ಬೆಂಗಳೂರು ದರೋಡೆ ಕೇಸ್: ಹೊಸಕೋಟೆ ಕೆರೆ ಬಳಿ ಹಣ ಇರಿಸಿ ಎಸ್ಕೇಪ್ ಆಗಿತ್ತು ಗ್ಯಾಂಗ್!

Published : Nov 23, 2025, 11:38 AM IST

ಬೆಂಗಳೂರಿನಲ್ಲಿ ನಡೆದ ದರೋಡೆ ಪ್ರಕರಣದಲ್ಲಿ, ಕದ್ದ ಹಣವನ್ನು ಹೊಸಕೋಟೆಯ ಪಾಳು ಮನೆಯಲ್ಲಿ ಬಚ್ಚಿಡಲಾಗಿತ್ತು. ಸಿಎಂಎಸ್ ಉದ್ಯೋಗಿ ಹಾಗೂ ನಿರುದ್ಯೋಗಿ ಯುವಕರ ಜೊತೆ ಸೇರಿ ಗೋವಿಂದಪುರ ಠಾಣೆಯ ಕಾನ್ಸ್‌ಟೇಬಲ್‌ ಅಣ್ಣಪ್ಪನೇ ಈ ದರೋಡೆಯ ಸೂತ್ರಧಾರಿಯಾಗಿದ್ದನು.

PREV
15
ಹೊಸಕೋಟೆಯಲ್ಲಿತ್ತು ಹಣ

ಬೆಂಗಳೂರಿನಲ್ಲಿ ನಡೆದ ದರೋಡೆ ಪ್ರಕರಣದ ಮಾಹಿತಿಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಹೊಸಕೋಟೆ ಕೆರೆ ಬಳಿಯಲ್ಲಿ ಹಣ ತುಂಬಿಸಲಾಗುವ ಪೆಟ್ಟಿಗೆಗಳನ್ನು ಎಸೆಯಲಾಗಿತ್ತು. ಹಣವನ್ನು ಹೊಸಕೋಟೆ ಬಳಿ ಪಾಳು ಮನೆಯಲ್ಲಿ ಇರಿಸಲಾಗಿತ್ತು. ಅನುಮಾನದ ಮೇಲೆ ಮನೆ ಬಳಿ ಹೋಗಿ ಬಾಗಿಲು ತೆರೆದು ನೋಡಿದಾಗ ಹಣ ಸಿಕ್ಕಿದೆ.

25
ಚಿತ್ತೂರಿನತ್ತ ಪ್ರಯಾಣ

ಕಾರ್ ತೆಗೆದುಕೊಂಡು ಹೊಸಕೋಟೆ ಟೋಲ್‌ಗೆ ಹೋಗದೇ ಕೆರೆ ಬಳಿ ಹೋಗಿದ್ದರು. ಕೆರೆ ಬಳಿ ಹಣ ಬಚ್ಚಿಟ್ಟ ಗ್ಯಾಂಗ್ ಚಿತ್ತೂರು ಕಡೆ ಹೋಗಿತ್ತು. ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಹೊಸಕೋಟೆಯ ಪಾಳು ಮನೆಯಲ್ಲಿ ಹಣ ಇಟ್ಟಿರೋದಾಗಿ ಬಾಯಿ ಬಿಟ್ಟಿದ್ದರು.

35
ಕೆಲಸವಿಲ್ಲದೇ ಕುಳಿತಿದ್ದ ಗ್ಯಾಂಗ್

ದರೋಡೆ ಗುಂಪಿನಲ್ಲಿದ್ದ ಬಹುತೇಕರಿಗೆ ಕೆಲಸವೇ ಇರಲಿಲ್ಲ. ಸಿಎಂಎಸ್ ಉದ್ಯೋಗಿಯಾಗಿದ್ದ ಗೋಪಿಗೆ ತಿಂಗಳಿಗೆ 15 ಸಾವಿರ ರೂಪಾಯಿ ಸಂಬಳ ಸಿಗುತ್ತಿತ್ತು. ದಿನನಿತ್ಯ ಕೋಟಿ ಕೋಟಿ ಹಣ ನೋಡುತ್ತಿದ್ದ ಗೋಪಿಗೆ, ಹೇಗಾದ್ರು ಮಾಡಿ ಒಂದಿಷ್ಟು ಹಣ ಲಪಟಾಯಿಸಬೇಕೆಂಬ ದುರಾಸೆ ಬಂದಿತ್ತು. ಎಟಿಎಂ ಹಣ ಸಾಗಣೆ ವಿಚಾರ ತಿಳಿದಿದ್ದ ಗೋಪಿ ಮತ್ತು ಕ್ಸೇವಿಯರ್ ಜೊತೆಯಾಗಿ ದರೋಡೆಗೆ ಪ್ಲಾನ್ ಮಾಡುವಂತೆ ಕಾನ್ಸ್‌ಟೇಬಲ್‌ ಅಣ್ಣಪ್ಪನಿಗೆ ಹೇಳಿದ್ದರು.

