ಕನ್ನಡ ಚಿತ್ರರಂಗದ ಮಿಸ್ಟರ್ ಹಾಗೂ ಮಿಸಸ್ ರಾಮಚಾರಿ ಯಶ್ (Yash) ಮತ್ತು ರಾಧಿಕಾ ಪಂಡಿತ್ (Radhika Pandit) ಪುತ್ರಿಯಂದಿರ ದಿನಾಚರಣೆ ಆಚರಿಸಿದ್ದಾರೆ.
ಇಬ್ಬರೂ ಮಗಳ ಜೊತೆ ಕ್ಲಿಕ್ಕಿಸಿಕೊಂಡಿರುವ ಸೂಪರ್ ಫೋಟೋ ಹಂಚಿಕೊಂಡು, ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ. ಇವರ ಇನ್‌ಸ್ಟಾಗ್ರಾಂ (Instagram) ಪೋಸ್ಟ್ ವೈರಲ್ ಆಗುತ್ತಿದೆ.
'ನಾವೆಲ್ಲರೂ ಹೀಗೆ ನಗುತ್ತಿರುವುದಕ್ಕೆ ನೀನೇ ಕಾರಣ. ಸದಾ ನಿನ್ನನ್ನು ಪ್ರೀತಿಸುವೆ ಪುಟ್ಟ ಹುಡುಗಿ. ನನ್ನ ಪುಟ್ಟ ಬೆಸ್ಟ್ ಫ್ರೆಂಡ್ (little bestfriend). ಹ್ಯಾಪಿ ಡಾಟರ್ಸ್ ಡೇ' ಎಂದು ರಾಧಿಕಾ ಬರೆದುಕೊಂಡಿದ್ದಾರೆ.
'ನಾನು ಎಷ್ಟು ಹೊತ್ತು ಬೇಕಿದ್ದರೂ ನಿನ್ನ ಮಾತುಗಳನ್ನು ಕೇಳಿಸಿಕೊಂಡು ಕೂರುವೆ. ನೀನು ನಮಗೆ ಬ್ಲೆಸ್ಸಿಂಗ್ ಮಗಳೇ. ಹ್ಯಾಪಿ ಡಾಟರ್ಸ್ ಡೇ ಟು ಆಲ್ ದಿ ವಂಡರ್‌ಫುಡ್ ಡಾಟರ್ಸ್ ಇನ್ ದಿ ವರ್ಲ್ಡ್. ನೀವು ನಮ್ಮ ಲೈಫ್ ಸ್ಪೆಷಲ್ ಮಾಡುತ್ತೀರಿ,' ಎಂದು ಯಶ್ ಬರೆದುಕೊಂಡಿದ್ದಾರೆ.
ಯಶ್ ಹಂಚಿಕೊಂಡಿರುವ ಫೋಟೋದಲ್ಲಿ ಐರಾ (Ayra) ಇನ್ನೂ ಪುಟ್ಟ ಹುಡುಗಿ. ಸೋಫಾದ ಮೇಲೆ ಕುಳಿತು ಅಪ್ಪನ ಮುಖವನ್ನೇ ನೋಡುತ್ತಿದ್ದಾಳೆ.
ರಾಧಿಕಾ ಅಪ್ಲೋಡ್ ಮಾಡಿರುವ ಫೋಟೋದಲ್ಲಿ ಐರಾ ಫ್ಲೋರಲ್ ಔಟ್‌ಫಿಟ್‌ನಲ್ಲಿ (Outfit) ಮಿಂಚುತ್ತಿದ್ದಾರೆ. ಮತ್ತೊಂದು ಫೋಟೋದಲ್ಲಿ ಇಬ್ಬರು ಸೆಲ್ಫಿಗೆ ಫೋಸ್ ಕೊಟ್ಟಿದ್ದಾರೆ.
ಐರಾ ನೋಡಲು ಯಶ್ ತರಾನ ಅಥವಾ ರಾಧಿಕಾ ತರನಾ ಎಂದು ಪ್ರಶ್ನೆ ಮಾಡುತ್ತಿದ್ದವರಿಗೆ ಈ ಸೆಲ್ಫಿ ಕ್ಲಾರಿಟಿ ಕೊಟ್ಟಿದ್ದಾರೆ. ಸೆಲ್ಫಿ ನೋಡಿ ಐರಾ ಸೇಮ್ ರಾಧಿಕಾ ತರ ಇದ್ದಾಳೆಂದು ಎನಿಸುತ್ತಿದೆ.