
ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಶ್ರೀ HD ಕುಮಾರಸ್ವಾಮಿ ಅವರು ತಮ್ಮ ಕುಟುಂಬ ಸಮೇತ ಒಡಿಶಾದ ಪುರಿ ಶ್ರೀ ಜಗನ್ನಾಥ ದೇವಾಲಯಕ್ಕೆ ತೆರಳಿ ಭಗವಂತನ ದರ್ಶನ ಪಡೆದರು. ಪತ್ನಿ ಅನಿತಾ ಕುಮಾರಸ್ವಾಮಿ ಜೊತೆಯಲ್ಲಿದ್ದರು. ಜಗನ್ನಾಥ ದೇವಾಲಯವು ಹಿಂದೂ ಧರ್ಮದಲ್ಲಿ ವಿಷ್ಣುವಿನ ರೂಪವಾದ ಜಗನ್ನಾಥ ದೇವರಿಗೆ ಸಮರ್ಪಿತವಾದ ಹಿಂದೂ ದೇವಾಲಯವಾಗಿದೆ. ಇದು ಭಾರತದ ಪೂರ್ವ ಕರಾವಳಿಯಲ್ಲಿ ನೆಲೆಗೊಂಡಿರುವ ಒಡಿಶಾ ರಾಜ್ಯದ ಪುರಿಯಲ್ಲಿದೆ. ಜಗನ್ನಾಥ ದೇವಾಲಯವು ಕೇವಲ ತೀರ್ಥಸ್ಥಳವಲ್ಲ.ಇದು ವಿಜ್ಞಾನಕ್ಕೂ ಮೀರಿದ ನಿಗೂಢತೆ, ಭಕ್ತಿಗೆ ಜೀವ ತುಂಬುವ ತಾಣ, ಭಾರತೀಯ ವಾಸ್ತುಶಿಲ್ಪದ ಅಮೂಲ್ಯ ಹೆಮ್ಮೆಯ ಪರಂಪರೆ ಹೊಂದಿದೆ.
ಒಡಿಶಾದಲ್ಲಿರುವ ಪ್ರಸಿದ್ಧ ಪುರಿಯ ಜಗನ್ನಾಥ ದೇವಾಲಯದ ಬೃಹತ್ ಗೋಡೆಗಳನ್ನು ಇಟ್ಟಿಗೆಗಳಿಂದ ಕೆತ್ತಲು ಮೂರು ತಲೆಮಾರುಗಳ ಸಮಯ ಮತ್ತು ಶ್ರಮ ಬೇಕಾಯಿತು. ಈ ದೇವಾಲಯವು “ಚಾರ್ ಧಾಮ್” ಯಾತ್ರೆಯ ಪ್ರಮುಖ ಭಾಗವಾಗಿರುವ 1078ರಲ್ಲಿ ನಿರ್ಮಿಸಲ್ಪಟ್ಟ ಐತಿಹಾಸಿಕ ಅದ್ಭುತ ಕಲಾಕೃತಿ. ಮೂರು ತಲೆಮಾರುಗಳಷ್ಟು ಕಾಲ ಈ ದೇವಾಲಯದ ಬೃಹತ್ ಗೋಡೆಗಳು ಕಲ್ಲಿನಲ್ಲಿ ಕೆತ್ತಲ್ಪಟ್ಟಿವೆ. ವರ್ಷಂಪ್ರತಿ ಲಕ್ಷಾಂತರ ಭಕ್ತರು ಜಗನ್ನಾಥನ ಆಶೀರ್ವಾದಕ್ಕಾಗಿ ಈ ಪವಿತ್ರ ಸ್ಥಳಕ್ಕೆ ಆಗಮಿಸುತ್ತಾರೆ. ರಥಯಾತ್ರೆ, ಸಂಪ್ರದಾಯ, ದೇವಾಲಯದ ಗಾತ್ರ ಇವೆಲ್ಲಕ್ಕಿಂತ ಮಿಗಿಲಾದ ಕುತೂಹಲಕಾರಿ ನಿಗೂಢತೆಗಳು ಇಲ್ಲಿ ಅಡಗಿವೆ. ವಿಜ್ಞಾನಕ್ಕೂ ಉತ್ತರ ಕೆಲವು ನಂಬಲಾಗದ ವಿಚಿತ್ರ ಸಂಗತಿಗಳು ಇಲ್ಲಿವೆ:
ಜಗನ್ನಾಥ ದೇವಾಲಯದ ಗುಮ್ಮಟದ ಮೇಲೆ ಹಾರುವ ಧ್ವಜ ಗಾಳಿಗೆ ವಿರುದ್ಧವಾಗಿ ಹಾರುತ್ತವೆ. ಯಾವ ದಿಕ್ಕಿನಿಂದ ಗಾಳಿ ಬೀಸಿದರೂ, ಧ್ವಜವು ಗಾಳಿಯ ವಿರುದ್ಧ ದಿಕ್ಕಿನಲ್ಲಿ ಹಾರುತ್ತದೆ. ಈ ಅಚ್ಚರಿಯ ಘಟನೆಗೆ ಇಂದಿಗೂ ವೈಜ್ಞಾನಿಕ ಕಾರಣ ಸಿಕ್ಕಿಲ್ಲ.
