ಮಡಿಕೇರಿ ಬಳಿ ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ, ಡ್ರೈವರ್ ಸ್ಥಿತಿ ಗಂಭೀರ

Published : May 08, 2026, 08:22 AM IST

ಮಡಿಕೇರಿ ಬಳಿ ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ, ಡ್ರೈವರ್ ಸ್ಥಿತಿ ಗಂಭೀರವಾಗಿದೆ. ಇಂದು ಮುಂಜಾನೆ ಘಟನೆ ನಡೆದಿದೆ. ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ ಅಪಘಾತಕ್ಕೀಡಾಗಿದೆ.

PREV
15
ಬಸ್ ಚಲಿಸುತ್ತಿರುವಾಗ ಚಾಲನಿಗೆ ಹೃದಾಯಘಾತ

ಬಸ್ ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತ ಸಂಭವಿಸಿ ಬಸ್ ಅಪಘಾತಕ್ಕೀಡಾದ ಘಟನೆ ಮಡಿಕೇರಿ ಸಮೀಪದ ತಾಳತ್ ಮನೆ ಬಳಿ ನಡೆದಿದೆ. ಬೆಂಗಳೂರಿನಿಂದ ಹೊರಟ ಖಾಸಗಿ ಬಸ್ ಮಡಿಕೇರಿ ಸಮೀಪದ ತಲುಪುತ್ತಿದ್ದಂತೆ ಚಾಲಕನಿಗೆ ತೀವ್ರ ಹೃದಯಾಘಾತ ಸಂಭವಿಸಿದೆ. ಪರಿಣಾಮ ಬಸ್ ರಸ್ತೆ ಪಕ್ಕಕ್ಕೆ ಇಳಿದು ವಾಲಿಕೊಂಡು ನಿಂತಿದೆ. ಅದೃಷ್ಠವಶಾತ್ ಅನಾಹುತ ಸಂಭವಿಸಿಲ್ಲ.

25
ಚಾಲಕನ ಸ್ಥಿತಿ ಗಂಭೀರ

ಚಾಲಕನಿಗೆ ತೀವ್ರ ಹೃದಯಘಾತ ಸಂಭವಿಸಿದೆ. ಆದರೆ ಬಸ್ ರಸ್ತೆಯ ಬದಿಗೆ ಇಳಿದ ಚಾಲಕ ಹಲವರ ಪ್ರಾಣ ಕಾಪಾಡಿದ್ದಾನೆ. ಇತ್ತ ಚಾಲಕನ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ತಕ್ಷಣವೇ ಚಾಲಕನನ್ನು ಮಡಿಕೇರಿ ಬಳಿ ಆಸ್ಪತ್ರೆಗೆ ದಾಖಲಿಸಲಾಗಿದೆ.

35
ರಸ್ತೆ ಬದಿಗೆ ವಾಲಿದ ಬಸ್

ತನಗೆ ಹೃದಯಘಾತವಾಗುತ್ತಿದ್ದಂತೆ ಬಸ್ ಚಾಲಕನ ಬಸ್ ನಿಲ್ಲಿಸುವ ಪ್ರಯತ್ನ ಮಾಡಿದ್ದಾನೆ. ಅಷ್ಟೊರಳಗೆ ತೀವ್ರವಾಗಿ ಹೃದಯಾಘಾತವಾಗಿದೆ. ಆಧರೂ ಬಸ್ ಚರಂಡಿಯತ್ತ ಇಳಿಸಿದ್ದಾನೆ. ಇದರಿಂದ ಬಸ್ ವಾಲಿಕೊಂಡು ನಿಂತಿದೆ. ಇದರ ಪರಿಣಾಮ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.

45
ಮುಂಜಾನೆ ನಡೆದ ಘಟನೆ

ನಿನ್ನೆ (ಮೇ.07) ಬೆಂಗಳೂರಿನಿಂದ ಹೊರಟ ಖಾಸಗಿ ಬಸ್ ಪ್ರಯಾಣಿಕರ ಹೊತ್ತು ಸಾಗಿತ್ತು. ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಪರಿಣಾಮ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸ್ಥಳಕ್ಕೆ ಮಡಿಕೇರಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

55
ಆತಂಕಗೊಂಡ ಪ್ರಯಾಣಿಕರು

ರಸ್ತೆ ಬದಿಯಲ್ಲಿ ಬಸ್ ವಾಲಿಕೊಂಡು ನಿಂತ ಕಾರಣ ಹೆದ್ದಾರಿಯಲ್ಲಿ ಇತರ ವಾಹನ ಸಂಚಾರಕ್ಕೆ ಯಾವುದೇ ಅಡೆ ತಡೆ ಆಗಿಲ್ಲ. ಇತ್ತ ಬಸ್‌ನಲ್ಲಿದ್ದ ಪ್ರಯಾಣಿಕರು ಕೆಲ ಕಾಲ ಆತಂಕಗೊಂಡಿದ್ದರು. ಪ್ರಯಾಣಿಕರಿಗೆ ಇತರ ವಾಹನಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories