ಶಿವಮೊಗ್ಗದಲ್ಲಿ ಪಶುವೈದ್ಯೆ ಸಮೀಕ್ಷಾ ರೆಡ್ಡಿಯನ್ನ ಬಲಿ ಪಡೆದಿದ್ದ ನೀರಾನೆ 'ಹಂಸಿನಿ'ಯೂ ಸಾವು! ಕಾರಣವೇನು ಗೊತ್ತಾ?

Published : Apr 14, 2026, 06:12 PM IST

ಶಿವಮೊಗ್ಗದ ತಾವರೆಕೊಪ್ಪ ಸಫಾರಿಯಲ್ಲಿ ಪಶುವೈದ್ಯೆ ಸಮೀಕ್ಷಾ ರೆಡ್ಡಿಯನ್ನು ಬಲಿ ಪಡೆದಿದ್ದ 12 ವರ್ಷದ ಹಂಸಿನಿ ಎಂಬ ನೀರಾನೆ ಸಾವನ್ನಪ್ಪಿದೆ. ಈ ಹಿಂದೆ ಎರಡು ಬಾರಿ ಮರಿಗಳನ್ನು ಕಳೆದುಕೊಂಡಿದ್ದ ಹಂಸಿನಿಯ ಸಾವು ಮೃಗಾಲಯಕ್ಕೆ ನಷ್ಟವಾಗಿದೆ.

PREV
16
ಶಿವಮೊಗ್ಗ ಹಂಸಿನಿ ನೀರಾನೆಯೂ ಸಾವು

ಶಿವಮೊಗ್ಗದ ಪ್ರಸಿದ್ಧ ಪ್ರವಾಸಿ ತಾಣವಾದ ತಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ (Tyavarekoppa Safari) ಕಳೆದ ಕೆಲವು ದಿನಗಳ ಹಿಂದೆ ಪಶುವೈದ್ಯೆ ಸಮೀಕ್ಷಾ ರೆಡ್ಡಿಯನ್ನು ಬಲಿ ಪಡೆದಿದ್ದ ನೀರಾನೆ ಕೂಡ ಇಂದು ಸಾವನ್ನಪ್ಪಿದೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ 12 ವರ್ಷದ ಹೆಣ್ಣು ನೀರಾನೆ (Hippopotamus) ಹಂಸಿನಿಯ ಗರ್ಭದಲ್ಲೇ ಮರಿ ಸಾವನ್ನಪ್ಪಿದ ಪರಿಣಾಮ ಉಂಟಾದ ಗಂಭೀರ ಸೋಂಕಿನಿಂದ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

26
ಮೂರನೇ ಬಾರಿಯೂ ಮಗು ಕಳೆದುಕೊಂಡ ಹಂಸಿನಿ:

ಹಂಸಿನಿಯ ಜೀವನದ ಕಥೆ ಒಂದು ನೋವಿನ ಇತಿಹಾಸದಂತಿದೆ. 12 ವರ್ಷದ ಈ ನೀರಾನೆ ಈ ಹಿಂದೆ ಎರಡು ಬಾರಿ ಮರಿಗಳಿಗೆ ಜನ್ಮ ನೀಡಿತ್ತು. ಆದರೆ, ಆ ಎರಡೂ ಮರಿಗಳು ಹುಟ್ಟಿದ ಕೆಲವೇ ದಿನಗಳಲ್ಲಿ ಸಾವನ್ನಪ್ಪಿದ್ದವು. ಈ ಬಾರಿ ಹಂಸಿನಿ ಮೂರನೇ ಬಾರಿಗೆ ಗರ್ಭ ಧರಿಸಿದ್ದಳು.

36
ಹಂಸಿನಿಯ ಬಗ್ಗೆ ವಿಶೇಷ ಕಾಳಜಿ

ಮೃಗಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ಹಂಸಿನಿಯ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದರು. ಆದರೆ, ದುರದೃಷ್ಟವಶಾತ್ ಈ ಬಾರಿಯೂ ಮರಿ ಭೂಮಿಗೆ ಬರುವ ಮೊದಲೇ ಗರ್ಭದಲ್ಲೇ ಸಾವನ್ನಪ್ಪಿದೆ.

