ಕಾರು ಬಿಟ್ಟರೆ ನನ್ನ ಸಂಪಾದನೆ ಅಪ್ಪಂಗೆ ಕೊಟ್ಟಿದ್ದೀನಿ, ಈಗ ಹೆಂಡ್ತಿ ದುಡಿಯುತ್ತಿದ್ದಾಳೆ: ಲೂಸ್ ಮಾದ ಯೋಗಿ

Published : Mar 22, 2024, 02:46 PM IST

 ಸಿಂಪಲ್ ಆಗಿ ಬದುಕಿ ಸಿಂಪಲ್ ಕಥೆಗಳನ್ನು ಆಯ್ಕೆ ಮಾಡಿಕೊಂಡು ತುಂಬಾನೇ ಸಿಂಪಲ್ ರೀತಿಯಲ್ಲಿ ಜನರ ಗಮನ ಸೆಳೆದಿರುವ ಯೋಗಿ.....

PREV
18
ಕಾರು ಬಿಟ್ಟರೆ ನನ್ನ ಸಂಪಾದನೆ ಅಪ್ಪಂಗೆ ಕೊಟ್ಟಿದ್ದೀನಿ, ಈಗ ಹೆಂಡ್ತಿ ದುಡಿಯುತ್ತಿದ್ದಾಳೆ: ಲೂಸ್ ಮಾದ ಯೋಗಿ

ಕನ್ನಡ ಚಿತ್ರರಂಗದ ಜಿಂಕೆ ಮರಿ ಲೂಸ್ ಮಾದ ಯೋಗೇಶ್ ತಮ್ಮ ಜೀವನದಲ್ಲಿ ಯಾವ ರೀತಿ ಕಥೆ ಆಯ್ಕೆ ಮಾಡುತ್ತಾರೆ. ಯಾವುದರಿಂದ ಎಷ್ಟು ಸಂಭಾವನೆ ಬಂದಿದೆ ಎಂದು ಹೇಳಿಕೊಂಡಿದ್ದಾರೆ. 

28

 32ನೇ ವಯಸ್ಸಿಗೆ ನಾನು 35 ಸಿನಿಮಾ ಮಾಡಿರುವೆ ಚಿಕ್ಕ ವಯಸ್ಸಿಗೆ ಅತಿ ಹೆಚ್ಚು ಸಿನಿಮಾ ಮಾಡಿರುವೆ. ಒಂದೊಂದು ಸಲ ಒಂದು ವರ್ಷದಲ್ಲಿ 5 ಸಿನಿಮಾ ಮಾಡಿರುವೆ. ಕಳೆದ 5-6 ವರ್ಷದಲ್ಲಿ 8 ರಿಂದ 9 ಸಿನಿಮಾ ಮಾಡಿರುವೆ. 

38

ನನ್ನ ಮೊದಲ ಚಿತ್ರ ನಂದ ಲವ್ಸ್‌ ನಂದಿತಾಗೆ 5 ಲಕ್ಷ ಸಂಭಾವನೆ ಪಡೆದಿರುವೆ ಅದಾದ ಮೇಲೆ ಅಂಬಾರಿ ಚಿತ್ರಕ್ಕೆ 25- 30 ಲಕ್ಷ ಹಾಗೆ ಹೆಚ್ಚಾಗಿದೆ ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಹೇಳಿದ್ದರು. 

48

ಇವತ್ತಿನವರೆಗೂ ಏನೇ ಸಂಪಾದನೆ ಮಾಡಿದರೂ ಅದನ್ನು ತಂದೆ ಕೈಗೆ ಕೊಟ್ಟಿರುವೆ ನನಗೆ ಅಂತ ಒಂದು ಕಾರು ಬಿಟ್ಟರೆ ಏನೂ ಮಾಡಿಕೊಂಡಿಲ್ಲ ಎಂದಿದ್ದಾರೆ ಯೋಗೇಶ್.

58

 ಮನೆಗೆ ತುಂಬಾ ಸಪೋರ್ಟಿವ್ ಆಗಿರುವೆ ಈಗ ಬೇರೆ ಕಡೆ ಬಂಡವಾಳ ಹಾಕುತ್ತಿರುವೆ.ಎಂದೂ ನನಗೆ ಇಂಡಸ್ಟ್ರಿ ಬೇಡ ಅನಿಸಿಲ್ಲ ಆದರೆ ಕೆಲವೊಮ್ಮೆ ಬೇಸರವಾಗುತ್ತಿತ್ತು. ನನ್ನ ಮೇಲೆ ನನಗೆ ಬೇಸರವಾಗುತ್ತದೆ ಹೊರತು ಬೇರೆ ಅವರ ಮೇಲೆ ಬೇಸರ ಅನಿಸಿಲ್ಲ.

68

ಇಂಡಸ್ಟ್ರಿ ಬಿಟ್ಟು ಹೋಗುವ ಮನಸ್ಸುಇಲ್ಲ. ಮನುಷ್ಯ ನಾನು ಕೆಲವೊಮ್ಮೆ ತಪ್ಪು ಮಾಡಿದ್ದೀನಿ ಮಾಡಬಾರದು ಅನಿಸಿತ್ತು ಆದರೆ ಜನರು ಹೇಗೆ ಮಾತನಾಡುತ್ತಾರೆ ಅಂದ್ರೆ ಬಿಡೋ ಅವನು ಪ್ರೊಡ್ಯೂಸರ್ ಮಗ ಅವರಪ್ಪನೇ ಸಿನಿಮಾ ಮಾಡ್ತಾರೆ ನಮ್ಮ ಮನೆಯಲ್ಲಿ ಏನಾಗುತ್ತಿದೆ ಎಂದು ನಮಗೆ ಮಾತ್ರ ಗೊತ್ತಿದೆ.

78

ನನ್ನ ಕುಟುಂಬಗ್ಕೋರ ಮಾಡಿದ ಅನ್ನೋದು ಬೇಜಾರಿಂದ ಖುಷಿಯಾಗುತ್ತದೆ. ಮಗು ಆದ್ಮೇಲೆ ನನ್ನ ಹೆಂಡತಿ ಕೆಲಸ ಬಿಟ್ಟಿದ್ದರು ಈಗ ಕೆಲಸ ಮತ್ತೆ ಶುರು ಮಾಡಿದ್ದಾರೆ. ಮನೆ ನಡೆಸುವುದಕ್ಕೆ ನನ್ನ ಕೊಡುಗೆ ಇರಬೇಕು ಅನ್ನೋ ಅಸೆ ಆಕೆಗೆ ಇದೆ ಅದಿಕ್ಕೆ ಕೆಲಸ ಮಾಡುತ್ತಾಳೆ. 

88

ನನ್ನ ಖರ್ಚಿಗೆ ನಾನು ಮಾಡಿಕೊಳ್ಳಬೇಕು ಅನ್ನೋದು ಅವಳ ಮಾತು.'ಕಾಂಟ್ರವರ್ಸಿ ಬಂದಾಗ ನನಗೆ ಬೇಸರ ಆಗಲ್ಲ ಸೆಲೆಬ್ರಿಟಿ ಅಂದ್ಮೇಲೆ ನನ್ನ ಬೆನ್ನಲೆ ಇರುತ್ತದೆ ಯಾವುದು ತೆಲೆಗೆ ಹಾಕಿಕೊಳ್ಳಬಾರದು. ನಿಜ ಏನೆಂದು ನನಗೆ ಗೊತ್ತು..

Read more Photos on
click me!

Recommended Stories