ಅಮಿತಾಬ್ ಬಚ್ಚನ್ ಜೊತೆ ಸ್ಟೈಲ್ ಆಗಿ ಪೋಸ್ ಕೊಡುತ್ತಿರೋ ಹುಡುಗರು ಯಾರು ಗೊತ್ತಾಯ್ತ?

ಬಾಲಿವುಡ್ ನ ಹಿರಿಯ ನಟ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಜೊತೆ ಸ್ಟೈಲಿಶ್ ಆಗಿ ನಿಂತು ಪೋಸ್ ಕೊಡುತ್ತಿರುವ ಈ ನಟರು ಯಾರು ಗೆಸ್ ಮಾಡ ಬಲ್ಲಿರಾ? ಖಂಡಿತಾ ಗೆಸ್ ಮಾಡಿಯೇ ಮಾಡ್ತೀರಿ. 
 

Young Shivarajkumar and Raghavendra rajkumar poses with Amitabh Bachchan pav

ಬಾಲಿವುಡ್ ನ ಶೇನ್ ಶಾ, ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ (Amitabh Bachchan) ಅವರ ತುಂಬಾನೆ ಹಳೆ ಫೋಟೊ ಇದು. ಈ ಫೋಟೊದಲ್ಲಿ ಬಿಗ್ ಬಿ ಜೊತೆಗೆ ಇರುವ ಈ ಇಬ್ಬರು ಹುಡುಗರು ಯಾರು ಅನ್ನೋದು ಗೊತ್ತಾಗಿದ್ಯಾ? ಖಂಡಿತಾ ಗೊತ್ತಾಗಿರುತ್ತೆ ಅಲ್ವಾ? ನಮ್ಮ ಕನ್ನಡದ ಮೇರು ನಟರು ಇವರು. 
 

ಹೌದು, ಅಮಿತಾಬ್ ಬಚ್ಚನ್ ಜೊತೆ ಸ್ಟೈಲಿಶ್ ಆಗಿ ಜೀನ್ಸ್ ಶರ್ಟ್ ಧರಿಸಿ ನಿಂತಿರುವ ಇವರು ಡಾ. ಶಿವರಾಜ್ ಕುಮಾರ್ (Shivaraj Kumar) ಹಾಗೂ ರಾಘವೇಂದ್ರ ರಾಜ್ ಕುಮಾರ್. ಈ ಫೋಟೊ ಸುಮಾರು 43 ವರ್ಷಗಳ ಹಿಂದೆ ತೆಗೆದಿರೋದು. ಆಗಷ್ಟೇ ಯೌವನಕ್ಕೆ ಕಾಲಿಟ್ಟಿರುವ ಶಿವಣ್ಣ ಮತ್ತು ರಾಘಣ್ಣ, ಅಮಿತಾಬ್ ಬಚ್ಚನ್ ಜೊತೆ ಪೋಸ್ ಕೊಡುತ್ತಿದ್ದಾರೆ. 
 


ಈ ಫೋಟೊವನ್ನು ಸತ್ತೆ ಪೆ ಸತ್ತಾ ಸೆಟ್‌ನಲ್ಲಿ  1982ರಲ್ಲಿ ತೆಗೆಯಲಾಗಿದ್ದು, ರಾಜ್ ಕುಮಾರ್ ಅವರ ಇಬ್ಬರ ಮಕ್ಕಳು, ಆ ಕಾಲದಲ್ಲಿ ಹೀರೋ ಆಗಿ ಮೆರೆಯುತ್ತಿದ್ದ ಲೆಜೆಂಡರಿ ನಟ ಅಮಿತಾಬ್ ಬಚ್ಚನ್ ಅವರನ್ನ ಸಿನಿಮಾ ಸೆಟ್  (cinema set) ನಲ್ಲಿ ಭೇಟಿಯಾಗಿ ತೆಗೆಸಿಕೊಂಡಿರುವ ಫೋಟೊ ಇದಾಗಿದೆ. ಸದ್ಯ ಈ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 
 

ಸತ್ತೆ ಪೆ ಸತ್ತಾ (1982) ಚಿತ್ರದ ಚಿತ್ರೀಕರಣದ ಸಮಯದಲ್ಲಿ ಅಮಿತಾಬ್ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದರು, ಈ ಚಿತ್ರದಲ್ಲಿ ಅವರು ದ್ವಿಪಾತ್ರದಲ್ಲಿ ನಟಿಸಿದ್ದಾರೆ - ಒಂದು ಒರಟು ಮತ್ತು ಕೆಟ್ಟವನಾಗಿರುವ ಹಿರಿಯ ಸಹೋದರನಾಗಿ ಹಾಗೂ ಕ್ರೂರವಾಗಿ ಕಾಣುವ ಖಳನಾಯಕನಾಗಿ ಅಮಿತಾಬ್ ಬಚ್ಚನ್ ನಟಿಸಿದ್ದರು.
 

ಇದೆಲ್ಲಾ ಆಗಿ ಬರೋಬ್ಬರಿ 43 ವರ್ಷಗಳೇ ಕಳೆದಿವೆ. ಹಲವಾರು ಸಮಯದಿಂದ ಅಮಿತಾಬ್ ಬಚ್ಚನ್ ಹಾಗೂ ಶಿವರಾಜ್ ಕುಮಾರ್ ಕನ್ನಡ ಸಿನಿಮಾದಲ್ಲಿ ಜೊತೆಯಾಗಿ ನಟಿಸಲಿದ್ದಾರೆ ಎನ್ನುವ ಸುದ್ದಿ ಕೂಡ ಕೇಳಿ ಬಂದಿತ್ತು. ನಾಗತಿಹಳ್ಳಿ ಚಂದ್ರಶೇಖರ್ (Nagathihalli Chandrashekhar) ನಿರ್ದೇಶನದ ಸಿನಿಮಾದಲ್ಲಿ ಇವರಿಬ್ಬರು ಜೊತೆಯಾಗಿ ನಟಿಸ್ತಾರೆ ಎನ್ನಲಾಗಿತ್ತು ಆದರೆ ಅದು ಸಾಧ್ಯ ಆಗಲಿಲ್ಲ. ಕಳೆದ ವರ್ಷ ಹಿಂದಿಯ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲೂ ಶಿವಣ್ಣ ಭಾಗವಹಿಸೋದಾಗಿ ಹೇಳಲಾಗಿತ್ತು,. ಅದೂ ಆಗಿರಲಿಲ್ಲ. 
 

ಸಿನಿಮಾಗಳಲ್ಲಿ ಅಮಿತಾಬ್ ಬಚ್ಚನ್ ಜೊತೆ ಶಿವಣ್ಣ ನಟಿಸದೇ ಇದ್ದರೂ, ಇಬ್ಬರು ಜೊತೆಯಾಗಿ ಆಭರಣವೊಂದರಲ್ಲಿ ಜಾಹೀರಾತಿನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಈ ಜಾಹೀರಾತಿನಲ್ಲಿ ಬಚ್ಚನ್, ಶಿವಣ್ಣ ಜೊತೆಗೆ, ತೆಲುಗಿನ ಸ್ಟಾರ್ ನಟ ನಾಗರ್ಜುನ್ ಹಾಗೂ ತಮಿಳಿನ ನಟ ಶಿವಾಜಿ ಕೂಡ ನಟಿಸಿದ್ದರು. 
 

Latest Videos

vuukle one pixel image
click me!