ಈ ಬೆಳವಣಿಗೆಯ ಹಿನ್ನೆಲೆಯಲ್ಲಿ, ಸಾರಿಗೆ ಇಲಾಖೆ ಅಧಿಕಾರಿಗಳು ಪರ್ಯಾಯ ಹೆಸರಿನಲ್ಲಿ ನಡೆಯುತ್ತಿದ್ದ ಟ್ಯಾಕ್ಸಿ ಸೇವೆಗಳ ವಿರುದ್ಧ ಕೂಡ ಕ್ರಮ ಕೈಗೊಂಡಿದ್ದಾರೆ. ಬೈಕ್ ಪಾರ್ಸೆಲ್ ಹೆಸರಿನಲ್ಲಿ ಆಗುತ್ತಿದ್ದ ಟ್ಯಾಕ್ಸಿ ಸೇವೆಯು ಕಾನೂನು ಉಲ್ಲಂಘನೆ ಎನ್ನಲಾಗಿದ್ದು, ಮುಂದಿನ ದಿನಗಳಲ್ಲಿ ಈ ರೀತಿಯ ಚತುರ ಮಾರ್ಗಗಳನ್ನು ಸಹ ಸಹಿಸುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಪ್ರಸ್ತುತ, ವೈಟ್ ಬೋರ್ಡ್‌ನ ನೋಂದಾಯಿತ ಬೈಕ್‌ಗಳನ್ನು ವ್ಯಾಪಾರಿಕ ಉದ್ದೇಶಕ್ಕೆ ಬಳಸುವುದನ್ನು ನಿರ್ಬಂಧಿಸಲಾಗಿದೆ. ಈ ಕುರಿತು ಸರ್ಕಾರದಿಂದ ಯಾವುದೇ ಸ್ಪಷ್ಟ ಮಾರ್ಗಸೂಚಿ ಇಲ್ಲದೆ ಇದ್ದರೂ, ride aggregator ಸಂಸ್ಥೆಗಳು ಸೇವೆ ಮುಂದುವರಿಸುತ್ತಿದ್ದವು. ಇದರ ಬಗ್ಗೆ ಜೂನ್ 15ರಂದು ಹೈಕೋರ್ಟ್ ಸ್ಪಷ್ಟ ಆದೇಶ ನೀಡಿದ ಹಿನ್ನೆಲೆಯಲ್ಲಿ, ವಾಹನಗಳನ್ನು ವಶಪಡಿಸಿಕೊಳ್ಳಲು ಮತ್ತು ದಂಡ ವಿಧಿಸಲು ಇಲಾಖೆ ಮುಂದಾಗಿದ್ದುದು ಇದಕ್ಕೆ ಕಾರಣವಾಗಿದೆ.
ಪ್ರಾದೇಶಿಕವಾಗಿ ದಾಖಲಾಗಿದ ಪ್ರಕರಣಗಳ ವಿವರ:
- ಬೆಂಗಳೂರು ಪಶ್ಚಿಮ – 16 ಪ್ರಕರಣಗಳು
- ಕೆಆರ್ ಪುರ – 13 ಪ್ರಕರಣಗಳು
- ಬೆಂಗಳೂರು ಪೂರ್ವ RTO – 12 ಪ್ರಕರಣಗಳು
Ride aggregator ಸಂಸ್ಥೆಗಳು – ಓಲಾ, ಉಬರ್, ರ್ಯಾಪಿಡೋ – ಈಗಾಗಲೇ ತಮ್ಮ ಟ್ಯಾಕ್ಸಿ ಸೇವೆಗಳನ್ನು ನಿಲ್ಲಿಸಿರುವುದಾಗಿ ಘೋಷಿಸಿದ್ದು, ಪ್ಲಾಟ್‌ಫಾರ್ಮ್‌ಗಳಿಂದ ಬೈಕ್ ಟ್ಯಾಕ್ಸಿ ಆಯ್ಕೆಯನ್ನೂ ತೆಗೆದುಹಾಕಿವೆ. ಆದರೂ, ಪಾರ್ಸೆಲ್ ಸೇವೆಯ ಮುಖಾಂತರ ಟ್ಯಾಕ್ಸಿ ಸೇವೆ ಮುಂದುವರಿಸುತ್ತಿರುವುದರಿಂದ, ಸಾರಿಗೆ ಇಲಾಖೆ ಈ ಹೊಸ ಮಾದರಿಯ ಮೇಲೂ ಕಠಿಣ ನಿಗಾ ವಹಿಸಿದೆ.