Puneeth Rajkumar Death: ಮಂತ್ರಾಲಯ ಮಠಕ್ಕೂ ಅಪ್ಪುಗೂ ಅವಿನಾಭಾವ ಸಂಬಂಧ

Suvarna News   | Asianet News
Published : Oct 29, 2021, 07:05 PM ISTUpdated : Oct 29, 2021, 07:25 PM IST

ತಂದೆ ರಾಜ್ ಕುಮಾರ್ ಸಹ ಗುರು ರಾಘವೇಂದ್ರ ಸ್ವಾಮಿಗಳ ಪರಮ ಭಕ್ತರಾಗಿದ್ದರು. ತಂದೆಯನ್ನೇ ಅನುಕರಣೆ ಮಾಡುತ್ತಿದ್ದ ಅಪ್ಪು, ಮಂತ್ರಾಲಯ ಮಠಕ್ಕೆ ಭೇಟಿ ಕೊಟ್ಟು ರಾಘವೇಂದ್ರ ಸ್ವಾಮಿಗಳ  ಆಶೀರ್ವಾದ ಪಡೆದ ನಂತರ ಮುಂದಿನ ಕೆಲಸ ಮಾಡುತ್ತಿದ್ದರು.

PREV
17
Puneeth Rajkumar Death: ಮಂತ್ರಾಲಯ ಮಠಕ್ಕೂ ಅಪ್ಪುಗೂ ಅವಿನಾಭಾವ ಸಂಬಂಧ

ರಾಯರ ಮಠಕ್ಕೂ ಪುನೀತ್ ರಾಜಕುಮಾರ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ಕೊನೆಯದಾಗಿ ಪುನೀತ್ ರಾಜಕುಮಾರ ಏಪ್ರಿಲ್ 5 , 2021 ರಂದು ಯುವರತ್ನ ಸಿನೆಮಾ ಯಶಸ್ಸು ಕಾಣುತ್ತಿದ್ದ ಹಿನ್ನೆಲೆ ಚಿತ್ರತಂಡದೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದಿದ್ದರು.

27

ಅದಕ್ಕೂ ಮುನ್ನ ಮಾರ್ಚ್ 2 , 2020 ರಂದು  ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ವರ್ಧಂತಿ ಉತ್ಸವ ಹಿನ್ನೆಲೆ  ಶ್ರೀ ಮಠಕ್ಕೆ ಆಗಮಿಸಿದ್ದ ಪುನೀತ್ ಭಾವುಕರಾಗಿ ಮಾತನಾಡಿದ್ದರು. ತಮ್ಮ ನೆನಪುಗಳನ್ನ ಬಿಚ್ಚಿಟ್ಟಿದ್ದರು. 

37

ವೇದಿಕೆ ಮೇಲೆ ರಾಯರ ಹಾಡು ಹೇಳಿದ ಪುನೀತ್ ರಾಯರಿಗೆ ತಮ್ಮ ಭಕ್ತಿ ಸಮರ್ಪಿಸಿದ್ದರು. ಗುರು ವೈಭವೋತ್ಸವದ ಕೊನೆಯ ದಿನದ ಸಮಾರಂಭದಲ್ಲಿ ಪುನೀತ್ ರಾಜಕುಮಾರ್‌ರನ್ನ ಸನ್ಮಾನಿಸಲಾಗಿತ್ತು. ಆರಾಧನಾ ವೇಳೆ ಮಂತ್ರಾಲಯಕ್ಕೆ ಆಗಮಿಸಿ ಮೂರು ಹಾಡುಗಳನ್ನ ಹಾಡುವುದಾಗಿ ಪುನೀತ್ ಹೇಳಿದ್ದರು. 

47

ಆದರೆ ಕೊರೊನಾ ಲಾಕ್ ಡೌನ್ ಕಾರಣಕ್ಕೆ ಆರಾಧನೆ ಕಾರ್ಯಕ್ರಮವನ್ನ ಸರಳವಾಗಿ ಆಚರಿಸಿದ್ದರಿಂದ ಪುನೀತ್ ಮಂತ್ರಾಲಯಕ್ಕೆ ಬಂದಿರಲಿಲ್ಲ. ರಾಯಚೂರು ಜಿಲ್ಲೆಯಲ್ಲೂ ಸಾವಿರಾರು ಅಭಿಮಾನಿಗಳನ್ನ ಹೊಂದಿರುವ ಪುನೀತ್ ಈಗ ನೆನಪು ಮಾತ್ರ.

57

ಧರ್ಮಸ್ಥಳಕ್ಕೆ ಭೇಟಿ ನೀಡಿದಾಗ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಅಪ್ಪು. ತಾನೂ ಅಪ್ಪನಂತೆ ಪರಿಪೂರ್ಣ ನಟನಾಗಬೇಕೆಂಬ ಆಸೆ ಪುನೀತ್​ ರಾಜ್​ಕುಮಾರ್​ ಅವರಿಗಿತ್ತು. ಮೊದಲಿನಿಂದಲೂ ಡ್ಯಾನ್ಸ್​, ಫೈಟ್​ನಲ್ಲಿ ತೊಡಗಿಸಿಕೊಂಡಿದ್ದರು.

67

ಹುಬ್ಬಳ್ಳಿ ಸಿದ್ದಾರೂಢ ಮಠಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ತಮ್ಮ ಪತ್ನಿಯೊಂದಿಗೆ ಗುರುಗಳ  ಆಶಿರ್ವಾದ ಪಡೆದರು. ಮತ್ತು ಪುನೀತ್ ಬಾಲಕನಿದ್ದಾಗಿನಿಂದಲೂ ಫಿಟ್​ನೆಸ್​ ಕಾಪಾಡಿಕೊಂಡು ಬಂದವರು. ಚಿಕ್ಕ ವಯಸ್ಸಿನಿಂದಲೇ ದೈಹಿಕ ಚುಟುವಟಿಗಳನ್ನ ಮೈಗೂಡಿಸಿಕೊಂಡಿದ್ದರು.

77

2 ವರ್ಷಗಳ ಹಿಂದೆ ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಿದ್ದ ಪುನಿತ್ ರಾಜ್ ಕುಮಾರ್ ಮಠದ ಸುವರ್ಣ ಗೋಪುರಕ್ಕೆ ದೇಣಿಗೆ ನೀಡಿದ್ದರು. ಇನ್ನು ಅಭಿಮಾನಿಗಳ ನೆಚ್ಚಿನ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕೇವಲ ತೆರೆ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ನಾಯಕ.

Read more Photos on
click me!

Recommended Stories