ಪ್ರತಿದಿನ ಒಬ್ಬ ಅರ್ಚಕ ದೇವಾಲಯದ ಗೋಪುರದ ಮೇಲಿನ ಧ್ವಜವನ್ನು ಬದಲಾಯಿಸಲು 45 ಅಂತಸ್ತಿನಷ್ಟು ಎತ್ತರದ ಗುಮ್ಮಟವನ್ನು ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಹತ್ತುತ್ತಾರೆ. ಈ ಸಂಪ್ರದಾಯವು ಸಾವಿರ ವರ್ಷಗಳ ಹಿಂದಿನಿಂದಲೂ ನಿರಂತರವಾಗಿ ಮುಂದುವರಿದಿದೆ. ಒಂದು ದಿನ ತಡವಾದರೆ, ದೇವಾಲಯವು 18 ವರ್ಷ ಮುಚ್ಚಲ್ಪಡುತ್ತದೆ ಎಂಬ ನಂಬಿಕೆ ಇದೆ!
ಜಗನ್ನಾಥ ದೇವಾಲಯಕ್ಕೆ ದಿನದ ಯಾವ ಹೊತ್ತಿನಲ್ಲೂ, ಯಾವ ದಿಕ್ಕಿನಿಂದ ನೋಡಿದರೂ ನೆರಳು ಕಾಣುವುದಿಲ್ಲ. ವಾಸ್ತುಶಿಲ್ಪದ ಅದ್ಭುತವೇ? ದೇವರ ಕೃಪೆಯೇ? ಇದಕ್ಕೆ ಇಂದಿಗೂ ಖಚಿತ ಉತ್ತರ ಇಲ್ಲ.
ದೇವಾಲಯದ ಶಿಖರದಲ್ಲಿರುವ ಸುದರ್ಶನ ಚಕ್ರ ಎರಡು ನಿಗೂಢ ರಹಸ್ಯಗಳನ್ನು ಹೊಂದಿದೆ. ಒಂದು ಟನ್ ಲೋಹದ ಚಕ್ರವನ್ನು ಯಂತ್ರಗಳಿಲ್ಲದೆ ಹೇಗೆ ಮೇಲೇರಿಸಿದರು? 1000 ವರ್ಷಗಳ ಹಿಂದೆ, ಯಂತ್ರೋಪಕರಣಗಳಿಲ್ಲದ ಕಾಲದಲ್ಲಿ ಇಷ್ಟು ಭಾರವಾದ ಚಕ್ರವನ್ನು ಎತ್ತರಕ್ಕೆ ಹೇಗೆ ತೆಗೆದುಕೊಂಡು ಹೋದರು ಎಂಬುದು ಇಂದಿಗೂ ರಹಸ್ಯ. ಇನ್ನೊಂದು ಎಲ್ಲ ದಿಕ್ಕಿನಿಂದ ನೋಡಿದರೂ ‘ಒಂದೇ ರೀತಿ’ ಕಾಣುತ್ತದೆ. ಯಾವ ದಿಕ್ಕಿಗೆ ತಿರುಗಿದರೂ, ಚಕ್ರವು ನಿಮ್ಮನ್ನು ನೇರವಾಗಿ ನೋಡುವಂತೆ ಕಾಣುತ್ತದೆ. ಇದು ವಾಸ್ತುಶಿಲ್ಪದ ಅದ್ಭುತ ಕೌಶಲ್ಯ.
ಈ ದೇವಾಲಯದ ಮೇಲೆ ಪಕ್ಷಿಗಳು ಕುಳಿತುಕೊಳ್ಳುವುದಿಲ್ಲ, ಹಾರುವುದಿಲ್ಲ. ವಿಮಾನಗಳೂ ಕೂಡ ದೇವಾಲಯದ ಮೇಲಿನಿಂದ ಹಾರಾಡುವುದಿಲ್ಲ. ಈ ಪ್ರದೇಶವು ಅನಾಯಾಸವಾಗಿ “ನೋ-ಫ್ಲೈ-ಜೋನ್” ಆಗಿದೆ!
ಪ್ರತಿದಿನ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ 2,000 ರಿಂದ 2,00,000ರವರೆಗೆ ಇರುತ್ತದೆ. ಆದರೂ, ಪ್ರತಿದಿನ ತಯಾರಾಗುವ ಮಹಾಪ್ರಸಾದ ಎಂದಿಗೂ ಅಗತ್ಯಕ್ಕಿಂತ ಹೆಚ್ಚು ಆಗುವುದಿಲ್ಲ. ಕಡಿಮೆಯೂ ಆಗುವುದಿಲ್ಲ. ಒಂದು ಚಮಚವೂ ವ್ಯರ್ಥವಾಗುವುದಿಲ್ಲ.ಇದು ಪವಾಡವೇ ಸರಿ.