46
ಸಾವಿಗೆ ಕಾರಣವಾದ ಗರ್ಭಾಶಯದ ಸೋಂಕು

ಗರ್ಭದಲ್ಲೇ ಮರಿ ಮೃತಪಟ್ಟಿದ್ದರಿಂದ ಹಂಸಿನಿಯ ಗರ್ಭಾಶಯದಲ್ಲಿ ತೀವ್ರವಾದ ಸೋಂಕು (Uterine Infection) ಕಾಣಿಸಿಕೊಂಡಿತ್ತು. ಇದು ಕ್ರಮೇಣ ರಕ್ತಕ್ಕೆ ಹರಡಿ 'ಸೆಪ್ಟಿಸೇಮಿಯಾ' ಎಂಬ ಸ್ಥಿತಿಗೆ ತಲುಪಿತ್ತು. ಇದರಿಂದಾಗಿ ಹಂಸಿನಿಯ ದೇಹದ ಬಹು ಅಂಗಾಂಗಗಳು ವೈಫಲ್ಯಗೊಂಡು (Multiple Organ Failure) ಅದು ಸಾವನ್ನಪ್ಪಿದೆ. ಏಪ್ರಿಲ್ 10 ರಂದು ಹಂಸಿನಿಯ ಗರ್ಭಾಶಯದ ದ್ರವ ಮತ್ತು ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿಯಲ್ಲಿ ಗರ್ಭದಲ್ಲಿ ಭ್ರೂಣ ಮೃತಪಟ್ಟಿದ್ದು, ಅದರಿಂದ ಸೋಂಕು ಇಡೀ ದೇಹಕ್ಕೆ ಹರಡಿದೆ ಎಂಬುದು ದೃಢಪಟ್ಟಿತ್ತು.

56
ಪಶುವೈದ್ಯೆಯ ಬಲಿ ಪಡೆದಿದ್ದ ಹಂಸಿನಿ

ಇದೇ ನೀರಾನೆ ಹಂಸಿನಿ ಕಳೆದ ಮಾರ್ಚ್ ತಿಂಗಳಿನಲ್ಲಿ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಮಾರ್ಚ್ 19 ರಂದು ಮಧ್ಯರಾತ್ರಿ ಹಂಸಿನಿಗೆ ಚಿಕಿತ್ಸೆ ನೀಡಲು ಹೋದಾಗ, ಅದು ದಿಢೀರನೆ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರ ಮೇಲೆ ದಾಳಿ ಮಾಡಿತ್ತು. ಈ ಭೀಕರ ದಾಳಿಯಲ್ಲಿ ಡಾ. ಸಮೀಕ್ಷಾ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಆ ಘಟನೆಯ ನಂತರ ಮೃಗಾಲಯದ ಸಿಬ್ಬಂದಿ ಮತ್ತು ಅಧಿಕಾರಿಗಳು ತೀವ್ರ ಆಘಾತಕ್ಕೆ ಒಳಗಾಗಿದ್ದರು. ಡಾ. ಸಮೀಕ್ಷಾ ಅವರ ಸಾವಿನ ನಂತರ ಹಂಸಿನಿಯ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು.

66
ಮೃಗಾಲಯಕ್ಕೆ ದೊಡ್ಡ ನಷ್ಟ

ಶಿವಮೊಗ್ಗದ ತಾವರೆಕೊಪ್ಪ ಸಫಾರಿಯಲ್ಲಿ ಹಂಸಿನಿ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿತ್ತು. ಅದರ ಸಾವಿನಿಂದಾಗಿ ಮೃಗಾಲಯದ ಸಿಬ್ಬಂದಿ ಕಂಬನಿ ಮಿಡಿದಿದ್ದಾರೆ. ಈಗಾಗಲೇ ಡಾ. ಸಮೀಕ್ಷಾ ಅವರ ಸಾವಿನ ನೋವಿನಲ್ಲಿದ್ದ ಮೃಗಾಲಯಕ್ಕೆ, ಈಗ ಹಂಸಿನಿಯ ಸಾವು ಮತ್ತೊಂದು ದೊಡ್ಡ ನಷ್ಟ ತಂದಿದೆ. ಮೃತ ನೀರಾನೆಯ ಮರಣೋತ್ತರ ಪರೀಕ್ಷೆಯನ್ನು ನಡೆಸಿ, ವನ್ಯಜೀವಿ ನಿಯಮದಂತೆ ಅಂತ್ಯಕ್ರಿಯೆ ನೆರವೇರಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories