕಾರ, ರಮ್ಯಾ ನಾಯರ್ ಅಕಾಡೆಮಿಗೆ ವಿರೋಧ ವ್ಯಕ್ತಪಡಿಸಿದ ಮಹಿಳೆಯರು ಅವಾಚ್ಯ ನಿಂದನೆಗೂ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಾಗಿದೆ.

78

ಸರ್ಕಾರದ ಮೆಟ್ಟಿಲು ಏರಿದ ಸಂಘ

ಇಂತಹ ಅನಧಿಕೃತ ಅಕಾಡೆಮಿಗಳ ವಿರುದ್ಧ ತೀವ್ರ ಕ್ರಮ ಕೈಗೊಳ್ಳಬೇಕೆಂದು ಮಹಿಳಾ ಬ್ಯೂಟಿಷಿಯನ್ ಟ್ರಸ್ಟ್ ರಾಜ್ಯ ಸರ್ಕಾರಕ್ಕೆ ಲಿಖಿತವಾಗಿ ಮನವಿ ಸಲ್ಲಿಸಿದ್ದು, ಅಂಗೀಕೃತ ತರಬೇತಿ ವ್ಯವಸ್ಥೆ ಮತ್ತು ಮಾನ್ಯತಾ ಪ್ರಮಾಣಪತ್ರಗಳ ಕಡ್ಡಾಯ ನಿಯಮ ಜಾರಿಗೆ ತರಬೇಕು ಎಂದು ಆಗ್ರಹಿಸಿದೆ.

88

ಸಾರಾಂಶ:

  • ಸ್ಥಳ: ನಾಗರಭಾವಿ, ಬೆಂಗಳೂರು
  • ಆರೋಪಿತರು: ರಮ್ಯಾ ನಾಯರ್
  • ಅಕಾಡೆಮಿ ಹೆಸರು: Ramya Nair Makeup Academy
  • ದೂರು ನೀಡಿದವರು: ಮಹಿಳಾ ಬ್ಯೂಟಿಷಿಯನ್ ಸಂಘ
  • ಆರೋಪ: ಕೇವಲ 8 ದಿನಗಳ ತರಬೇತಿ ನೀಡುವ ಮೂಲಕ ಜನರಿಗೆ ಮೋಸ, ತಪ್ಪು ಮಾಹಿತಿ, ನಿಂದನೆ
  • ದೂರು ದಾಖಲು: ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆ
Read more Photos on
click me!

Recommended Stories