ಸಿಂಘದ್ವಾರದಿಂದ ದೇವಾಲಯದೊಳಗೆ ಕಾಲಿಟ್ಟ ಕ್ಷಣದಲ್ಲಿ, ಸಮೀಪದಲ್ಲಿರುವ ಸಮುದ್ರದ ಅಲೆಗಳ ಶಬ್ದ ಸಂಪೂರ್ಣವಾಗಿ ನಿಂತುಹೋಗುತ್ತದೆ. ಹೊರಗೆ ಬಂದಾಗ ಮಾತ್ರ ಮತ್ತೆ ಕೇಳುತ್ತದೆ. ಸ್ಥಳೀಯರು ಇದು ಸುಭದ್ರಾ ದೇವಿಯ ಆಶೀರ್ವಾದ ಎಂದು ನಂಬುತ್ತಾರೆ.
ಪ್ರಪಂಚದ ಎಲ್ಲೆಡೆ ಹಗಲು ಗಾಳಿ ಸಮುದ್ರದಿಂದ ಭೂಮಿಗೆ ಬರುತ್ತದೆ. ರಾತ್ರಿ ಭೂಮಿಯಿಂದ ಸಮುದ್ರಕ್ಕೆ ಹೋಗುತ್ತದೆ. ಆದರೆ ಪುರಿಯಲ್ಲಿ ಇದಕ್ಕೆ ವಿರುದ್ಧವಾಗಿ ಗಾಳಿ ಬೀಸುತ್ತದೆ. ಇದಕ್ಕೆ ವಿಜ್ಞಾನದಲ್ಲೂ ಉತ್ತರ ಇಲ್ಲ.
9. ಏಳು ಮಡಕೆಗಳಲ್ಲಿ ಬೇಯುವ ಪ್ರಸಾದ ಇನ್ನೊಂದು ವಿಶೇಷ. ಆದರೆ 7 ಮಡಕೆಯಲ್ಲಿ ಮೇಲಿನ ಮಡಕೆಯಲ್ಲಿರುವ ಪ್ರಸಾದ ಮೊದಲೇ ಬೇಯುತ್ತದೆ ದೇವಾಲಯದಲ್ಲಿ ಮಹಾಪ್ರಸಾದ ಬೇಯಿಸುವಾಗ ಏಳು ಮಡಕೆಗಳನ್ನು ಒಂದರ ಮೇಲೊಂದು ಇಡಲಾಗುತ್ತದೆ. ಆಶ್ಚರ್ಯಕರ ಸಂಗತಿ ಏನೆಂದರೆ. ಮೇಲಿನ ಮಡಕೆ ಮೊದಲೇ ಬೇಯುತ್ತದೆ, ನಂತರ ಕೆಳಗಿನ ಮಡಕೆಗಳು!
ದೇವಾಲಯದ ಜಗನ್ನಾಥ, ಬಲಭದ್ರ, ಸುಭದ್ರರ ವಿಗ್ರಹಗಳನ್ನು 14-18 ವರ್ಷಗಳಿಗೊಮ್ಮೆ ಸಮಾಧಿಪಡಿಸಿ, ಹೊಸ ವಿಗ್ರಹಗಳನ್ನು ಬದಲಾಯಿಸಲಾಗುತ್ತದೆ. ಹಳೆಯ ಮರದ ವಿಗ್ರಹಗಳು ಅವಾಗಿಯೇ ವಿಘಟನೆಯಾಗುತ್ತವೆ ಎನ್ನುವುದು ದಂತಕಥೆ.
ಜಗನ್ನಾಥನ ವಿಶ್ವಪ್ರಸಿದ್ಧ ರಥಯಾತ್ರೆ ವೇಳೆ ಮೂರು ದೇವತೆಗಳು,ಮೂರು ದೈತ್ಯ ರಥಗಳು, ಲಕ್ಷಾಂತರ ಭಕ್ತರು ಭಗವಂತನ ದರ್ಶನಕ್ಕಾಗಿ ಜಮಾಯಿಸುತ್ತಾರೆ. ಇಂಗ್ಲಿಷ್‌ನ “Juggernaut” ಪದವೇ ಈ ಮೆರವಣಿಗೆಯಿಂದ ಬಂದದ್ದು! ರಥಯಾತ್ರೆಯ ಸಮಯದಲ್ಲಿ ದೇವತೆಗಳನ್ನು ನದಿಯನ್ನು ದಾಟಿಸಿ ಮೌಸಿಮಾ ದೇವಾಲಯಕ್ಕೆ ಕರೆದೊಯ್ಯುವ ಸಂಪ್ರದಾಯ ಅತ್ಯಂತ ಭವ್ಯ.