ಮಧ್ಯಪ್ರಾಚ್ಯ ಯುದ್ಧದಿಂದಾಗಿ ವಾಣಿಜ್ಯ ಸಿಲಿಂಡರ್‌ಗಳ ಅಭಾವ ಎದುರಿಸುತ್ತಿರುವ ಹೋಟೆಲ್ ಉದ್ಯಮ, ಭವಿಷ್ಯದ ಸಂಕಷ್ಟವನ್ನು ತಪ್ಪಿಸಲು ಪರ್ಯಾಯ ಮಾರ್ಗ ಕಂಡುಕೊಂಡಿದೆ. ಯುದ್ಧದ ಕಾರ್ಮೋಡ ಕವಿದಿರುವುದರಿಂದ ಪರ್ಯಾಯ ಮೂಲದತ್ತ ಹೆಜ್ಜೆ ಇಡಲಿದೆ.
ಮಧ್ಯಪ್ರಾಚ್ಯ ಯುದ್ಧದಿಂದಾಗಿ ವಾಣಿಜ್ಯ ಬಳಕೆಯ ಸಿಲಿಂಡರ್ ಅಭಾವದಿಂದ ಸಂಕಷ್ಟ ಎದುರಿಸಿದ್ದ ಹೋಟೆಲ್ ಉದ್ಯಮ, ಬರುವ ದಿನಗಳಲ್ಲಿ ಇಂತಹ ಸಮಸ್ಯೆಯಿಂದ ಪಾರಾಗಲು ಇದೀಗ ಎಲ್‌ಪಿಜಿಗೆ ಪರ್ಯಾಯವಾಗಿ ಬಯೋಗ್ಯಾಸ್ ಉತ್ಪಾದಿಸಲು ಮುಂದಾಗಿದೆ.
25
ಪರ್ಯಾಯ ಮಾರ್ಗ
ಈ ಹಿಂದೆ ಸಮರ್ಪಕವಾಗಿ ಸಿಲಿಂಡರ್ ಪೂರೈಕೆಯಾಗದೇ ಸೌದೆ ಒಲೆ, ಇಂಡಕ್ಷನ್ ಸ್ಟೌ ಮತ್ತಿತರ ಪರ್ಯಾಯ ಮಾರ್ಗಗಳನ್ನು ಅನುಸರಿಸಿದ್ದ ಹೋಟೆಲ್ ಉದ್ಯಮ, ಇದೀಗ ಸಿಲಿಂಡರ್ ಸರಬರಾಜು ವ್ಯವಸ್ಥೆ ಒಂದಷ್ಟು ಸುಧಾರಿಸಿದೆ ಎನ್ನುವಷ್ಟರಲ್ಲೇ ಪುನಃ ಯುದ್ಧದ ಕಾರ್ಮೋಡ ಕವಿದಿರುವುದರಿಂದ ಪರ್ಯಾಯ ಮೂಲದತ್ತ ಹೆಜ್ಜೆ ಇಡಲಿದೆ.
35
ಬಯೋಗ್ಯಾಸ್ ಉತ್ಪಾದಿಸಲು ಚಿಂತನೆ
ಮುನ್ನೆಚ್ಚರಿಕಾ ಕ್ರಮವಾಗಿ ಗ್ಯಾಸ್ ಸಂಕಷ್ಟಕ್ಕೆ ಹೋಟೆಲ್ ಮಾಲೀಕರು ‘ಮಾಸ್ಟರ್ ಪ್ಲಾನ್’ ರೂಪಿಸಲು ಮುಂದಾಗಿದ್ದಾರೆ. ರಾಜಧಾನಿಯ ಹೋಟೆಲ್‌ಗಳಿಗೆ ಎಲ್‌ಪಿಜಿಗೆ ಪರ್ಯಾಯವಾಗಿ ಅಡುಗೆಗೆ ಬಯೋಗ್ಯಾಸ್ ಉತ್ಪಾದಿಸಲು ಚಿಂತನೆ ನಡೆಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್, ‘ಗ್ರೇಟರ್ ಬೆಂಗಳೂರು ಅಥಾರಿಟಿ ಸಹಯೋಗದಲ್ಲಿ ಆರು ತಿಂಗಳೊಳಗೆ ಬೃಹತ್ ಬಯೋಗ್ಯಾಸ್ ಘಟಕ ಸ್ಥಾಪನೆ ಮಾಡಲಾಗುವುದು. ಹೋಟೆಲ್‌ನಲ್ಲಿ ಉಳಿದ ಆಹಾರ, ತ್ಯಾಜ್ಯ ಬಳಸಿ ಅನಿಲ ಉತ್ಪಾದಿಸಿ ಸಿಲಿಂಡರ್ ಕೊರತೆ ಸಂದರ್ಭದಲ್ಲಿ ನಗರದ ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಪೂರೈಸಲಾಗುವುದು ಎಂದು ಹೇಳಿದರು.
55
ಸಿಲಿಂಡರ್ ಅಭಾವ
ವಾಣಿಜ್ಯ ಗ್ಯಾಸ್ ಸರಬರಾಜು ಸುಧಾರಣೆಯಾಗಿರುವ ಬೆನ್ನಲ್ಲೇ ಅಮೆರಿಕಾ- ಇರಾನ್ ನಡುವೆ ಸಂಧಾನ ವಿಫಲವಾಗಿರುವುದು ಬೇಸರ ತಂದಿದೆ. ಸಿಲಿಂಡರ್ ಅಭಾವ ಇರುವ ಕಡೆ ಸೌಧೆ ಒಲೆ, ಇಂಡಕ್ಷನ್ ಸ್ಟೌ ಬಳಕೆ ಮುಂದುವರಿಯಲಿದೆ. ಭವಿಷ್ಯದಲ್ಲಿ ಗ್ಯಾಸ್ ಅಭಾವ ತಡೆಗಟ್ಟಲು ಬಯೋಗ್ಯಾಸ್ ಉತ್ಪಾದಿಸಲು ನಿರ್ಧರಿಸಲಾಗಿದೆ’ ಎಂದು ಮಾಹಿತಿ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