45
ಅಣ್ಣಪ್ಪ ಪವರ್ ಸೆಂಟರ್

ಬರೋಬ್ಬರಿ 15 ದಿನ ತೆಗೆದುಕೊಂಡು ದರೋಡೆಗೆ ಕಾನ್ಸ್‌ಟೇಬಲ್‌ ಅಣ್ಣಪ್ಪ ಪ್ಲಾನ್ ಮಾಡಿದ್ದನು. ಕೆಲಸವಿಲ್ಲದ ಕುಳಿತಿದ್ದ ರವಿ, ರಾಕೇಶ್, ನವೀನ್ ದರೋಡೆ ಮಾಡಲು ಸೇರಿಕೊಂಡಿದ್ದರು. ಕಾನ್ಸ್‌ಟೇಬಲ್ ಅಣ್ಣಪ್ಪ ನಾಯಕ್ ದರೋಡೆ ಗ್ಯಾಂಗ್‌ನ ಪವರ್ ಸೆಂಟರ್ ಆಗಿದ್ದನು. ಪೊಲೀಸ್ ನಮ್ಮ ಜೊತೆಯಲ್ಲಿಯೇ ಇದ್ದಾನೆ ಎಂದು ದರೋಡೆ ಮಾಡಲು ಪ್ಲಾನ್ ಮಾಡಿಕೊಂಡಿದ್ದರು. ಪಕ್ಕಾ ಪ್ಲಾನ್ ಇದೆ, ಸಿಕ್ಕಿ ಬಿಳಲ್ಲ ಅಂತಾ ದರೋಡೆ ಮಾಡಿದ್ದರು.

ಇದನ್ನೂ ಓದಿ: ಬೆಂಗಳೂರು 7 ಕೋಟಿ ದರೋಡೆ: ರಿಕವರಿಯಾದ ಹಣವನ್ನು ಸೂಟ್‌ಕೇಸ್, ಗೋಣಿಚೀಲ, ಬಟ್ಟೆಯಲ್ಲಿ ಕಮಿಷನರ್ ಕಚೇರಿಗೆ ತಂದ ಪೊಲೀಸರು

55
ಹಾವೇರಿ ಜಿಲ್ಲೆ ಮೂಲದವನು ಅಣ್ಣಪ್ಪ

2018ರಲ್ಲಿ ಪೊಲೀಸ್ ಇಲಾಖೆಗೆ ಹಾವೇರಿ ಜಿಲ್ಲೆ ವೀರಾಪುರ ತಾಲೂಕಿನ ಹಳೇ ವೀರಾಪುರ ಗ್ರಾಮದ ಅಣ್ಣಪ್ಪ ನಾಯಕ್‌ ಸೇರಿದ್ದ. ಮೊದಲು ಬಾಣಸವಾಡಿ ಠಾಣೆಯಲ್ಲಿ ಕಾರ್ಯನಿರ್ವಹಿಸಿದ್ದ ಆತ, ಕಳೆದ ಒಂದೂವರೆ ವರ್ಷದಿಂದ ಗೋವಿಂದಪುರ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದನು. ವೃತ್ತಿ ಜೀವನದಲ್ಲಿ ಅಣ್ಣಪ್ಪ ನಾಯಕ್ ಹಿನ್ನೆಲೆ ಉತ್ತಮವಾಗಿರಲಿಲ್ಲ.

ಇದನ್ನೂ ಓದಿ: ರಾಜ್ಯದಲ್ಲಿ ಮತ್ತೊಂದು ದರೋಡೆ, ಕಾರು ಅಡ್ಡಗಟ್ಟಿ 1.2 ಕೆಜಿ ಚಿನ್ನ ದೋಚಿದ ಖದೀಮರು!

Read more Photos on
click me!

Recommended Stories