Puneeth Rajkumar Death: ಅಪ್ಪು ಜೊತೆ ಕೊನೆ ಬಾರಿ ಬಿಗ್‌ಸ್ಕ್ರೀನಲ್ಲಿ ಕಾಣಿಸಿಕೊಂಡ ಯುವರತ್ನ ನಾಯಕಿ ಸಂತಾಪ

Published : Oct 29, 2021, 08:21 PM ISTUpdated : Oct 29, 2021, 08:29 PM IST

ಪುನೀತ್ ರಾಜ್‌ಕುಮಾರ್(Puneeth Rajkumar) ಸಾವಿಗೆ ಸಂತಾಪ ವ್ಯಕ್ತಪಡಿಸಿದ ಸಯೇಶಾ ಹೃದಯಾಘಾತದಿಂದ ಮೃತಪಟ್ಟ ಸ್ಯಾಂಡಲ್‌ವುಡ್ ನಟ(Sandalwood actor)

PREV
16
Puneeth Rajkumar Death: ಅಪ್ಪು ಜೊತೆ ಕೊನೆ ಬಾರಿ ಬಿಗ್‌ಸ್ಕ್ರೀನಲ್ಲಿ ಕಾಣಿಸಿಕೊಂಡ ಯುವರತ್ನ ನಾಯಕಿ ಸಂತಾಪ

ಸ್ಯಾಂಡಲ್‌ವುಡ್ ನಟ ಪುನೀತ್ ರಾಜ್‌ಕುಮಾರ್(Puneeth Rajkumar) ಅವರು ಹೃದಯಾಘಾದಿಂದ (Heart attack)ಮೃತಪಟ್ಟಿದ್ದಾರೆ. ಕನ್ನಡ ಚಿತ್ರರಂಗದ ಎಲ್ಲರ ಅಚ್ಚುಮೆಚ್ಚಿನ ನಟನ ಅಗಲಿಕೆಗೆ ಕರ್ನಾಟಕವೇ ಶೋಕದಲ್ಲಿ ಮುಳುಗಿದೆ. ಅವರ ಜೊತೆ ಕೊನೆಯಬಾರಿ ಬಿಗ್‌ಸ್ಕ್ರೀನ್‌ನಲ್ಲಿ ಕಾಣಿಸಿಕೊಂಡ ನಟಿ ಸಯೇಷಾ ಅವರು ಸಹನಟನ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

26

ಪುನೀತ್ ನನ್ನ ಸ್ನೇಹಿತ, ನನ್ನ ಕುಟುಂಬ, ರತ್ನ. ನಾನು ಅನುಭವಿಸುತ್ತಿರುವ ದುಃಖವನ್ನು ವಿವರಿಸಲು ನನ್ನಲ್ಲಿ ಪದಗಳಿಲ್ಲ. ಇದು ತುಂಬಲಾರದ ನಷ್ಟ. ಅವರ ಪತ್ನಿ ಅಶ್ವಿನಿ ಅಕ್ಕ ಮತ್ತು ಅವರ ಪುತ್ರಿಯರಿಗೆ ನನ್ನ ಸಂತಾಪಗಳು, ಅವರ ಜೀವನವು ಎಂದಿಗೂ ಹಿಂದಿನಂತೆ ಆಗಿರುವುದಿಲ್ಲ ಎಂದು ಬರೆದಿದ್ದಾರೆ.

36

ಇನ್‌ಸ್ಟಾಗ್ರಾಂ ಪೋಸ್ಟ್ ಮಾಡಿದ ನಟಿ ನನ್ನ ಹೃದಯ ಅವರ ಕುಟುಂಬಕ್ಕೆ, ಅವರ ಲಕ್ಷಾಂತರ ಅಭಿಮಾನಿಗಳಿಗೆ ಮತ್ತು ಸ್ನೇಹಿತರೊಂದಿಗಿದೆ! #RIP ಸರ್! ನಿಮ್ಮ ಜೊತೆ ತೆರೆ ಹಂಚಿಕೊಂಡಿದ್ದು ನನಗೆ ಗೌರವವಾಗಿದೆ ಎಂದಿದ್ದಾರೆ.

46

ಬಿಗ್‌ಸ್ಕ್ರೀನ್‌ನಲ್ಲಿ ಕೊನೆಯದಾಗಿ ಪುನೀತ್ ರಾಜ್ ಕುಮಾರ್ ಅವರು ಯುವರತ್ನ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಬಹುಭಾಷಾ ನಟಿ ಸಯೇಶಾ(Sayyeshaa) ಪುನೀತ್ ಜೊತೆ ನಟಿಸಿದ್ದರು.

56

ಸ್ಯಾಂಡಲ್‌ವುಡ್(Sandalwood) ಸ್ಟಾರ್ ನಟ ಪುನೀತ್ ರಾಜ್ ಕುಮಾರ್ ಅವರು ಹೃದಯಾಘಾತದಿಂದ (Heart attack) ನಿಧನರಾಗಿದ್ದಾರೆ(Death). 46 ವರ್ಷದ ನಟ ತಮ್ಮ ಮನೆಯಲ್ಲಿ ಜಿಮ್(Gym) ಮಾಡುತ್ತಿದ್ದ ವೇಳೆ ಕುಸಿದು ಬಿದ್ದಿದ್ದರು. ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ(Vikram Hospital) ದಾಖಲಿಸಿ ಚಿಕಿತ್ಸೆ(Treatment) ನೀಡಲಾಗುತ್ತಿತ್ತು.

66

ಮನೆಯಲ್ಲಿಯೇ ನಟ ಜಿಮ್ ಮಾಡುತ್ತಿದ್ದ ವೇಳೆ ಹೃದಯಾಘಾತವಾಗಿ ಕುಸಿದುಬಿದ್ದಿದ್ದಾರೆ. ನಟನನ್ನು ಆಪ್ತರು ಬೆಂಗಳೂರಿನ(bengaluru) ವಿಕ್ರಂ ಆಸ್ಪತ್ರೆಗೆ ದಾಖಲಿಸಿದ್ದರು. ನಟ ಶಿವರಾಜ್ ಕುಮಾರ್ ಅವರು ಭಜರಂಗಿ 2(Bhajarangi 2) ಸಿನಿಮಾ ರಿಲೀಸ್ ಹಿನ್ನೆಲೆ ಥಿಯೇಟರ್‌ನಲ್ಲಿದ್ದರು. 

Read more Photos on
click me!

Recommended Stories