ಲಾಕ್‌ಡೌನ್ ನಂತರ ಬಿಡುಗಡೆ ಆದ ಮೊದಲ ಬಿಗ್ ಬಜೆಟ್ ಸಿನಿಮಾ ACT 1978 ಚಿತ್ರಕ್ಕಾಗಿ ಬಿ.ಸುರೇಶ್ ಅವರು ಅತ್ಯುತ್ತಮ ಪೋಷಕ ಪಾತ್ರ ಪ್ರಶಸ್ತಿ ಗೆದ್ದಿದ್ದಾರೆ.
ಲಾಕ್‌ಡೌನ್ ಸಮಯದಲ್ಲಿ ಓಟಿಟಿಯಲ್ಲಿ ಸಿನಿ ರಸಿಕರಿಗೆ ಅತಿ ಹೆಚ್ಚು ಮನೋರಂಜನೆ ಕೊಟ್ಟ ಸಿನಿಮಾ ಲವ್ ಮಾಕ್ಟೇಲ್ ಬೆಸ್ಟ್ ಸಿನಿಮಾ ಆಫ್ 2020 ಪ್ರಶಸ್ತಿ ಪಡೆದುಕೊಂಡಿದೆ.
ನಟ ಪ್ರಜ್ವಲ್ ದೇವರಾಜ್, ಜೆಂಟಲ್‌ಮ್ಯಾನ್ ಚಿತ್ರದಿಂದ ಬೆಸ್ಟ್ ಲೀಡ್ ರೂಲ್ ಕ್ರಿಟಿಕ್ 2020 ಪ್ರಶಸ್ತಿ ಗೆದ್ದಿದ್ದಾರೆ. ನಟಿ ಖುಷ್ಬೂ ಈ ಪ್ರಶಸ್ತಿಯನ್ನು ನೀಡಿದ್ದಾರೆ.
ಓಟಿಟಿಯಲ್ಲಿ ಬಿಡುಗಡೆಯಾದ ಸಿನಿಮಾ ಫ್ರೆಂಚ್ ಬಿರಿಯಾನಿ ನಿರ್ದೇಶಕ ಪನ್ನಗಾಭರಣ ಬೆಸ್ಟ್ ಡೈರೆಕ್ಟರ್ 2020 ಅವಾರ್ಡ್ ಗೆದ್ದಿದ್ದಾರೆ. ನಟ ಸಾಯಿ ಕುಮಾರ್ ಈ ಅವಾರ್ಡ್ ನೀಡಿದ್ದಾರೆ.
ಪಾಪ್‌ಕಾರ್ನ್ ಮಂಕಿ ಟೈಗರ್ ಚಿತ್ರಕ್ಕೆ ನಟ ಧನಂಜಯ್ ಬೆಸ್ಟ್ ನಟ ಇನ್ ಲೀಡ್ ರೋಲ್ ಅವಾರ್ಡ್ ಗೆದ್ದಿದ್ದಾರೆ. ಈ ಚಿತ್ರದಲ್ಲಿ ನಿಮ್ಮ ಪಾತ್ರ ಸಾಕಷ್ಟು ಜನರ ಗಮನ ಸೆಳೆದಿದೆ, ಎಂದು ಸೈಮಾ ಕಾರ್ಯಕ್ರಮದಲ್ಲಿ ಹೇಳಲಾಗಿತ್ತು.
ಫ್ರೆಂಚ್ ಬಿರಿಯಾನಿ ಚಿತ್ರದಲ್ಲಿ ಎಲ್ಲರನ್ನೂ ಹೊಟ್ಟೆ ನೋವಾಗುವಷ್ಟು ನಗಿಸಿದ ರಂಗಾಯಣ ರಘು ಅವರು ಸೈಮಾ ಬೆಸ್ಟ್ ಕಾಮಿಡಿ ರೋಲ್ ಅವಾರ್ಡ್ ಗೆದ್ದಿದ್ದಾರೆ. ನಟ ದೇವರಾಜ್ ಪ್ರಶಸ್ತಿ ನೀಡಿದ್ದಾರೆ.
ಲವ್ ಮಾಕ್ಟೇಲ್ ನಿಧಿಮಾನ ಮಿಸ್ ಮಾಡೋಕೆ ಆಗುತ್ತಾ? ಸೈಮಾ ಬೆಸ್ಟ್ ನಟಿ ಲೋಡ್ ರೋಲ್ 2020 ಪ್ರಶಸ್ತಿಯನ್ನು ಮಿಲನಾ ನಾಗರಾಜ್ ಪಡೆದುಕೊಂಡಿದ್ದಾರೆ.
