ಫೋನ್ ಇಲ್ಲ, ಎಟಿಎಂ ಬಳಸುತ್ತಿಲ್ಲ: 100ಕ್ಕೂ ಹೆಚ್ಚು ನಗರಗಳಲ್ಲಿ ಹುಡುಕಾಡಿದರೂ ಪತ್ತೆಯಾಗದ ತನಿಷ್ಕಾ-ತೇಜಸ್ವಿನಿ

Published : Apr 15, 2026, 10:30 AM IST

PUC girls missing in Bengaluru: ಬೆಂಗಳೂರಿನ ವಿದ್ಯಾರಣ್ಯಪುರದ ಇಬ್ಬರು ಪಿಯುಸಿ ವಿದ್ಯಾರ್ಥಿನಿಯರು 75 ದಿನಗಳಿಂದ ನಾಪತ್ತೆಯಾಗಿದ್ದಾರೆ. ಪೊಲೀಸ್ ವಿಶೇಷ ತಂಡವು ಮುಂಬೈ, ಕೇರಳ ಸೇರಿದಂತೆ 100ಕ್ಕೂ ಹೆಚ್ಚು ಕಡೆ ಹುಡುಕಾಡಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಇದು ಪೋಷಕರನ್ನು ಕಂಗಾಲಾಗುವಂತೆ ಮಾಡಿದೆ.

PREV
15
ವಿದ್ಯಾರಣ್ಯಪುರದ ಇಬ್ಬರು ವಿದ್ಯಾರ್ಥಿನಿಯರ ನಿಗೂಢ ನಾಪತ್ತೆ

ಬೆಂಗಳೂರು: ನಗರದ ವಿದ್ಯಾರಣ್ಯಪುರದಲ್ಲಿ ಪಿಯುಸಿ ಓದುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರ ನಾಪತ್ತೆಯಾಗಿ 75 ದಿನಗಳೇ ಕಳೆದಿದ್ದು, ಈ ಹುಡುಗಿಯರ ಇರುವಿಕೆಯ ಬಗ್ಗೆ ಯಾವುದೇ ಸುಳಿವು ಲಭ್ಯವಾಗ್ತಿಲ್ಲ. ಹೀಗಾಗಿ ಪೊಲೀಸರಿಗೆ ಇವರ ಪತ್ತೆ ವಿಚಾರ ಈಗ ದೊಡ್ಡ ಸವಾಲಾಗಿದೆ. ಈ ಇಬ್ಬರು ಹುಡುಗಿಯರ ಪತ್ತೆಗಾಗಿ ಪೊಲೀಸ್ ಇಲಾಖೆ 10ಜನರ ವಿಶೇಷ ತಂಡವನ್ನು ರಚಿಸಿತು. ಈ ತಂಡವೂ ಈ ಇಬ್ಬರು ಬಾಲಕಿಯರಿಗಾಗಿ ಹಲವು ಕಡೆಗಳಲ್ಲಿ ಹುಡುಕಾಟ ನಡೆಸಿದರು ಈ ಹುಡುಗಿಯರ ಬಗ್ಗೆ ಯಾವುದೇ ಸುಳಿವು ಸಿಗ್ತಿಲ್ಲ, ಇವರನ್ನು ಅರಸಿ ಪೊಲೀಸರು ಹೋಗದಿರೋ ಜಾಗವಿಲ್ಲ, ಹುಡುಕಾಡದ ಸ್ಥಳವಿಲ್ಲ. ಆದರೂ ಈ ಹುಡುಗಿಯರು ಎಲ್ಲಿ ಹೋದರು ಏನಾದರೂ ಎಂಬ ಬಗ್ಗೆ ಯಾವುದೇ ಸುಳಿವು ಸಿಗದೇ ಇರೋದು ಪೊಲೀಸರು ಸೇರಿದಂತೆ ಕುಟುಂಬಸ್ಥರನ್ನು ಕಂಗಾಲಾಗುವಂತೆ ಮಾಡಿದೆ.

