ರಾಯಚೂರು ಲೇಡಿ ಕಾನ್ಸ್‌ಸ್ಟೇಬಲ್ ಜೊತೆ ಯಾದಿಗಿರಿ ಪಿಎಸ್ಐ ಲವ್ ಸೆಕ್ಸ್ ದೋಖಾ, ಈ ಪ್ರಕರಣ ಸಂಬಂಧ ಕೇಸ್ ದಾಖಲಾಗಿದೆ. ಮಹಿಳಾ ಪೇದಿ ದೂರು ನೀಡಿದ್ದು, ಇದೀಗ ಇಡೀ ಕೇಸ್ ಹೊಸ ತಿರುವು ಪಡೆದುಕೊಂಡಿದೆ. ಪಿಎಸ್ಐ ವಿರುದ್ಧ ಹಲವು ಕೇಸ್ ದಾಖಲಾಗಿದೆ.
ಯಾದಗಿರಿ ಪಿಎಸ್ಐ ಹಾಗೂ ರಾಯಚೂರು ಲೇಡಿ ಕಾನ್ ಸ್ಟೇಬಲ್ ಲವ್, ಸೆಕ್ಸ್ ದೋಖಾ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಪ್ರೀತಿ ಹೆಸರಲ್ಲಿ ಮೋಸ ಮಾಡಿ ಇದೀಗ ನಾನವನಲ್ಲ ಎಂದ ಪ್ರಕರಣದಲ್ಲಿ ಗಂಭೀರ ಆರೋಪಗಳು ಕೇಳಿಬಂದಿದೆ. ಯಾದಿಗಿರಿ ಪಿಎಸ್ಐ ವಿರೇಶ್ ವಿರುದ್ಧ ರಾಯಚೂರು ಮಹಿಳಾ ಪೇದೆ ಜಯಶ್ರಿ ದೂರು ದಾಖಲಿಸಿದ್ದಾರೆ.
25
ಅತ್ಯಾ**ರ ಸೇರಿ ಗಂಭೀರ ಆರೋಪ
ವಿರೇಶ್ ಪ್ರೀತಿ ಹೆಸರಲ್ಲಿ ತನ್ನನ್ನು ಹಲವು ಕಡೆ ಕರೆದುಕೊಂಡು ಹೋಗಿದ್ದ. ಕೊಪ್ಪಳದಲ್ಲಿ ತನ್ನ ಮೇಲೆ ಅತ್ಯಾ**ರ ನಡೆಸಿರುವುದಾಗಿ ಮಹಿಳಾ ಪೇದೆ ಜಯಶ್ರಿ ಆರೋಪಿಸಿದ್ದಾರೆ. ರಾಯಚೂರು ಗ್ರಾಮಾಂತರ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸ್ತಿರೋ ಜಯಶ್ರೀ ಇದೀಗ ಆರೋಪಗಳ ಸುರಿಮಳೆಗೈದಿದ್ದಾರೆ.
35
ಎರಡು ಬಾರಿ ಗರ್ಭಪಾತ
ವಿರೇಶ್ ತನ್ನ ಮೇಲೆ ಅತ್ಯಾ**ರ ಎಸಗಿದ್ದಾನೆ. ಪರಿಣಾಮ ಎರಡು ಬಾರಿ ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾನೆ ಎಂದು ಜಯಶ್ರಿ ಆರೋಪಿಸಿದ್ದಾರೆ. ಇತ್ತ ವಿರೇಶ್ ಮೇಲೆ ಅಪಹರಣ ಪ್ರಕರಣ ಕೂಡ ದಾಖಲಾಗಿದೆ. ಬಲ*ತ್ಕಾರ, ಅಪಹರಣ ಮತ್ತು ಜಾತಿನಿಂದನೆ SC/ST ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಜಯಶ್ರಿ ಗಂಭೀರ ಆರೋಪ ಮಾಡಿದ ಬೆನ್ನಲ್ಲೇ ಇವರ ಪ್ರೇಮ ಪ್ರಸಂಗದ ಹಲವು ವಿಡಿಯೋಗಳು, ಫೋಟೋಗಳು ವೈರಲ್ ಆಗಿದೆ. ಇದರ ಬೆನ್ನಲ್ಲೇ ಪಿಎಸ್ಐ ವಿರೇಶ್ ರಜೆ ಮೇಲೆ ತೆರಳಿದ್ದಾರೆ. ಇದೀಗ ವಿರೇಶ್ ಬಂಧನ ಭೀತಿ ಎದುರಿಸುತ್ತಿದ್ದಾರೆ. ಇದೇ ಕಾರಣದಿಂದ ವಿರೇಶ್ ರಜೆ ಮೇಲೆ ತೆರಳಿದ್ದಾರೆ.
55
ರಾಯಚೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಮಹಿಳಾ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜಯಶ್ರಿ ಗಂಭೀರ ಆರೋಪಗಳ ಪ್ರಕರಣ ರಾಯಚೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