ಕಿಟಕಿಯಿಂದ ಇಣುಕಿ ಕಿರುನೋಟ ಬೀರಿದ 'ಯುವ'ರಾಣಿ ಸಿರಿ: ಲೆಹೆಂಗಾದಲ್ಲಿ ಸಪ್ತಮಿ ಗೌಡ ಮಿಂಚಿಂಗ್‌!

First Published | Mar 23, 2024, 1:05 PM IST

ಸ್ಯಾಂಡಲ್‌ವುಡ್‌ ಕಾಂತಾರ ಖ್ಯಾತಿಯ ನಟಿ ಸಪ್ತಮಿ ಗೌಡ  ಕೊಂಚ ಡಿಫರಂಟ್ ಆಗಿಯೇ ಕಾಣಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇದೀಗ ಹಂಚಿಕೊಂಡಿರೋ ಕೆಲವು ಫೋಟೋಗಳು ಆ ಒಂದು ಭಾವನೆ ಮೂಡಿಸುತ್ತಿವೆ. 

ಕಾಂತಾರ ಬೆಡಗಿ ಸಪ್ತಮಿ ಗೌಡ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ, ಇದೀಗ ಹೊಸದಾಗಿ ಸಾಂಪ್ರದಾಯಿಕ ಉಡುಗೆಯಲ್ಲಿ ಫೋಟೊಶೂಟ್‌ ಮಾಡಿಸಿದ್ದಾರೆ. ಸದ್ಯ ನಟಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಸ್ಯಾಂಡಲ್‌ವುಡ್‌ ಬೆಡಗಿ ನಟಿ ಸಪ್ತಮಿ ಗೌಡ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ಚೆಂದದ ಫೋಟೋಶೂಟ್‌ ಮಾಡಿಸಿ ಅಭಿಮಾನಿಗಳ ಕಣ್ಮನ ಸೆಳೆದಿದ್ದಾರೆ. ಡಿಸೈನರ್​​ ಲೆಹಂಗಾ ತೊಟ್ಟ ಸಪ್ತಮಿ ಗೌಡ ಪಿಂಕ್​ ದಾವಣಿ ಧರಿಸಿ ಅಪ್ಸರೆಯಂತೆ ಕಾಣಿಸಿಕೊಂಡಿದ್ದಾರೆ.  

Latest Videos


ಲೆಹೆಂಗಾ ಧರಿಸಿದ ಲೀಲಾ ಚೆಂದದ ಫೋಟೋಶೂಟ್ ಮಾಡಿಸಿದ್ದಾರೆ. ವಿಡಿಯೋ ಹಾಗೂ ಫೋಟೋಗಳನ್ನು ತಮ್ಮ ಇನ್ಸ್ಟಾದಲ್ಲಿ ಶೇರ್ ಮಾಡಿದ್ದಾರೆ. ನಟಿ ತನ್ನ ವಿಡಿಯೋಗೆ ಯುವ ಸಿನಿಮಾ ಹಾಡಿನ ಟಚ್ ಕೊಟ್ಟು ಎಡಿಟ್ ಮಾಡಿದ್ದಾರೆ.

ನಟಿ ಸಪ್ತಮಿ ಗೌಡ ತಮ್ಮ ಡ್ರೆಸ್‌ಗೆ ತಕ್ಕಹಾಗೆ ಗೋಲ್ಡ್‌ ಪ್ಲೇಟೆಡ್‌ ಆಭರಣವನ್ನು ಹಾಕಿಕೊಂಡು, ತುಟಿಗೆ ಕೆಂಪು ಬಣ್ಣದ ಲಿಪ್ಸ್‌ಟಿಕ್‌  ಹಚ್ಚಿಕೊಂಡು ಸಿಂಪಲ್‌ ಮೇಕಪ್‌ನಲ್ಲಿ ಅಂದವಾಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

ಸಪ್ತಮಿ ಗೌಡ ಸೋಶಿಯಲ್‌ ಮಿಡಿಯಾದಲ್ಲಿ ಪೋಸ್ಟ್‌ ಹಂಚಿಕೊಳ್ಳುವಿದರ ಜೊತೆಗೆ ಕ್ಯಾಪ್ಶನ್‌ನಲ್ಲಿ ʻಸಿರಿʼ ಎಂದು ಯುವ ಚಿತ್ರದ ಪಾತ್ರದ ಹೆಸರು ರಿವೀಲ್‌ ಮಾಡುವುದರ ಜೊತೆಗೆ ಅದೇ ಸಿನಿಮಾದ ಕವಿತೆ ಕವಿತೆ ಹಾಡಿನ ಟಚ್‌ ನೀಡಿದ್ದಾರೆ.  

ನಟಿ ಸಪ್ತಮಿಯ ಫೋಟೋಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ಲೈಕ್ಸ್‌ ಬಂದಿದ್ದು ಹಾಗೆಯೇ ಅಭಿಮಾನಿಗಳು ಯುವರಾಜನ ಮನದರಸಿ, ನಿಜವಾದ ದಂತದ ಬೊಂಬೆ ನೀನೆ ಸೇರಿದಂತೆ ವಿವಿಧ ರೀತಿ ಕಾಮೆಂಟ್‌ಗಳನ್ನು ಮಾಡಿದ್ದಾರೆ.

ಸಪ್ತಮಿಯ ಸಾಂಪ್ರದಾಯಿಕ ಉಡುಗೆಯಲ್ಲಿರುವ ಫೋಟೋಗಳಿಗೆ ಸಾಹಿತ್ಯವನ್ನೇ ಓದಿ ಕವಿ ಆಗಬೇಕು ಎಂದೇನಿಲ್ಲ ಮಾತನಾಡುವ ನಿನ್ನ ಕಣ್ಣುಗಳೇ ಸಾಕು ಕವಿಯಾಗಲು ಎಂದು ಕಮೆಂಟ್‌ ಮಾಡಿದರೇ ಮತ್ತೊಬ್ಬರು ಬ್ಯೂಟಿಫುಲ್‌ ಎಂದು ಬರೆದಿದ್ದಾರೆ.

ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ನಟಿ ಸಪ್ತಮಿ ಗೌಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ರು. ನಟ ಡಾಲಿ ಧನಂಜಯ್ ಜೊತೆ ತೆರೆ ಹಂಚಿಕೊಂಡಿದ್ದರು. 2ನೇ ಸಿನಿಮಾ ಕಾಂತಾರದಲ್ಲಿ ನಟ ರಿಷಬ್ ಶೆಟ್ಟಿಗೆ ಜೋಡಿಯಾಗಿ ನಟಿಸಿದ ಬಳಿಕ ಸಪ್ತಮಿ ಗೌಡ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ.

ಸಪ್ತಮಿ ಗೌಡ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಇದೀಗ ಈ ನಟಿ ಅಭಿನಯಿಸಿರುವ ಯುವ ಸಿನಿಮಾ ಇದೇ ಮಾರ್ಚ್‌ 29ಕ್ಕೆ ಬೆಳ್ಳತೆರೆಯ ಮೇಲೆ ಅಬ್ಬರಿಸಲಿದೆ. ಈಗಾಗಲೇ ಚಿತ್ರದ ಟ್ರೈಲರ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.

click me!