KSRTC ಅಶ್ವಮೇಧ ಕ್ಲಾಸಿಕ್ ಟೆಂಪಲ್ ಟೂರ್; ಚೀಪ್ ಅಂಡ್ ಬೆಸ್ಟ್ ಧಾರ್ಮಿಕ ಪ್ರವಾಸ!

Published : Jun 26, 2025, 06:18 PM IST

ಕೆಎಸ್‌ಆರ್‌ಟಿಸಿಯಿಂದ 'ಅಶ್ವಮೇಧ ಕ್ಲಾಸಿಕ್ ಟೆಂಪಲ್ ಟೂರ್' ಯೋಜನೆ. ಬೆಂಗಳೂರಿನಿಂದ 7 ದೇವಾಲಯಗಳಿಗೆ ಒಂದೇ ದಿನದಲ್ಲಿ ಭೇಟಿ ನೀಡುವ ಅವಕಾಶ. ವಾರಾಂತ್ಯ ಮತ್ತು ರಜಾದಿನಗಳಲ್ಲಿ ಲಭ್ಯ. ಕಡಿಮೆ ಬೆಲೆಯಲ್ಲಿ ಒಂದು ದಿನದ ಪ್ರವಾಸಕ್ಕೆ ಅತ್ಯುತ್ತಮ ಆಯ್ಕೆ ಇದಾಗಿದೆ.

PREV
15

ಸಿಲಿಕಾನ್ ಸಿಟಿ ಬೆಂಗಳೂರು ನಿವಾಸಿಗಳಿಗೆ ಬಿಎಂಟಿಸಿ ಸಂಸ್ಥೆಯಿಂದ ದಿವ್ಯ ದರ್ಶನ ಒಂದು ದಿನದ ಧಾರ್ಮಿಕ ಪ್ರವಾಸದ ಯೋಜನೆಯ ಬೆನ್ನಲ್ಲಿಯೇ ಕೆಎಸ್‌ಆರ್‌ಟಿಸಿ ಸಂಸ್ಥೆಯಿಂದಲೂ ಅಶ್ವಮೇಧ ಕ್ಲಾಸಿಕಲ್ ಟೆಂಪರ್ ಟೂರ್ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಮೂಲಕ ಬೆಂಗಳೂರು ಸುತ್ತಲಿನ ಪ್ರದೇಶಗಳಿಗೆ ಒಂದು ದಿನದಲ್ಲಿ ಹಲವು ದೇವಾಲಯಗಳ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕಡಿಮೆ ದರದಲ್ಲಿ ಒಂದು ದಿನದಲ್ಲಿ ಈ ಪ್ರವಾಸ ಭಾಗ್ಯವನ್ನು ನೀವು ಪಡೆಯಬಹುದು.

25

ಕೆಎಸ್‌ಆರ್‌ಟಿಸಿ (KSRTC)ಯಿಂದ ಹೊಸ ಧಾರ್ಮಿಕ ಟೂರ್ ಪ್ಯಾಕೇಜ್ ಆರಂಭವಾಗಿದೆ. ಬಿಎಂಟಿಸಿ (BMTC) ‘ದಿವ್ಯ ದರ್ಶನ’ಕ್ಕೆ ದೊರೆತ ಭರ್ಜರಿ ಪ್ರತಿಸ್ಪಂದನೆಯ ಬೆನ್ನಲ್ಲೇ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಇದೀಗ 'ಅಶ್ವಮೇಧ ಕ್ಲಾಸಿಕ್ ಟೆಂಪಲ್ ಟೂರ್' ಎಂಬ ಹೆಸರಿನಲ್ಲಿ ಒಂದು ದಿನದ ದೇವಾಲಯ ದರ್ಶನ ಪ್ಯಾಕೇಜ್ ಪರಿಚಯಿಸುತ್ತಿದೆ. 