25
75 ದಿನ ಕಳೆದರೂ ಸಿಗದ ಸುಳಿವು, ಕಂಗಾಲಾದ ಪೋಷಕರು

ಈ ಇಬ್ಬರು ಹುಡುಗಿಯರಿಗಾಗಿ ಕೇರಳದಲ್ಲಿಯೂ ಪೊಲೀಸ್ ತಂಡವೊಂದು ಬೀಡುಬಿಟ್ಟು ಹುಡುಕಾಟ ನಡೆಸಿದೆ. ಬಾಲಕಿಯರು ನಾಪತ್ತೆಯಾಗಿ ಬರೋಬ್ಬರಿ 75 ದಿನ ಕಳೆದರೂ ಕೂಡ ಪೊಲೀಸರಿಗೆ ಅವರ ಬಗ್ಗೆ ಯಾವುದೇ ಸುಳಿವು ಲಭ್ಯವಾಗ್ತಿಲ್ಲ. ಇಬ್ಬರು ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ನಾಪತ್ತೆಯಾಗಿದ್ದರು. ಸೆಕೆಂಡ್ ಪಿಯುಸಿ ಓದುತ್ತಿದ್ದ ತನಿಷ್ಕಾ ಹಾಗೂ ಆಕೆಯ ಜ್ಯೂನಿಯರ್ ತೇಜಸ್ವಿನಿ ನಾಪತ್ತೆಯಾಗಿದ್ದರು. ಇವರಿಗಾಗಿ ಮುಂಬೈ, ಚೆನೈ, ಕೊಯಮತ್ತೂರು, ದೆಹಲಿ, ಕಾಶಿ, ಕೇರಳ, ಚಾಮರಾಜನಗರ, ಮೈಸೂರು ಸೇರಿದಂತೆ ಸುಮಾರು 100 ಕ್ಕೂ ಹೆಚ್ಚು ಸ್ಥಳಗಳಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

35
100ಕ್ಕೂ ಹೆಚ್ಚು ನಗರಗಳಲ್ಲಿ ಹುಡುಕಾಡಿದರೂ ಪತ್ತೆಯಾಗದ ತನಿಷ್ಕಾ-ತೇಜಸ್ವಿನಿ.

ನಾಪತ್ತೆಯಾದ ಈ ಇಬ್ಬರು ವಿದ್ಯಾರ್ಥಿನಿಯರು ಪೋನ್ ಬಳಸ್ತಿಲ್ಲ, ಎಟಿಎಂ ಕಾರ್ಡ್ ಕೂಡ ಬಳಸಿಲ್ಲ, ಸ್ನೇಹಿತರು ಹಾಗೂ ಕುಟುಂಬದ ಸಂಪರ್ಕವನ್ನು ಮಾಡಿಲ್ಲ, ಇವರು ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದವರೆಗೂ ಹೋಗಿದ್ದ ಸುಳಿವು ಸಿಕ್ಕಿತ್ತು. ಆದರೆ ಅಲ್ಲಿಗೆ ಹೋಗುವಷ್ಟರಲ್ಲಿ ಇವರು ಅಲ್ಲಿಂದಲೂ ನಾಪತ್ತೆಯಾಗಿದ್ದರು. ಅಲ್ಲಿಂದ ಎಲ್ಲಿ ಹೋದ್ರು ಅನ್ನೋದೇ ಈಗ ಯಕ್ಷ ಪ್ರಶ್ನೆಯಾಗಿದೆ. ಕುಟುಂಬಸ್ಥರು ಕೊಟ್ಟ ಮಾಹಿತಿ ಆಧರಿಸಿಯೇ ಬಾಲಕಿಯರ ಎಲ್ಲಾ ಇಷ್ಟದ ಜಾಗಗಳಲ್ಲಿ ಪೊಲೀಸರು ತಲಾಶ್ ನಡೆಸಿದ್ದಾರೆ.