ಲವ್ ಮಾಕ್ಟೇಲ್ ಚಿತ್ರದ ಮೂಲಕ ಎಂಟ್ರಿ ಕೊಟ್ಟ ಅಮೃತಾ ಐಯ್ಯರ್ ಸೈಮಾ ಬೆಸ್ಟ್ ಸಪೂರ್ಟಿಂಗ್ ರೋಲ್ 2020 ಪ್ರಶಸ್ತಿ ಗೆದ್ದಿದ್ದಾರೆ
ಪಾಪ್‌ಕಾರ್ನ್ ಮಂಕಿ ಟೈಗರ್ ಚಿತ್ರದ ಮೂಲಕ ಎಂಟ್ರಿ ಕೊಟ್ಟ ಸಪ್ತಮಿ ಗೌಡ ಬೆಸ್ಟ್ ಡೆಬ್ಯೂ ನಟಿ ಆಫ್ 2020 ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಅಜನೀಶ್ ಲೋಕ್‌ನಾಥ್, ದಿಯಾ ಚಿತ್ರಕ್ಕೆ ಬೆಸ್ಟ್ ಸಂಗೀತ ನಿರ್ದೇಶಕ 2020 ಪ್ರಶಸ್ತಿ ಪಡೆದುಕೊಂಡಿದ್ದಾರೆ. ನಟಿ ಶ್ರುತಿ ಹರಿಹರನ್ ಈ ಪ್ರಶಸ್ತಿ ನೀಡಿದ್ದಾರೆ.
ಜೆಂಟಲ್‌ಮ್ಯಾನ್ ಚಿತ್ರದ ಮರಳಿ ಮನಸ್ಸಾಗಿದೆ ಹಾಡಿಗೆ ಸಂಜಿತ್ ಹೆಗ್ಡೆ ಬೆಸ್ಟ್ ಪ್ಲೇ ಬ್ಯಾಕ್ ಸಿಂಗರ್ ಆಫ್ 2020 ಪ್ರಶಸ್ತಿ ಗೆದ್ದಿದ್ದಾರೆ.
ಫ್ರೆಂಚ್ ಬಿರಿಯಾನಿ ಚಿತ್ರದ ದಿ ಬೆಂಗಳೂರು ಹಾಡಿಗೆ ನಟ ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಬೆಸ್ಟ್ ಪ್ಲೇ ಬ್ಯಾಕ್ ಸಿಂಗರ್ ಫಿಮೇಲ್ 2020 ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಯಜಮಾನ ಚಿತ್ರಕ್ಕೆ ನಟಿ ರಶ್ಮಿಕಾ ಮಂದಣ್ಣ ಬೆಸ್ಟ್ ಸೈಮಾ ಲೀಡ್ ರೋಲ್ ನಟಿ ಕ್ರಿಟಿಕ್ 2020 ಪ್ರಶಸ್ತಿ ಗೆದ್ದಿದ್ದಾರೆ.
ಯಜಮಾನ ಚಿತ್ರದ ಸೂಪರ್ ಕಾಮಿಡಿ ಮಾಡಿರುವ ಸಾಧುಕೋಕಿಲ ಅವರು ಬೆಸ್ಟ್ ಕಾಮಿಡಿ ರೋಲ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಕನ್ನಡ ಚಿತ್ರರಂಗ ಕಂಡಂತ ಅದ್ಭುತ ಹಾಸ್ಯ ನಟ ಸಾಧು ಮಹಾರಾಜ್.
ಅಯ್ಯಷ್ಮಾನ್ ಭವ ಚಿತ್ರಕ್ಕೆ ನಟಿ ರಚಿತಾ ರಾಮ್ ಬೆಸ್ಟ್ ನಟಿ ಲೀಡಿಂಗ್ ರೋಲ್ ಪ್ರಶಸ್ತಿ ಗೆದ್ದಿದ್ದಾರೆ. ನಟ ದೇವರಾಜ್ ಈ ಪ್ರಶಸ್ತಿ ನೀಡಿದ್ದಾರೆ.
ಭರಾಟೆ ಚಿತ್ರಕ್ಕೆ ನಟ ಸಾಯಿ ಕುಮಾರ್ ಅವರು ಬೆಸ್ಟ್ ನೆಗಟಿವ್ ರೋಲ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ನಟಿ ಲಕ್ಷ್ಮಿ ರೈ ಪ್ರಶಸ್ತಿ ನೀಡಿದ್ದಾರೆ.
ಮನೆ ಮಾರಾಟಕ್ಕಿದೆ ಚಿತ್ರಕ್ಕೆ ನಟಿ ಕಾರುಣ್ಯಾ ರಾಮ್ ಬೆಸ್ಟ್ ಸಪೋರ್ಟಿಂಗ್ ರೋಲ್ ಅವಾರ್ಡ್ ಗೆದ್ದಿದ್ದಾರೆ. ಪಿಂಕ್ ಕಲರ್ ಗೌನ್‌ನಲ್ಲಿ ಕರುಣ್ಯಾ ಕಂಗೊಳ್ಳಿಸುತ್ತಿದ್ದಾರೆ.
ಅಮರ್ ಚಿತ್ರಕ್ಕೆ ನಟ ಅಭಿಷೇಕ್ ಅಂಬರೀಶ್ ಬೆಸ್ಟ್ ಡೆಬ್ಯೂ ನಟ ಪ್ರಶಸ್ತಿ ಗೆದ್ದಿದ್ದಾರೆ. ಮನೆಗೆ ಪ್ರಶಸ್ತಿ ತಂದು ತಂದೆ ಫೋಟೋ ಮುಂದಿಟ್ಟು ಫೋಟೋ ಹಂಚಿಕೊಂಡಿದ್ದಾರೆ.