35

ಜೂನ್ 28ರಿಂದ ಆರಂಭಗೊಳ್ಳಲಿರುವ ಈ ಪ್ಯಾಕೇಜ್‌ನಲ್ಲಿ, ನೂತನವಾಗಿ ಪರಿಚಯಿಸಲಾದ 'ಅಶ್ವಮೇಧ ಕ್ಲಾಸಿಕ್' ಬಸ್‌ನಲ್ಲಿ ಧಾರ್ಮಿಕ ಕ್ಷೇತ್ರಗಳ ಪ್ರವಾಸ ನೀಡಲಾಗುತ್ತದೆ. ಬೆಂಗಳೂರು ನಗರದ ಮೆಜೆಸ್ಟಿಕ್ ನಿಂದ ಶುರುವಾಗುವ ಈ ಪ್ರವಾಸದಲ್ಲಿ ಇತಿಹಾಸ ಪ್ರಸಿದ್ಧ ದೇವಾಲಯಗಳು ಹಾಗೂ ಧಾರ್ಮಿಕ ಮಹತ್ವದ ಕ್ಷೇತ್ರಗಳ ದರ್ಶನ ಸಿಗಲಿದೆ.

45

ಯಾವೆಲ್ಲಾ ದೇವಾಲಗಳ ದರ್ಶನ?

  • -ಮೆಜೆಸ್ಟಿಕ್ ನಿಂದ ಟೂರ್ ಆರಂಭ
  • ಚಿಕ್ಕತಿರುಪತಿ - ಪ್ರಸನ್ನ ವೆಂಕಟೇಶ್ವರಸ್ವಾಮಿ ದೇವಾಲಯ
  • ಬಂಗಾರಪೇಟೆ - ಕೋಟಿಲಿಂಗೇಶ್ವರ
  • ಬಂಗಾರು ತಿರುಪತಿ - ಲಕ್ಷ್ಮಿ ವೆಂಕಟೇಶ್ವರಸ್ವಾಮಿ ದೇವಾಸ್ಥಾನ
  • ಅವನಿ - ರಾಮಲಿಂಗೇಶ್ವರ ದೇವಾಲಯ
  • ಮುಳುಬಾಗಿಲು - ವೀರಾಂಜನೇಯಸ್ವಾಮಿ ದೇವಾಲಯ
  • ಕುರುಡುಮಲೆ - ಗಣೇಶ ದೇವಾಲಯ
  • ಕೋಲಾರ - ಕೋಲಾರಮ್ಮ ದೇವಾಲಯ
55

ಒಂದು ದಿನದಲ್ಲಿ 7 ಕ್ಷೇತ್ರಗಳಿಗೆ ಪ್ರವಾಸ ಮಾಡಲು ಅವಕಾಶ ನೀಡುವ ಈ ವಿಶೇಷ ಸೇವೆ, ಭಕ್ತರಿಗೆ ಧಾರ್ಮಿಕ ತೃಪ್ತಿ ನೀಡುವುದರ ಜೊತೆಗೆ ದೇವಾಲಯಗಳ ಸುತ್ತಮುತ್ತಲಿನ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಿದೆ. ಈ ಧಾರ್ಮಿಕ ಪ್ರವಾಸದ ಮೂಲಕ ಭಕ್ತರಿಗೂ, ಪ್ರವಾಸ ಆಸಕ್ತರಿಗೂ ಸಮಾನ ಅವಕಾಶ ಒದಗಿಸುವ ಪ್ರಯತ್ನಕ್ಕೆ ಸರ್ಕಾರ ಕೈ ಹಾಕಿದೆ. 

ಸದ್ಯಕ್ಕೆ ಈ ಸೇವೆ ವಾರಾಂತ್ಯ ದಿನಗಳಾ ಶನಿವಾರ - ಭಾನುವಾರ ಮತ್ತು ಸಾರ್ವಜನಿಕ ರಜಾದಿನಗಳಲ್ಲಿ ಮಾತ್ರ ಲಭ್ಯವಿರಲಿದೆ. ಬೆಳಗ್ಗೆ 6.30ರಿಂದ ಧಾರ್ಮಿಕ ಪ್ರವಾಸ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಆರಂಭವಾದರೆ 7 ದೇವಾಲಯಗಳ ಭೇಟಿ ನಂತರ ರಾತ್ರಿ 8.30ಕ್ಕೆ ಮೆಜೆಸ್ಟಿಕ್ ನಿಲ್ದಾಣಕ್ಕೆ ವಾಪಸ್ ಕರೆದುಕೊಂಡು ಬಂದು ಬಿಡಲಾಗುತ್ತದೆ. ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟಕ್ಕೂ ಸಮಯಾವಕಾಶ ನೀಡಲಾಗುತ್ತದೆ.

ಟಿಕೆಟ್ ದರ:

  • ವಯಸ್ಕರಿಗೆ - ₹600
  • ಮಕ್ಕಳಿಗೆ - ₹450
Read more Photos on
click me!

Recommended Stories