45
ಫೋನ್ ಇಲ್ಲ, ಎಟಿಎಂ ಬಳಸುತ್ತಿಲ್ಲ: ಬಾಲಕಿಯರ ಪತ್ತೆ ಪೊಲೀಸರಿಗೇ ದೊಡ್ಡ ಸವಾಲು

ಮನೆಯಿಂದ ಹೊರಟು ಹೋಗುವ ವೇಳೆ ಇಬ್ಬರು ಕೇವಲ ಮೂರು ಸಾವಿರ ರೂಪಾಯಿ ಎತ್ಕಂಡ್ ಹೋಗಿದ್ದವ್ರು ಇಷ್ಟು ದಿನ ಅಜ್ಞಾತವಾಗಿರಲು ಹೇಗೆ ಸಾಧ್ಯ? ಇವರಿಗೇನಾದರೂ ಆಗಿರಬಹುದೇ ಎಂಬ ಪ್ರಶ್ನೆ ಈಗ ಕುಟುಂಬದವರು ಹಾಗೂ ಪೊಲೀಸರನ್ನು ಕಾಡುತ್ತಿದೆ. ಇವರ ಬಗ್ಗೆ ಎಲ್ಲಿಯೂ ಯುಡಿಆರ್ ಆರ್ ಕೇಸ್ ಕೂಡಾ ದಾಖಲಾಗಿಲ್ಲ. ಹೀಗಾಗಿ ತಟಸ್ಥವಾಗಿದ್ದುಕೊಂಡು ತಲೆಮರೆಸಿಕೊಂಡಿರಬಹುದು ಎಂದು ಊಹಿಸಲಾಗ್ತಿದೆ.

55
ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಕೆಯಾದರೂ ಸಿಗದ ಸುಳಿವು

ಆದರೆ ವಿದ್ಯಾರ್ಥಿನಿಯರು ಹೀಗೆ ಮನೆಬಿಟ್ಟು ಹೋಗೋದಕ್ಕೆ ಕಾರಣ ಏನಿರಬಹುದು. ಪರೀಕ್ಷೆಗೆ ಭಯಬಿದ್ದು ಇವರು ನಾಪತ್ತೆಯಾಗಿರಬಹುದಾ ಎಂಬ ಅನುಮಾನವಿದೆ. ರಾಜ್ಯದಲ್ಲಿ ಉಚಿತ ಬಸ್ ಪ್ರಯಾಣ ಇರೋದ್ರಿಂದ ಇವರು ​ಕೈಯಲ್ಲಿ ಆಧಾರ್ ಕಾರ್ಡ್‌ ಇದ್ದು, ಫ್ರೀ ಬಸ್‌ನಲ್ಲಿ ಜರ್ನಿ ಮಾಡಿದ್ದು ಬೆಳಕಿಗೆ ಬಂದಿದೆ. ಜನವರಿ 31 ರಂದು ಇಬ್ಬರು ಕೂಡಾ ಮನೆ ಬಿಟ್ಟು ಹೋಗಿದ್ದು, ಬರೋಬ್ಬರಿ ಎರಡೂವರೆ ತಿಂಗಳುಗಳೇ ಕಳೆದಿವೆ. ಹೀಗಾಗಿ ಯುವತಿಯರ ಪೋಷಕರು ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ವಿದ್ಯಾರ್ಥಿನಿಯರನ್ನು ಹುಡುಕಲು ಪೊಲೀಸರಿಗೆ ಒಂದು ವಾರದ ಕಾಲಾವಕಾಶ ನೀಡಿದ್ದು ಈ ಗಡುವು ಮುಗಿದು ಒಂದು ತಿಂಗಳೇ ಕಳೆದಿದೆ. ಆದರೂ ಈ ಬಾಲಕಿಯರ ಸುಳಿವು ಪತ್ತೆಯಾಗದೇ ಇರೋದು ಪೋಷಕರನ್ನು ಕಂಗಾಲಾಗುವಂತೆ ಮಾಡಿದೆ.

ಇದನ್ನೂ ಓದಿ:  180ಕ್ಕೂ ಹೆಚ್ಚು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: 350 ಅಶ್ಲೀಲ ವೀಡಿಯೋ ಇಟ್ಕೊಂಡು ಬ್ಲಾಕ್‌ಮೇಲ್ ಮಾಡ್ತಿದ್ದ ಅಯಾಜ್ ಅರೆಸ್ಟ್

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories