Toxic Movie BTS: ಟಾಕ್ಸಿಕ್ ಚಿತ್ರದ ಮೇಕಿಂಗ್ ವಿಡಿಯೋ ವೈರಲ್​- ಬಯಲಾಯ್ತು ತೆರೆಮರೆಯ ಸತ್ಯ

Published : May 31, 2026, 04:08 PM IST

ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಮೇಕಿಂಗ್ ವಿಡಿಯೋ ವೈರಲ್ ಆಗಿದ್ದು, ವಿವಾದಿತ ಕಾರಿನ ದೃಶ್ಯದ ಚಿತ್ರೀಕರಣದ ಗುಟ್ಟನ್ನು ಬಹಿರಂಗಪಡಿಸಿದೆ. ಈ ಚಿತ್ರದಲ್ಲಿ ಯಶ್ ದ್ವಿಪಾತ್ರದಲ್ಲಿ ನಟಿಸುತ್ತಿರುವ ಸುಳಿವು ಸಿಕ್ಕಿದ್ದು, ನಯನತಾರಾ, ಕಿಯಾರಾ ಅಡ್ವಾಣಿ ಸೇರಿದಂತೆ ಬಹುದೊಡ್ಡ ತಾರಾಗಣವಿದೆ.

PREV
16
ಟಾಕ್ಸಿಕ್​ ಹಲ್​ಚಲ್​

ಯಶ್​ ನಟನೆಯ ಟಾಕ್ಸಿಸ್​ ಚಿತ್ರ (Yash's Toxic Movie) ಇದಾಗಲೇ ಸಾಕಷ್ಟು ಹಲ್​ಚಲ್​ ಸೃಷ್ಟಿಸಿದ್ದು ಇದರ ಬಿಡುಗಡೆಗಾಗಿ ಸಿನಿ ಪ್ರಿಯರು ಕಾದು ಕುಳಿತಿದ್ದಾರೆ. ಆದರೆ ಅವರಿಗೆ ಭಾರಿ ನಿರಾಸೆ ಎನ್ನುವಂತೆ ಪದೇ ಪದೇ ಚಿತ್ರವನ್ನು ಪದೇ ಮುಂದೂಡಲಾಗುತ್ತಿದೆ. ಸದ್ಯ ಜೂನ್​ 4ರಂದು ಇದು ತೆರೆಯ ಮೇಲೆ ಅಬ್ಬರಿಸುವ ನಿರೀಕ್ಷೆಯಿದೆ.

26
ಕಾರಿನ ದೃಶ್ಯ

ಇದಾಗಲೇ, ಈ ಚಿತ್ರದ ಟೀಸರ್​ ಬಿಡುಗಡೆಯಾದಾಗಿನಿಂದಲೂ ಅದರ ಕಾರಿನ ದೃಶ್ಯ ಹಲ್​ಚಲ್​ ಸೃಷ್ಟಿಸುತ್ತಲೇ ಇದೆ. ಇದರ ಟೀಸರ್​ನಲ್ಲಿ ಕಾರೊಳಗಿನ ದೃಶ್ಯಕ್ಕೆ ಸಿಕ್ಕಾಪಟ್ಟೆ ಟೀಕೆಗಳೂ ಕೇಳಿಬರುತ್ತಿವೆ. ಟೀಸರ್​​ ಮತ್ತು ಪೋಸ್ಟರ್​​ ಮೂಲಕ ಇದಾಗಲೇ ಚಿತ್ರ ಹವಾ ಸೃಷ್ಟಿಸಿದೆ. ಇದರಲ್ಲಿ ಯಶ್​ ಅವರು ಗಡ್ಡದ ಶೇವಿಂಗ್​ ಮಾಡುತ್ತಿರುವುದನ್ನು ನೋಡಬಹುದಾಗಿದೆ.

36
ಡಬಲ್​ ರೋಲ್​

ಅಷ್ಟಕ್ಕೂ ಈ ಸಿನಿಮಾದಲ್ಲಿ ಯಶ್​ ಅವರದ್ದು ಡಬಲ್​ ರೋಲ್​ ಎಂದೇ ಹೇಳಲಾಗುತ್ತಿದ್ದು, ಇದೀಗ ಈ ವಿಡಿಯೋ ನೋಡಿದರೆ ಅದು ನಿಜ ಎನ್ನುವುದು ತಿಳಿಯುತ್ತದೆ. ಇದಾಗಲೇ ಈ ಚಿತ್ರವನ್ನು ಹಾಲಿವುಡ್​ ರೀತಿಯಲ್ಲಿ ಕೂಡ ಶೂಟ್​ ಮಾಡಿರುವುದಾಗಿ ಚಿತ್ರತಂಡ ಹೇಳಿಕೊಂಡಿರುವ ಕಾರಣ ದೊಡ್ಡ ಮಟ್ಟದ ಯಶಸ್ಸು ಸಿಗುತ್ತದೆ ಎನ್ನುವ ನಿರೀಕ್ಷೆಯೂ ಇದೆ.

46
ಮೇಕಿಂಗ್​ ವಿಡಿಯೋ

ಇದೀಗ ಟಾಕ್ಸಿಕ್​ ಚಿತ್ರದ ಮೇಕಿಂಗ್​ ವಿಡಿಯೋ ಒಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಅದರಲ್ಲಿ ಕಾರಿನ ದೃಶ್ಯದ ಚಿತ್ರೀಕರಣವನ್ನೂ ಮಾಡಿರುವುದನ್ನು ತೋರಿಸಲಾಗಿದೆ. ಜೊತೆಗೆ ಡ್ಯಾಡ್​ ಈಸ್​ ಬ್ಯಾಕ್​ ಎನ್ನುವ ಡೈಲಾಗ್​ ಹೇಗೆ ಮಾಡಲಾಗಿದೆ ಎನ್ನುವುದನ್ನು ತೋರಿಸಲಾಗಿದೆ.

56
ಹೇರ್​ಸ್ಟೈಲ್​ ಹವಾ

ಇದಕ್ಕೂ ಮುನ್ನ ಯಶ್​ ಅವರ ಹೇರ್​ಸ್ಟೈಲ್​ ಹವಾ ಸೃಷ್ಟಿಸಿತ್ತು. ಕಳೆದ ಜನವರಿ 8 ರಂದು ಯಶ್​ ಅವರ ಬರ್ತ್​ಡೇ ದಿನವೇ ಟಾಕ್ಸಿಕ್​ ಚಿತ್ರ ಗ್ಲಿಂಪ್ಸ್ ಒಂದನ್ನು ಅನಾವರಣ ಮಾಡಲಾಗಿತ್ತು. ಅದರಲ್ಲಿ ​​ ಅವರನ್ನು ರಾಯ ಎಂದು ಪರಿಚಯಿಸಲಾಗಿತ್ತು. ಆ ಬಳಿಕ, ಫೆಬ್ರವರಿ 20ರಂದು ಟೀಸರ್​ ಬಿಡುಗಡೆಯಾಗಿತ್ತು. ಇದು ಸಾಕಷ್ಟು ಟೀಕೆಗಳನ್ನೂ ಎದುರಿಸಬೇಕಾಗಿ ಬಂದಿತ್ತು. ಉಳಿದೆಲ್ಲವನ್ನೂ ಬಿಟ್ಟು ಕಾರು ಡಾನ್ಸ್​ ಮಾಡುವುದೇ ಹೈಲೈಟ್​ ಆಗಿ, ಜನರು ವಿವಿಧ ಬಗೆಯ ಕಮೆಂಟ್​ ಹಾಕಲು ಶುರು ಮಾಡಿದ್ದರು. ಇದರ ಬಗ್ಗೆ ಪರ-ವಿರೋಧದ ನಿಲುವು ವ್ಯಕ್ತವಾಗಿತ್ತು.

66
ನಾಯಕಿಯರ ಬಗ್ಗೆ

ಅಂದಹಾಗೆ,ಚಿತ್ರದ ನಾಯಕಿಯರ ಬಗ್ಗೆ ಇದಾಗಲೇ ಕುತೂಹಲವೂ ಮೂಡಿದ್ದು, ಅದಕ್ಕೂ ಈಗ ಉತ್ತರ ಸಿಕ್ಕಿದೆ. ಮೆಲಿಸಾ ಪಾತ್ರದಲ್ಲಿ ನಟಿ ರುಕ್ಮಿಣಿ ವಸಂತ್, ಗಂಗಾ ಆಗಿ ನಯನತಾರಾ, ನಾದಿಯಾ ಪಾತ್ರದಲ್ಲಿ ಬಾಲಿವುಡ್​ ನಟಿ ಕಿಯಾರಾ ಅಡ್ವಾಣಿ, ಎಲಿಜಬೆತ್ ಪಾತ್ರದಲ್ಲಿ ಬಾಲಿವುಡ್​ನ ಹುಮಾ ಖುರೇಷಿ, ರೆಬೆಕಾ ಪಾತ್ರದಲ್ಲಿ ಬಾಲಿವುಡ್​​ ನಟಿ-ಗಾಯಕಿ ತಾರಾ ಸುತಾರಿಯಾ ಇದ್ದಾರೆ. ಇಷ್ಟೊಂದು ಮಂದಿ ಇರುವಾಗ ಒಬ್ಬರೇ ನಾಯಕಿ ಡೌಟ್​ ಎಂದೂ ಹೇಳಲಾಗುತ್ತಿದೆ. ಈ ಚಿತ್ರ ಗೀತು ಮೋಹನ್​​ದಾಸ್ ನಿರ್ದೇಶಿಸಿದ್ದು, ಕೆವಿಎನ್ ಪ್ರೊಡಕ್ಷನ್ ಜೊತೆಗೆ ಮಾನ್ಸ್ಟರ್ ಮೈಡ್ ಕ್ರಿಯೇಷನ್ಸ್ ಸೇರಿ ನಿರ್ಮಾಣ ಮಾಡಲಾಗಿದೆ. letsxottglobal ಇನ್​ಸ್ಟಾಗ್ರಾಮ್​ನಲ್ಲಿ ಇದನ್ನು ಶೇರ್​ ಮಾಡಲಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories